ಆಡಿ-ಗೂಗಲ್‌ನಿಂದ ಆಂಡ್ರಾಯ್ಡ್ ಇನ್ಫೋಟೈನ್‌ಮೆಂಟ್ ಸೇವೆ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ, ಸಾಮಾಜಿಕ ಜಾಲತಾಣ ಗೂಗಲ್‌ನೊಂದಿಗೆ ಕೈಜೋಡಿಸಿಕೊಂಡು ನೂತನ ಕಾರು ಮಾಹಿತಿ ಹಾಗೂ ಮನರಂಜನಾ ಸೇವೆಯೊಂದನ್ನು (Infotainment system) ಅಭಿವೃದ್ಧಿಪಡಿಸಲಿದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ಇದು ಆಂಡ್ರಾಯ್ಡ್ ಓಪರೇಟಿಂಗ್ ಸಿಸ್ಟಂನಿಂದ ನಿಯಂತ್ರಿಸಲ್ಪಡಲಿದೆ.

ಈ ಸಂಬಂಧ ಜನವರಿ 7ರಂದು ಲಾಸ್ ವೇಗಾಸ್‌ನಲ್ಲಿ ನಡೆಯಲಿರುವ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್) 2014ರಲ್ಲಿ ಅಧಿಕೃತ ಘೋಷಣೆಯಾಗಲಿದೆ. ಇದರಂತೆ ಯೋಜನೆಯ ಅಭಿವೃದ್ಧಿಯಲ್ಲಿ ತೊಡಗಿರುವ ಆಡಿ ಹಾಗೂ ಗೂಗಲ್, ನಿವಿಡಾದಂತಹ ತಂತ್ರಜ್ಞಾನ ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವ ಬಗ್ಗೆಯೂ ಮಾಹಿತಿಯಿದೆ.

Infotainment system

ಆಂಡ್ರಾಯ್ಡ್ ನಿಯಂತ್ರಿತ ಆಡಿ ಗೂಗಲ್ ಮಾಹಿತಿ ಹಾಗೂ ಮನರಂಜನಾ ವ್ಯವಸ್ಥೆಯು ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಂತೆ ಕಾರ್ಯಚರಿಸಲಿದ್ದು, ಗೂಗಲ್ ಮ್ಯೂಸಿಕ್ ಹಾಗೂ ವೀಡಿಯೋ ಹಾಗೂ ನೇವಿಗೇಷನ್ ಜತೆಗೆ ಹಲವಾರು ಅಪ್ಲೀಕೇಷನ್‌ಗಳನ್ನು ಓಡಿಸಲು ನೆರವಾಗಲಿದೆ.

ಇದು ಆಪಲ್ ಐಒಎಸ್‌ಗಳಿಗೆ ಸ್ಪರ್ಧೆ ಒಡ್ಡಲಿದೆ. ಆಪಲ್ ಐಒಎಸ್ ವ್ಯವಸ್ಥೆಯು ಐಮೆಸೇಜ್, ಐಸ್ ಫ್ರಿ ಸಿರಿ ಆಕ್ಟಿವೇಷನ್, ಹ್ಯಾಂಡ್ಸ್ ಫ್ರಿ ಟೆಲಿಫೋನ್ ಕಮಾಂಡ್, ಸ್ಯಾಟಲೈಟ್ ನೇವಿಗೇಷನ್, ಮ್ಯೂಸಿಕ್ ಕಂಟ್ರೋಲ್‌ಗಳಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಅಲ್ಲದೆ ಈಗಾಗಲೇ ಮರ್ಸಿಡಿಸ್ ಬೆಂಝ್, ಹೋಂಡಾ, ಜನರಲ್ ಮೋಟಾರ್ಸ್ ಮತ್ತು ಬಿಎಂಡಬ್ಲ್ಯು ಜತೆ ಪಾಲುದಾರಿಕೆಯನ್ನು ಘೋಷಿಸಿದೆ.

English summary
German car major Audi, also the number one luxury carmaker in India, is rumored to be working together with tech giant Google in developing car infotainment systems that run on the latter's Android operating system.
Story first published: Thursday, January 2, 2014, 12:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark