ಬಿಎಂಡಬ್ಲ್ಯು 7 ಸಿರೀಸ್ ಸಿಗ್ನೇಚರ್ ಎಡಿಷನ್ ಭಾರತದಲ್ಲಿ ಲಾಂಚ್

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಇತ್ತೀಚೆಗಷ್ಟೇ 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ 7 ಸಿರೀಸ್ ಸಿಗ್ನೇಚರ್ ಎಡಿಷನ್ ಬಿಡುಗಡೆ ಮಾಡಲು ಸಂಸ್ಥೆ ನಿರ್ಧರಿಸಿದೆ.

2014 ಬಿಎಂಡಬ್ಲ್ಯು ಇಂಡಿಯಾ ಬ್ರೈಡಲ್ ಫ್ಯಾಶನ್ ವೀಕ್‌ನಲ್ಲಿ ನೂತನ ಕಾರು ಅನಾವರಣಗೊಂಡಿದೆ. ಇದರ ಎಕ್ಸ್ ಶೋ ರೂಂ ದರ 1.22 ಕೋಟಿ ರು.ಗಳಾಗಿರಲಿದೆ.

ಸಾಮಾನ್ಯ ಆವೃತ್ತಿಗಿಂತಲೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಸ ವರ್ಷನ್ ಪಡೆದುಕೊಳ್ಳಲಿದೆ. ಅಂದ ಹಾಗೆ ಸುನೀತ್ ವರ್ಮಾ ನೂತನ ಕಾರನ್ನು ಅನಾವರಣಗೊಳಿಸಿದ್ದರು. 7 ಸಿರೀಸ್ 730ಎಲ್‌ಡಿ ಮಾದರಿಯಲ್ಲಿ ಮಾತ್ರ ಇದು ಲಭ್ಯವಿರಲಿದೆ. ಅಲ್ಲದೆ ಸೀಮಿತ ಆವೃತ್ತಿಯಲ್ಲಿ ಮಾತ್ರ ಮಾರಾಟವಾಗಲಿದೆ.

ಬಿಎಂಡಬ್ಲ್ಯು 7 ಸಿರೀಸ್ ಸಿಗ್ನೇಚರ್ ಎಡಿಷನ್ 3.0 ಲೀಟರ್ ಡೀಸೆಲ್ ಟ್ವಿನ್ ಟರ್ಬೊ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 258 ಅಶ್ವಶಕ್ತಿ (560 ಎನ್‌ಎಂ ಪೀಕ್ ಟಾರ್ಕ್) ಉತ್ಪಾದಿಸಲಿದೆ.

BMW

ಪ್ರಸ್ತುತ ಎಂಜಿನ್ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಹೊಂದಿರಲಿದೆ. ಅಂತೆಯೇ 6.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಆಕ್ಟಿವ್ ಸ್ಟೀರಿಂಗ್ ವೈಶಿಷ್ಟ್ಯದೊಂದಿಗೆ ಹೊಸ ಸಿಗ್ನೇಚರ್ ಎಡಿಷನ್ ಆಗಮನವಾಗಿದೆ. ಅಲ್ಲದೆ ರಿಯರ್ ರೀಡಿಂಗ್ ಲೈಟ್ ಇನ್ನು ಒಳಗಡೆ ನಪ್ಪ ಲೆಥರ್ ಮತ್ತು ಮರದ ಹೋದಿಕೆಯು ಇನ್ನಷ್ಟು ಪ್ರೀಮಿಯಂ ಲುಕ್ ನೀಡಲಿದೆ.

ಅಷ್ಟೇ ಅಲ್ಲದೆ 1200 ವ್ಯಾಟ್ ಸಾಮರ್ಥ್ಯದ ಬ್ಯಾಂಗ್ ಆಂಡ್ ಒಲುಫ್ಸೆನ್ ಸೌರಂಡ್ ಮ್ಯೂಸಿಕ್ ಸಿಸ್ಟಂ ಸಹ ಹೊಂದಿರಲಿದ್ದು, ಕ್ಯಾಬಿನ್‌ನಲ್ಲೇ 16 ಸ್ಪೀಕರುಗಳನ್ನು ಲಗತ್ತಿಸಲಾಗಿದೆ.

English summary
German luxury car manufacturer has recently launched its 7-Series ActiveHybrid in India. BMW India has now decided to launch a Signature Edition of its 7-Series. The new version by BMW was revealed at the 2014 BMW India Bridal Fashion Week.
Story first published: Thursday, August 14, 2014, 9:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark