ಭಾರತದಲ್ಲಿ 2014 ಸ್ಕೋಡಾ ಸೂಪರ್ಬ್ ಲಾಂಚ್

By Nagaraja

2014 ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ವರ್ಷನ್ ಭಾರತದಲ್ಲಿ ಭರ್ಜರಿ ಲಾಂಚ್ ಆಗಿದೆ. ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ನೂತನ ಸ್ಕೋಡಾ ಸೂಪರ್ಬ್‌ನಲ್ಲಿ ಕೆಲವೊಂದು ಬದಲಾವಣೆ ಕಂಡುಬಂದಿದೆ. ನೂತನ 2014 ಸ್ಕೋಡಾ ಸೂಪರ್ಬ್ ದೆಹಲಿ ಎಕ್ಸ್ ಶೋ ರೂಂ ದರ 18.87 ಲಕ್ಷ ರು.ಗಳಾಗಿವೆ. ಇದು ಇಂಟಿರಿಯರ್ ಸಹಿತ ಎಕ್ಸ್‌ಟೀರಿಯರ್ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹಾಗಿದ್ದರೂ ನೂತನ ಸ್ಕೋಡ್ ಸೂಪರ್ಬ್ ಫೇಸ್‌ಲಿಫ್ಟ್ ವರ್ಷನ್ ಕಾರಿನ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿದೆ. ಇದು ಹಿಂದಿನ ಆವೃತ್ತಿಗೆ ಸಮಾನವಾದ 1.8 ಲೀಟರ್ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಟ್ರಾನ್ಸ್‌ಮಿಷನ್‌ನಲ್ಲೂ ಬದಲಾವಣೆ ಕಂಡುಬಂದಿಲ್ಲ.

ಮುಂದುಗಡೆಯಲ್ಲಿ ಬೈ-ಕ್ಸೆನಾನ್ ಹೆಡ್ ಲ್ಯಾಂಪ್ ಜತೆ ಇಂಟೆಗ್ರೇಟಡ್ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಹೊಸತಾದ ಫ್ಯಾಮಿಲಿ ಬಟರ್‌ಫ್ಲೈ ಗ್ರಿಲ್ ಮತ್ತು ಪರಿಷ್ಕೃತ ಸ್ಕೋಡಾ ಲೊಗೊ ಹಾಗೂ ಬಂಪರ್ ಇರಲಿದೆ.

ಕಾರಿನ ಹಿಂದುಗಡೆ ಎಲ್‌ಇಡಿ ಲೈಟ್ ಲ್ಯಾಂಪ್ ಹಾಗೂ ಹೊಸತಾದ ಬೂಟ್ ಲಿಡ್ ಮತ್ತು ನೂತನ ನಂಬರ್ ಪ್ಲೇಟ್ ಪಡೆದುಕೊಳ್ಳಲಿದೆ. ಇದು ಹಿಂದುಗಡೆಯಿಂದ ಆಡಿ ಕಾರಿನ ಅನುಭವ ನೀಡಲಿದೆ. ಅಂತಿಮವಾಗಿ 10 ಸ್ಪೋಕ್ ಅಲಾಯ್ ವೀಲ್ ಕೂಡಾ ಪಡೆಯಲಿದೆ.

ಇನ್ನು ಕಾರಿನೊಳಗೆ ಹೊಸತಾದ ಸ್ಟೀರಿಂಗ್ ವೀಲ್ ಜತೆ ಮುಂದುವರಿದ ಮಾಹಿತಿ ಮನರಂಜನಾ ಸಿಸ್ಟಂ ಇರಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಸ್ಕೋಡಾ ಸೂಪರ್ಬ್ 1.8 ಟಿಎಸ್‌ಐ ಎಂಟಿ ಆಂಬಿಷನ್: 18.87 ಲಕ್ಷ ರು.
  • ಸ್ಕೋಡಾ ಸೂಪರ್ಬ್ 1.8 ಟಿಎಸ್‌ಐ ಎಂಟಿ ಎಲೆಗನ್ಸ್: 20.65 ಲಕ್ಷ ರು.
  • ಸ್ಕೋಡಾ ಸೂಪರ್ಬ್ 1.8 ಟಿಎಸ್‌ಐ ಎಟಿ ಎಲೆಗನ್ಸ್: 22.27 ಲಕ್ಷ ರು.
  • ಸ್ಕೋಡಾ ಸೂಪರ್ಬ್ 2.0 ಟಿಡಿಐ ಎಟಿ ಆಂಬಿಷನ್: 23.43 ಲಕ್ಷ ರು.
  • ಸ್ಕೋಡಾ ಸೂಪರ್ಬ್ 2.0 ಟಿಡಿಐ ಎಂಟಿ ಎಲೆಗನ್ಸ್: 25.20 ಲಕ್ಷ ರು.
Most Read Articles

Kannada
English summary
The 2014 Skoda Superb facelift model has been launched in India. Showcased at the Auto Expo 2014, the new Skoda Superb comes with several minor updates to the exterior and interior of the car. The 2014 Skoda Superb is priced at INR 18.87 lakhs (Ex-showroom, Delhi).
Story first published: Tuesday, February 11, 2014, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X