2015 ಷೆವರ್ಲೆ ಕ್ರೂಝ್ ಚೀನಾ ಪ್ರವೇಶ; ಭಾರತದಲ್ಲಿ ಹೆಚ್ಚಿದ ನಿರೀಕ್ಷೆ

By Nagaraja

ಕಳೆದ ಕೆಲವು ಸಮಯಗಳಿಂದ ಹೆಚ್ಚು ಗಮನ ಕೇಂದ್ರಿತವಾಗಿರುವ 2015 ಷೆವರ್ಲೆ ಕ್ರೂಝ್ ನೆರೆಯ ಚೀನಾ ರಾಷ್ಟ್ರದಲ್ಲಿ ಬಿಡುಗಡೆಗೊಂಡಿದೆ. 2014 ಬೀಜಿಂಗ್ ಮೋಟಾರು ಶೋದಲ್ಲೂ ಪ್ರದರ್ಶನ ಕಂಡಿದ್ದ 2015 ಕ್ರೂಝ್ ಬೇಸ್ ವೆರಿಯಂಟ್ ಚೀನಾದಲ್ಲಿ 10.80 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅದೇ ರೀತಿ ಟಾಪ್ ಎಂಡ್ ವೆರಿಯಂಟ್‌ಗೆ 16.73 ಲಕ್ಷ ರು.ಗಳಾಗಿರಲಿದೆ.

ಸದ್ಯ ಚೀನಾ ಮಾರುಕಟ್ಟೆದಲ್ಲಿ ಮಾತ್ರ ಲಭ್ಯವಾಗಲಿರುವ 2015 ಷೆವರ್ಲೆ ಕ್ರೂಝ್ ನಿಕಟ ಭವಿಷ್ಯದಲ್ಲೇ ಇತರ ರಾಷ್ಟ್ರಗಳಿಗೂ ಪ್ರವೇಶಿಸಲಿದೆ ಎಂದು ಅಮೆರಿಕ ಮೂಲದ ಸಂಸ್ಥೆಯು ಸ್ಪಷ್ಟಪಡಿಸಿದೆ. ಇದು ಭಾರತೀಯರಲ್ಲಿ ನಿರೀಕ್ಷೆ ಇಮ್ಮಡಿಗೊಳಿಸಿದೆ.

2015 Chevrolet Cruze

2015 ಷೆವರ್ಲೆ ಕ್ರೂಝ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ

1.4 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ (148 ಬಿಎಚ್‌ಪಿ, 235 ಎನ್ಎಂ ಪೀಕ್ ಟಾರ್ಕ್)
1.5 ಲೀಟರ್ ನೈಸರ್ಗಿಕ ಚೋಷಿತ ಪೆಟ್ರೋಲ್ ಎಂಜಿನ್ (112 ಬಿಎಚ್‌ಪಿ, 146 ಎನ್ಎಂ ಪೀಕ್ ಟಾರ್ಕ್)
2.0 ಲೀಟರ್ ಟರ್ಬೊಚಾರ್ಜ್ಡ್ ಕ್ಲೀನ್ ಡ್ರೈವ್ ಡೀಸೆಲ್ ಎಂಜಿನ್ (ಪವರ್ ಮಾಹಿತಿ ಬಿಡುಗಡೆಯಾಗಿಲ್ಲ)

2015 Chevrolet Cruze

ಹೊಸ ಕ್ರೂಝ್ ಕಾರಿನೊಳಗೂ ಹೊರಗೂ ಹೆಚ್ಚಿನ ಬದಲಾವಣೆ ಕಂಡುಬರಲಿದೆ. ಇದು ಚೂಪಾದ ಹೆಡ್‌ಲೈಟ್, ಫಾಂಗ್ ಲ್ಯಾಂಪ್ ಜೊತೆಗೆ ಪರಿಷ್ಕೃತ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ. ಹಾಗೆಯೇ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಸಹ ಕಂಡುಬರಲಿದೆ.

ಇನ್ನು ಕಾರಿನೊಳಗೆ ಟು ಟೋನ್ ಬ್ಲ್ಯಾಕ್ ಮತ್ತು ಬ್ರೌನ್ ಕಲರ್ ಇರಲಿದೆ. ಎಸಿ ವೆಂಟ್ಸ್ ಪರಿಷ್ಕೃತವಾಗಲಿದ್ದು ಎಲ್ಲ ಹೊಸತನದಿಂದ ಕೂಡಿದ ತ್ರಿ ಸ್ಪೋಕ್ ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್ ಮತ್ತು ಏಳು ಬಟನ್ ಸೌಲಭ್ಯಗಳು ಚಾಲಕನ ಪಯಣವನ್ನು ಇನ್ನಷ್ಟು ಆನಂದದಾಯಕವಾಗಿಸಲಿದೆ. ಇಲ್ಲಿ ಗೇರ್ ನಾಬ್ ಮತ್ತು ಸೆಂಟ್ರಾಲ್ ಕನ್ಸಾಲ್ ಸಹ ಸುಧಾರಣೆ ಕಂಡುಬರಲಿದೆ.

Most Read Articles

Kannada
English summary
The Cruze has been around for a while and Chevrolet had showcased a refreshed model at 2014 Beijing Motor Show. The new model is supposed to be launched in global markets. The American based automobile giant has introduced its 2015 Cruze for the Chinese market.
Story first published: Monday, September 1, 2014, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X