ಶಿಕ್ಷಕರ ದಿನಾಚರಣೆ; ಫೋರ್ಡ್‌ನಿಂದ ಶಿಕ್ಷಕರಿಗೆ ವಿಶೇಷ ಆಫರ್

Written By:

ಅಮೆರಿಕ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ಶಿಕ್ಷಕರಿಗಾಗಿ ವಿಶೇಷ ಆಫರ್ ಘೋಷಿಸಿದೆ. ಇತ್ತೀಚೆಗಷ್ಟೇ ದೇಶದಲ್ಲಿ ಇಕೊಸ್ಪೋರ್ಟ್ ಒಂದು ಲಕ್ಷ ಯುನಿಟ್ ನಿರ್ಮಾಣ ಮೈಲುಗಲ್ಲನ್ನು ತಲುಪಿದ್ದ ಫೋರ್ಡ್, ಹಣಕ್ಕೆ ತಕ್ಕ ಮೌಲ್ಯವನ್ನು ಗ್ರಾಹಕರಿಗೆ ಒದಗಿಸುವಲ್ಲಿ ಸದಾ ಬದ್ಧವಾಗಿದೆ.

ಭಾರತದಲ್ಲಿ ಫೋರ್ಡ್ ಸಂಸ್ಥೆಯು ಫಿಗೊ, ಫಿಯೆಸ್ಟಾ, ಫಿಯೆಸ್ಟಾ ಕ್ಲಾಸಿಕ್, ಇಕೊಸ್ಪೋರ್ಟ್ ಮತ್ತು ಎಂಡೋವರ್ ಮಾದರಿಗಳನ್ನು ಪರಿಚಯಿಸಿದೆ. ಇದೀಗ ಇನ್ನಷ್ಟು ಮಾರಾಟ ಉತ್ತೇಜನ ನಿರೀಕ್ಷಿಸುತ್ತಿರುವ ಸಂಸ್ಥೆಯು ಸೆಪ್ಟಂಬರ್ 5ರಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿಶೇಷ ಆಫರ್ ಘೋಷಿಸಿದೆ.

To Follow DriveSpark On Facebook, Click The Like Button
Ford India

ಫೋರ್ಡ್‌ನ ನಿರ್ದಿಷ್ಟ ಮಾದರಿಗೆ ಆಫರ್ ಅನ್ವಯವಾಗಲಿದ್ದು , ದೇಶದೆಲ್ಲ ಶಿಕ್ಷಕರು ಇದರ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಈ ವಿಶೇಷ ಕೊಡುಗೆಯು ಫೋರ್ಡ್ ಫಿಗೊ ಹಾಗೂ ಕ್ಲಾಸಿಕ್ ಮಾದರಿಗಳಿಗೆ ಲಭ್ಯವಾಗಲಿದೆ. ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಖರೀದಿ ವೇಳೆ ರು. 9000 ಪ್ರಯೋಜನ ತಮ್ಮದಾಗಿಸಬಹುದಾಗಿದೆ. ಅದೇ ಹೊತ್ತಿಗೆ ಫೋರ್ಡ್ ಕ್ಲಾಸಿಕ್‌ಗೆ 16,500 ರು. ವರೆಗೆ ಆಫರ್ ಲಭ್ಯವಾಗಲಿದೆ.

ಫೋರ್ಡ್‌ನಿಂದ ಪ್ರಸ್ತುತ ಎಕ್ಸ್‌ಚೇಂಜ್ ಬೋನಸ್, ವಾರಂಟಿ ವಿಸ್ತರಣೆ ಮತ್ತು ಉಚಿತ ವಿಮಾನ ಸೌಲಭ್ಯ ಲಭ್ಯವಿರುತ್ತದೆ. ಈ ಎಲ್ಲ ಆಫರುಗಳು ಫೋರ್ಡ್‌ನ 304 ಸೇಲ್ಸ್ ಮತ್ತು ಸರ್ವೀಸ್ ಘಟಕಗಳಲ್ಲಿ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಶಿಕ್ಷಕರು ಎಫ್‌ಬಿಸಿ ಎಫ್‌ಡಿಎಸ್ ಎಂದು ಟೈಪ್ ಮಾಡಿ 56263 ಎಂಬ ನಂಬರ್‌ಗೆ ಕಳುಹಿಸಿಬೇಕು.

ಫೋರ್ಡ್ ಪಾಲಿನ ಅಚ್ಚುಮೆಚ್ಚಿನ ಮಾದರಿಯಾಗಿರುವ ಫಿಗೊ ಮತ್ತು ಕ್ಲಾಸಿಕ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ. ಈ ಪೈಕಿ ಫಿಗೊ 3.86 ಲಕ್ಷ ರು.ಗಳಿಂದ 6 ಲಕ್ಷ ರು.ಗಳ ವರೆಗೆ ಬೆಲೆ ದಾಖಲಾಗಿದೆ. ಅಂತೆಯೇ ಕ್ಲಾಸಿಕ್ 4.88 ಲಕ್ಷ ರು.ಗಳಿಂದ 7.35 ಲಕ್ಷ ರು.ಗಳ ವರೆಗೆ ದುಬಾರಿಯಾಗಲಿದೆ.

English summary
American automobile giant Ford has witnessed success in India with a few products. They recently announced achieving a milestone with its EcoSport compact SUV. They are always trying to provide customers with the best value for money products.ಟ
Story first published: Thursday, September 4, 2014, 15:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark