ಅಧಿಕೃತ; ಜುಲೈ 15ರಂದು ಹೊಸ ಫೋಕ್ಸ್‌ವ್ಯಾಗನ್ ಪೊಲೊ ಲಾಂಚ್

Written By:

ಇದೀಗ ಎಲ್ಲ ಅಂತಿಮಗೊಂಡಿದ್ದು, ಜಗತ್ತಿನ ಅತ್ಯಂತ ಸುಂದರ ಕಾರುಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಪೊಲೊ ಫೇಸ್‌ಲಿಫ್ಟ್ ಆವೃತ್ತಿಯು ಭಾರತದಲ್ಲಿ ಮುಂಬರುವ ಜುಲೈ 15ರಂದು ಬಿಡುಗಡೆಯಾಗಲಿದೆ.

ಈ ಸಂಬಂಧ ಫೋಕ್ಸ್‌ವ್ಯಾಗನ್ ಇಂಡಿಯಾ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಹೊಸ ಪೊಲೊ ಬಿಡುಗಡೆ ಕುರಿತು ಹಲವಾರು ವದಂತಿಗಳು ಎದ್ದಿದ್ದವು. ಇವೆಲ್ಲಕ್ಕೂ ಇದೀಗ ಕಡಿವಾಣ ಬಿದ್ದಂತಾಗಿದೆ.

2014 Volkswagen Polo

ಹೊರಮೈ

ಯುರೋಪ್ ಆವೃತ್ತಿಯಿಂದ ಸ್ಪೂರ್ತಿ ಪಡೆದಿರುವ 2014 ಪೊಲೊ, ಹೊಸತಾದ ಫ್ರಂಟ್ ಹಾಗೂ ರಿಯರ್ ಬಂಪರುಗಳನ್ನು ಪಡೆಯಲಿದೆ. ಅದೇ ರೀತಿ ಪರಿಷ್ಕೃತ ಹೆಡ್‌ಲೈಟ್, ಗ್ರಿಲ್ ಜತೆ ಕ್ರೋಮ್ ಸ್ಟ್ರಿಪ್, ಸುಧಾರಿತ ಟೈಲ್ ಟೈಲ್, ಹೊಸ ಡಿಟೈಲಿಂಗ್ ಮತ್ತು ನೂತನ ಎಕ್ಸ್‌ಟೀರಿಯರ್ ಬಣ್ಣಗಳ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ.

ಒಳಮೈ

ಇನ್ನು ಕಾರಿನೊಳಗೆ ಹೊಸತಾದ ಆಡಿಯೋ ಸಿಸ್ಟಂ ಜತೆ ಬ್ಲೂಟೂತ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, 3 ಸ್ಪೋಕ್ ಅಲಾಯ್ ವೀಲ್, ಹೊಸ ಎಸಿ ವೆಂಟ್ಸ್ ಹಾಗೂ ಕ್ಲೈಮೇಟ್ ಕಂಟ್ರೋಲ್ ಸೌಲಭ್ಯವಿರಲಿದೆ.

ಎಂಜಿನ್

ನೂತನ ಪೊಲೊ 1.5 ಲೀಟರ್ ಡೀಸೆಲ್ ಎಂಜಿನ್ (ಹಿಂದಿನ ಮಾದರಿ - 1.6 ಲೀ.) ಹೊಂದಿರಲಿದೆ. ಇದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ. ಅದೇ ಹೊತ್ತಿಗೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಉಳಿಸಿಕೊಳ್ಳಲಿದೆ. ಹಾಗಿದ್ದರೂ ಹೆಚ್ಚಿನ ಇಂಧನ ಕ್ಷಮತೆಗಾಗಿ ಎಂಜಿನ್ ಟ್ಯೂನ್ ಮಾಡಲಾಗುವುದು.

English summary
2014 Volkswagen Polo Facelift Coming on July 15
Story first published: Wednesday, July 2, 2014, 16:25 [IST]
Please Wait while comments are loading...

Latest Photos