ವರ್ಷಂಪ್ರತಿ ಫೆರಾರಿಯಿಂದ ಹೊಸ ಕಾರು

Written By:

ಮುಂದಿನ ಐದು ವರ್ಷಗಳಲ್ಲಿ ವರ್ಷಂಪ್ರತಿ ಒಂದೊಂದೆ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಫೆರಾರಿ ಹೊಂದಿದೆ. ಇದು 2015ನೇ ಸಾಲಿನಿಂದ ಆರಂಭವಾಗಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಉಳಿದಂತೆ ಈಗಿರುವ ನೀತಿಯನ್ನು ಮುಂದುವರಿಸಿಕೊಂಡು ಹೊಗಲು ಫೆರಾರಿ ನಿರ್ಧರಿಸಿದೆ. ಅಂದರೆ ವಾರ್ಷಿಕವಾಗಿ 7000 ಯುನಿಟ್‌ಗಳನ್ನಷ್ಟೇ ಉತ್ಪಾದಿಸಲಿದೆ. ಈ ಮೂಲಕ ಸೂಪರ್ ಕಾರಿನ ಬೇಡಿಕೆಯನ್ನು ಕಾಯ್ದುಕೊಳ್ಳುವ ಯೋಜನೆ ಹೊಂದಿದೆ. ಹಾಗೊಂದು ವೇಳೆ ಅಗತ್ಯವಿದ್ದಲ್ಲಿ ಮಾತ್ರ ಭವಿಷ್ಯದಲ್ಲಿ ನಿರ್ಮಾಣ ಸಾಮರ್ಥ್ಯವನ್ನು 10,000 ಯುನಿಟ್‌ಗಳಿಗೆ ಏರಿಸಲಿದೆ ಎಂಬುದಾಗಿಯೂ ತಿಳಿಸಿದೆ.

Ferrari

ಮುಂದಿನ ವರ್ಷದಿಂದ ವರ್ಷಂಪ್ರತಿ ಲಾಂಚ್ ಆಗಲಿರುವ ಪ್ರತಿಯೊಂದು ಕಾರುಗಳು, ಎಂಟು ವರ್ಷಗಳ ಬಾಳ್ವಿಕೆ ಹೊಂದಿರಲಿದೆ.

ಇಲ್ಲಿ ಉಲ್ಲೇಖಿಸಲಾಗಿರುವ ಐದು ಮಾದರಿಗಳು ಲಾಫೆರಾರಿಗೆ ಸಂಬಂಧಪಟ್ಟಿದ್ದಲ್ಲ. ಅದೇ ರೀತಿ ವಿ8 ಹಾಗೂ ವಿ12 ಎಂಜಿನ್ ಬಳಕೆ ಮಾಡಲಿದೆ ಎಂಬುದನ್ನು ಸಹ ಫೆರಾರಿ ಖಚಿತಪಡಿಸಿದೆ.

English summary
During the recently held meet where Fiat-Chrysler Automobiles announced the group's strategy for the next five years, Ferrari stated that starting from 2015, it will launch a new model every year for the next five years.
Story first published: Saturday, May 10, 2014, 12:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark