ಆಡಿಯಿಂದ ದರ ಏರಿಕೆ ಘೋಷಣೆ

Written By:

ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ ಇಂಡಿಯಾ, ತನ್ನೆಲ್ಲ ಮಾದರಿಗಳಿಗೆ ಶೇಕಡಾ 3ರಷ್ಟು ದರ ಏರಿಕೆಗೊಳಿಸುತ್ತಿರುವುದಾಗಿ ಘೋಷಿಸಿದೆ. ನೂತನ ದರ ನೀತಿಯು 2014 ಮೇ 1ರಂದು ಜಾರಿಗೆ ಬರಲಿದೆ.

ಅಮೆರಿಕ ಡಾಲರ್ ಎದುರು ರುಪಾಯಿ ಏರಿಳಿತದಿಂದಾಗಿ ಉಂಟಾಗುತ್ತಿರುವ ನಕಾರತ್ಮಕ ಪರಿಣಾಮದಿಂದಾಗಿ ದರ ಏರಿಕೆಗೊಳಿಸುವುದು ಅನಿವಾರ್ಯವಾಗಿದೆ ಎಂದು ಆಡಿ ತಿಳಿಸಿದೆ.

audi

ಭಾರತದಲ್ಲಿ ಲಭ್ಯವಿರುವ ಆಡಿ ವೆರಿಯಂಟ್‌ಗಳು ಇಂತಿದೆ: ಆಡಿ ಎ4, ಆಡಿ ಎ6, ಆಡಿ ಎ7 ಸ್ಪೋರ್ಟ್ಸ್‌ಬ್ಯಾಕ್, ಆಡಿ ಎ8ಎಲ್, ಆಡಿ ಕ್ಯೂ3 ಎಸ್, ಆಡಿ ಕ್ಯೂ3, ಆಡಿ ಕ್ಯೂ5, ಆಡಿ ಕ್ಯೂ7, ಆಡಿ ಎಸ್4, ಆಡಿ ಎಸ್6, ಆಡಿ ಆರ್‌ಎಸ್ 5 ಕೂಪೆ, ಆಡಿ ಆರ್‌ಎಸ್ 7 ಸ್ಪೋರ್ಟ್ಸ್ ಬ್ಯಾಕ್, ಆಡಿ ಟಿಟಿ ಕೂಪೆ, ಸೂಪರ್ ಸ್ಪೋರ್ಟ್ಸ್ ಕಾರು ಆಡಿ ಆರ್8, ಆಡಿ ಆರ್8 ಸ್ಪೈಡರ್ ಮತ್ತು ಆಡಿ ಆರ್8 ವಿ10 ಪ್ಲಸ್.

2013ನೇ ಸಾಲಿನಲ್ಲಿ ವರ್ಷವೊಂದರಲ್ಲಿ 10,000 ಯುನಿಟ್ ಮಾರಾಟ ಗಿಟ್ಟಿಸಿಕೊಂಡಿರುವ ಮೊದಲ ಐಷಾರಾಮಿ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆಡಿ ತ್ರೈಮಾಸಿಕ ಜತೆಗೆ ಮಾಸಿಕ ಮಾರಾಟದಲ್ಲೂ ಅತ್ಯಧಿಕ ಮಾರಾಟವನ್ನು ಕಾಯ್ದುಕೊಂಡಿತ್ತು.

English summary
Audi India, the country's largest luxury car manufacturer, has announced a price hike for its vehicles sold in India. Prices of Audi models sold here are set to go up by nearly 3 percent
Story first published: Thursday, April 17, 2014, 12:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark