2019ರ ವೇಳೆಗೆ ಚೀನಾ ಅತ್ಯಂತ ದೊಡ್ಡ ಎಲೆಕ್ಟ್ರಿಕ್ ಮಾರುಕಟ್ಟೆ?

Written By:

ಮುಂದಿನ ಐದು ವರ್ಷದೊಳಗೆ ಅಂದರೆ 2019ರ ವೇಳೆಯಾಗುವಾಗ ಇಡೀ ವಿಶ್ವದಲ್ಲೇ ಚೀನಾ ಅತ್ಯಂತ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಾಗಿ ಹೊರ ಹೊಮ್ಮಲಿದೆ ಎಂದು ಜರ್ಮನಿಯ ಮುಂಚೂಣಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಭವಿಷ್ಯ ನುಡಿದಿದೆ.

ಇದಕ್ಕೆ ಬಿಎಂಡಬ್ಲ್ಯು ಚೀನಾ ಕೊಟ್ಟಿರುವ ಪ್ರಮುಖ ಕಾರಣವೇನೆಂದರೆ ಚೀನಾದಲ್ಲಿ ವಿದ್ಯುತ್ ಚಾಲಿತ ವಾಹನಗಳ ಮೂಲಸೌಕರ್ಯ ವೃದ್ಧಿಗೆ ಅಲ್ಲಿನ ಸರಕಾರದಿಂದ ಸೂಕ್ತ ರೀತಿಯ ನೆರವು ದೊರಕುತ್ತಿದೆ. ಇದು ಚೀನಾದಲ್ಲಿ ಹಸಿರು ಕಾರುಗಳ ವೃದ್ಧಿಗೆ ನೆರವಾಗಲಿದೆ ಎಂದಿದೆ.

bmw i3 electric car

ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳಂತಹ ಮುಂತಾದ ಅಗತ್ಯಗಳಿಗಾಗಿ ಚೀನಾ ಸರಕಾರವು ಭಾರಿ ಹೂಡಿಕೆ ಮಾಡುತ್ತಿದೆ. ಇದು ಎಲೆಕ್ಟ್ರಿಕ್ ವಾಹನಗಳ ವೃದ್ಧಿಗೆ ಸಹಕಾರಿಯಾಗಲಿದೆ.

ಇತ್ತೀಚೆಗಷ್ಟೇ ಚಾರ್ಜಿಂಗ್ ಸ್ಟೇಷನ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಶಾಂಘೈ ಮುನಿಸಿಪಾಲ್ ಪವರ್ ಸಂಸ್ಥೆಯೊಂದಿಗೆ ಬಿಎಂಡಬ್ಲ್ಯು ಚೀನಾ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು.

ಇವೆಲ್ಲದಕ್ಕೂ ಮಿಗಿಲಾಗಿ ಬಹುತೇಕ ಪ್ರೀಮಿಯಂ ವಾಹನ ತಯಾರಕ ಸಂಸ್ಥೆಗಳು ನಿಕಟ ಭವಿಷ್ಯದಲ್ಲಿ ಚೀನಾದಲ್ಲಿ ಅನೇಕ ವಿದ್ಯುತ್ ಚಾಲಿತ ವಾಹನಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಇದಕ್ಕೆ ಉದಾಹರಣೆಯೆಂಬಂತೆ 2018ರ ವೇಳೆಯಾಗುವಾಗ ಫೋಕ್ಸ್‌ವ್ಯಾಗನ್ 15 ವಿದ್ಯುತ್ ಚಾಲಿತ ಮಾದರಿಗಳನ್ನು ಪರಿಚಯಿಸಲಿದೆ. ಡೈಮ್ಲರ್ ಹಾಗೂ ಟೆಸ್ಲಾ ಮಾಡೆಲ್ ಎಸ್ ಸಹ ಈ ವಿಭಾಗಕ್ಕೆ ಸೇರಿದೆ.

ಈ ನಿಟ್ಟಿನಲ್ಲಿ ಬಿಂಡಬ್ಲ್ಯು ಕೂಡಾ ಮಹತ್ತರ ಹೆಜ್ಜೆಯನ್ನಿಡುತ್ತಿದ್ದು, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಐ3 ವಿದ್ಯುತ್ ಚಾಲಿತ ವಾಹನಗಳ ಮಾರಾಟ ಆರಂಭಿಸಲಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲೇ 1000ದಷ್ಟು ಯುನಿಟ್ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

Story first published: Friday, July 4, 2014, 18:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark