ಡೀಸೆಲ್ ಬೆಲೆಯಲ್ಲಿ 5 ರು. ಏರಿಕೆ ಸಾಧ್ಯತೆ ?

Written By:

ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ವದಂತಿಗಳು ಹಬ್ಬಿದ್ದರೂ ಇದುವರೆಗೆ ಅಂತಹ ಯಾವುದೇ ಪ್ರಕಟಣೆಗಳು ಹೊರಬಂದಿಲ್ಲ. ಹಾಗಿರಬೇಕೆಂದರೆ ಮಧ್ಯ ಪ್ರಾಚ್ಯ ದೇಶದಲ್ಲಿನ ಗಲಭೆ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಇಂಧನ ದರಗಳಲ್ಲಿ ಭಾರಿ ಏರಿಕೆಯಾಗುವ ಭೀತಿ ಎದುರಾಗುತ್ತಿದೆ.

ಈ ನಡುವೆ ತಕ್ಷಣಕ್ಕೆ ಜಾರಿಗೆ ಬರುವಂತೆ ಡೀಸೆಲ್ ಬೆಲೆಯಲ್ಲಿ ಐದು ರು.ಗಳ ಏರಿಕೆಯಾಗುವ ಬಗ್ಗೆ ವರದಿಗಳು ಲಭಿಸಿದೆ. ಈ ಸಂಬಂಧ ಕಿರಿತ್ ಪರಿಖ್ ಸಮಿತಿಯು ಸರಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದೆ.

To Follow DriveSpark On Facebook, Click The Like Button
diesel

ಮುಂಬೈನಲ್ಲಿ ಪ್ರಸ್ತುತ ಡೀಸೆಲ್ ದರ 65.84 ರು.ಗಳಿಷ್ಟಿದೆ. ಇದೀಗ 5 ರು. ಏರಿಕೆಯಾದ್ದಲ್ಲಿ 70ರ ಗಡಿಯನ್ನು ತಲುಪಲಿದೆ. ಅಂದರೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಬಹುತೇಕ ಸಮಾನವಾಗಲಿದೆ. ಕಳೆದ ಕೆಲವು ತಿಂಗಳುಗಳಿಂದ ಪ್ರತಿ ತಿಂಗಳಲ್ಲೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಇದೇ ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಸಂಖ್ಯೆಯನ್ನು ಒಂಬತ್ತರಿಂದ ಮತ್ತೆ ಆರಕ್ಕಿಳಿಸಲು ಸಮಿತಿ ಶಿಫಾರಸು ಮಾಡಿದೆ. ಅದೇ ರೀತಿ ಎಲ್‌ಪಿಜಿ ಸಿಲಿಂಡರ್‌ವೊಂದರ ದರವನ್ನು ರು. 250ರಂತೆ ಏರಿಕೆಗೊಳಿಸುವಂತೆಯೇ ಸಲಹೆ ಮಾಡಿದೆ. ಇದಲ್ಲದೆ ಕೆರೊಸಿನ್ ದರದಲ್ಲಿ 4 ರು.ಗಳ ಏರಿಕೆ ಶಿಫಾರಸುಗೈದಿದೆ.

ಪೆಟ್ರೋಲ್ ಬೆಲೆಯನ್ನು ಸರಕಾರ ಈಗಾಗಲೇ ಅನಿಯಂತ್ರಣಗೊಳಿಸಿದೆ. ಇದೀಗ ಡೀಸೆಲ್ ದರಗಳ ಮೇಲೂ ಅನಿಯಂತ್ರಣ ಹೊಂದಲು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.

Story first published: Tuesday, June 17, 2014, 15:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark