ಹ್ಯಾಟ್ರಿಕ್ ಸಾಧನೆ ಮಾಡಿದ ಜರ್ಮನಿಯ ಐಷಾರಾಮಿ ಆಡಿ

Written By:

ಕಳೆದ ವರ್ಷಾಂತ್ಯದಲ್ಲಿ 10,000 ಯುನಿಟ್‌ಗಳ ಮಾರಾಟದ ಗುರಿಯನ್ನು ದಾಟಿ ನಿಂತಿದ್ದ ಆಡಿ, ಭಾರತದಲ್ಲಿ ಐಷಾರಾಮಿ ಕಾರು ತಯಾರಕ ಸಂಸ್ಥೆಗಳ ಪೈಕಿ ಇಂತಹದೊಂದು ಸಾಧನೆ ಮಾಡಿದ ಮೊದಲ ಸಂಸ್ಥೆ ಎನಿಸಿಕೊಂಡಿತ್ತು.

2014ನೇ ಸಾಲಿನಲ್ಲೂ ಇದೇ ಆವೇಗ ಕಾಪಾಡಿಕೊಂಡಿರುವ ದೇಶದ ಅತಿದೊಡ್ಡ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ, ಹ್ಯಾಟ್ರಿಕ್ ಸಾಧನೆ ಮಾಡಿದೆ. ಅದೇನಂತೀರಾ?

Audi Sales Report
• ಇದುವರೆಗಿನ ಅತ್ಯುತ್ತಮ ಮಾಸಿಕ ಮಾರಾಟ: 1404 ಯುನಿಟ್ (ಮಾರ್ಚ್ 2014)
• ಇದುವರೆಗಿನ ಅತ್ಯುತ್ತಮ ತ್ರೈಮಾಸಿಕ ಮಾರಾಟ: 2740 ಯುನಿಟ್ (ಜನವರಿ-ಮಾರ್ಚ್ 2014)
• ಇದುವರೆಗಿನ ಅತ್ಯುತ್ತಮ ವಾರ್ಷಿಕ ಮಾರಾಟ: 10,126 ಯುನಿಟ್ (2013-14ನೇ ಆರ್ಥಿಕ ಸಾಲಿನಲ್ಲಿ)

ಕಳೆದ ಆರ್ಥಿಕ ಸಾಲಿನಲ್ಲಿ 9350 ಯುನಿಟ್ ಮಾರಾಟ ಕಂಡುಕೊಂಡಿದ್ದ ಆಡಿ ಈ ಬಾರಿ 10,126 ಯುನಿಟ್ ಸೇಲ್ಸ್ ಗಿಟ್ಟಿಸಿಕೊಳ್ಳುವ ಮೂಲಕ ದೇಶದ ಪ್ರೀಮಿಯಂ ಕಾರುಗಳಲ್ಲಿ ಹೊಸ ಸಾಧನೆ ಮೆರೆದಿದೆ. ಇನ್ನು ಈಗಾಗಲೇ ಜನವರಿಯಿಂದ ಮಾರ್ಚ್ ತಿಂಗಳ ವರೆಗೆ 2740 ಯುನಿಟ್ ಮಾರಾಟ ಕಂಡುಕೊಳ್ಳುವಲ್ಲಿ ಯಶ ಕಂಡಿದೆ. ಕಳೆದ ಬಾರಿಯಿದು 2616 ಯುನಿಟ್‌ಗಳಾಗಿದ್ದವು.

ಅಂತಿಮವಾಗಿ ಮಾಸಿಕ ಮಾರಾಟ ಗಮನಿಸಿದಾಗಲೂ ಮಾರ್ಚ್ ತಿಂಗಳಲ್ಲಿ ಇದುವರೆಗಿನ ದಾಖಲೆ ಮುರಿಯುವಲ್ಲಿ ಆಡಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ ಆಡಿ, 1404 ಮಾರಾಟ ಸಾಧಿಸಿದೆ. ಕಳೆದ ವರ್ಷವಿದು 1104 ಯುನಿಟ್‌ಗಳಾಗಿದ್ದವು. ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇಕಡಾ 18ರಷ್ಟು ವೃದ್ಧಿ ದಾಖಲಿಸಿದೆ.

ಮಿಸ್ ಮಾಡದಿರಿ: ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
In 2014 Audi continues its bullish run in India as the country's largest luxury car manufacturer in terms of sales by setting three new sales record, these being
Story first published: Friday, April 4, 2014, 15:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark