ಸೀಟು ಬೆಲ್ಟ್ ಧರಿಸುತ್ತಿದ್ದರೆ ಮುಂಡೆ ಪ್ರಾಣಾಪಾಯದಿಂದ ಪಾರಾಗುತ್ತಿದ್ದರು!

Written By:

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ (63) ಮಂಗಳವಾರ ದೆಹಲಿಯಲ್ಲಿ ಸಂಭವಿಸಿರುವ ಕಾರು ಅಪಘಾತದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಒಂದು ವೇಳೆ ಮುಂಡೆ ಸೀಟು ಬೆಲ್ಟ್ ಧರಿಸುತ್ತಿದ್ದಲ್ಲಿ ಪ್ರಾಣಾಪಾಯದಿಂದ ಪಾರಾಗುತ್ತಿದ್ದರು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಮಹಾರಾಷ್ಟ್ರದ ಹಿಂದುಳಿದ ವರ್ಗದ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದ ಮುಂಡೆ ಅಪಘಾತದ ತೀವ್ರತೆಯಲ್ಲಿ ತೀವ್ರ ಆಘಾತಕ್ಕೊಳಗಾಗಿದ್ದರು. ಇದರಿಂದ ಹೃದಯಾಘಾತವಾಗಿದೆ ಎಂದು ವೈದ್ಯ ಮೂಲಗಳು ತಿಳಿಸಿವೆ. ಸಚಿವರ ಎಸ್‌ಎಕ್ಸ್4 ಕಾರಿಗೆ ಢಿಕ್ಕಿ ಹೊಡೆದಿದ್ದ ಇಂಡಿಕಾ ಕಾರಿನ ಚಾಲಕ ಸಿಗ್ನಲ್ ತಪ್ಪಿಸಿಕೊಂಡು ಬಂದಿರುವುದು ತನಿಖೆಯ ವೇಳೆ ಬಯಲಾಗಿದೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಶಾಲೆ ಪಠ್ಯ ಪುಸ್ತಕಗಳಲ್ಲೂ ರಸ್ತೆ ಸುರಕ್ಷತೆ ಬಗ್ಗೆ ಪಾಠ ಕಡ್ಡಾಯಗೊಳಿಸಬೇಕೆಂಬ ಬೇಡಿಕೆ ಬಲವಾಗುತ್ತಿದೆ.

ಸೀಟು ಬೆಲ್ಟ್ ಮಹತ್ವವನ್ನು ಅರಿಯಿರಿ

ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ಕಾರು ಅಪಘಾತದ ಬೆನ್ನಲ್ಲೇ ಆಂತರಿಕವಾಗಿ ಸಂಭವಿಸಿರುವ ಆಘಾತದಿಂದಾಗಿ ಹೃದಯಾಘಾತ ಸಂಭವಿಸಿದೆ ಎಂಬುದು ತಿಳಿದು ಬಂದಿದೆ.

ಸೀಟು ಬೆಲ್ಟ್ ಮಹತ್ವವನ್ನು ಅರಿಯಿರಿ

ಎಐಐಎಂಎಸ್ ವೈದ್ಯ ಮೂಲಗಳ ಪ್ರಕಾರ, ಸಡನ್ ಅಪಘಾತ ಹಾಗೂ ಆಘಾತದಿಂದಾಗಿ ಮುಂಡೆ ಅವರ ಪಿತ್ತಕೋಶದಲ್ಲಿ ಗಾಯಗಳಾಗಿವೆ. ಪರಿಣಾಮ ತೀವ್ರ ಪ್ರಮಾಣದ ರಕ್ತಪಾತವಾಗಿದೆ. ಇದರಿಂದ ಹೃದಯಾಘಾತವಾಗಿದೆ ಎಂದಿದ್ದಾರೆ.

ಸೀಟು ಬೆಲ್ಟ್ ಮಹತ್ವವನ್ನು ಅರಿಯಿರಿ

ಒಂದು ವೇಳೆ ಸೀಟು ಬೆಲ್ಟ್ ಧರಿಸುತ್ತಿದ್ದಲ್ಲಿ ಮುಂಡೆ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಯಿತ್ತು. ಯಾಕೆಂದರೆ ಸೀಟು ಬೆಲ್ಟ್ ಧರಿಸುವುದರಿಂದ ಶರೀರದ ಆಂತರಿಕ ಭಾಗಗಳಿಗೆ ಉಂಟಾಗುವ ಆಘಾತದ ಪ್ರಯಾಣವನ್ನು ಕಡಿಮೆ ಮಾಡುತ್ತಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೀಟು ಬೆಲ್ಟ್ ಮಹತ್ವವನ್ನು ಅರಿಯಿರಿ

ಇಂತಹ ಅಪಘಾತ ಸನ್ನಿವೇಶಗಳು ನಿಮಗೂ ಎದುರಾಗಲೂಬಹುದು. ಹಾಗಾಗಿ ಸೀಟು ಬೆಲ್ಟ್ ಧರಿಸುವುದರ ಮಹತ್ವಗಳನ್ನು ತಿಳಿದುಕೊಳ್ಳಲು ಮುಂದಿನ ಒಂದೊಂದೇ ಪುಟವನ್ನು ತೆರೆದು ನೋಡಿರಿ. ಅಷ್ಟಕ್ಕೂ ಸೀಟು ಬೆಲ್ಟ್ ಐದು ವಿಧಗಳಲ್ಲಿ ಓರ್ವ ಪ್ರಯಾಣಿಕನ ಜೀವ ರಕ್ಷಿಸುತ್ತದೆ. ಅದು ಹೇಗೆ ಅಂತೀರಾ? ಮುಂದಕ್ಕೆ ಓದಿರಿ...

ಮಿಥ್ಯ ಕಲ್ಪನೆ

ಮಿಥ್ಯ ಕಲ್ಪನೆ

ಇದು ಸಾಮಾನ್ಯವಾಗಿ ಎಲ್ಲ ಪ್ರಯಾಣಿಕರನ್ನು ಕಾಡುವ ಪ್ರಶ್ನೆ. ಸೀಟು ಬೆಲ್ಟ್ ಧರಿಸುವುದರಿಂದ ಅಪಘಾತ ವೇಳೆಯಲ್ಲಿ ಪಾರಾಗಲು ಅಥವಾ ಕಾರಿನಿಂದ ಹೊರ ಹೋಗಲು ಸಾಧ್ಯವಿಲ್ಲ ಎಂಬ ಮಿಥ್ಯ ಕಲ್ಪನೆ ಕಾಡುತ್ತಿರುತ್ತದೆ. ಇದು ನಿಜವಾಗಿಯೂ ತಪ್ಪಾದ ಕಲ್ಪನೆಯಾಗಿದ್ದು, ಅಪಘಾತ ವೇಳೆಯಲ್ಲಿ ನಿಮಗೆ ಸ್ವಯಂ ರಕ್ಷಣೆಗೆ ಸಮಯವಿರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿರಿ. ಹಾಗಾಗಿ ಸದಾ ಜೀವ ರಕ್ಷಕ ಸೀಟು ಬೆಲ್ಟ್‌ಗಳನ್ನು ಧರಿಸಲು ಮರೆಯದಿರಿ.

ವಿನ್ಯಾಸ

ವಿನ್ಯಾಸ

ಅಪಘಾತ ಸಂದರ್ಭಗಳಲ್ಲಿ ಆಘಾತದ ಪ್ರಮಾಣವನ್ನು ಶರೀರದ ಎಲ್ಲ ಭಾಗಗಳು ಒಂದೇ ರೀತಿಯಲ್ಲಿ ತಡೆಯುವ ರೀತಿಯಲ್ಲಿ ಸೀಟು ಬೆಲ್ಟ್ ವಿನ್ಯಾಸಗೊಳಿಸಲಾಗಿದೆ. ಇದು ನಿರ್ದಿಷ್ಟ ಭಾಗಕ್ಕೆ ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಎಡ ಭುಜದಿಂದ ಭುಜದ ಮೇಲ್ಬಾಗವಾಗಿ ಸೊಂಟದತ್ತ ಹಾಗೆಯೇ ಸೊಂಟದ ಸುತ್ತಲೂ ಇದು ಆವರಿಸಿಕೊಳ್ಳಲಿದೆ.

ಆಘಾತದ ಪ್ರಮಾಣ ಕಡಿಮೆ

ಆಘಾತದ ಪ್ರಮಾಣ ಕಡಿಮೆ

ಮೇಲೆ ತಿಳಿಸಿದಂತೆಯೇ ಅಪಘಾತದ ತೀವ್ರತೆಯನ್ನು ಶರೀರದ ಒಂದೇ ಭಾಗದ ಮೇಲಿನ ಪ್ರಭಾವವನ್ನು ಕಡಿಮೆಗೊಳಿಸಲಿರುವ ಸೀಟು ಬೆಲ್ಟ್‌ಗಳು ಎಲ್ಲ ಭಾಗಗಳು ಒಂದೇ ರೀತಿಯಲ್ಲಿ ತಡೆಯುವಂತೆ ನೆರವಾಗಲಿದೆ. ಇದರಿಂದ ಬಲವಾಗಿ ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ.

ದೇಹ ಸಮತೋಲನ ಕಾಪಾಡಲಿದೆ

ದೇಹ ಸಮತೋಲನ ಕಾಪಾಡಲಿದೆ

ಅವಘಡ ವೇಳೆಯಲ್ಲಿ ಸಡನ್ ಬ್ರೇಕ್ ಅಥವಾ ವೇಗವಾಗಿ ಢಿಕ್ಕಿಯಾಗುವ ಸಂಭವಿರುತ್ತದೆ. ಈ ವೇಳೆ ನಿಮ್ಮ ದೇಹದ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಸೀಟು ಬೆಲ್ಟ್‌ಗಳು ದೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಲ್ಲದೆ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ತಲೆಯ ಭಾಗಕ್ಕೆ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ.

ತಲೆಯ ಭಾಗಕ್ಕೆ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ.

ಸಹಜವಾಗಿಯೇ ಅಪಘಾತ ವೇಳೆಯಲ್ಲಿ ತಲೆಯ ಭಾಗಕ್ಕೆ ಪೆಟ್ಟಾದ್ದಲ್ಲಿ ವ್ಯಕ್ತಿ ಬೇಗನೇ ಸಾವಿಗೆ ಶರಣಾಗುತ್ತಾರೆ. ಆದರೆ ಸೀಟು ಬೆಲ್ಟ್ ಧರಿಸುವುದರಿಂದ ತಲೆಯ ಭಾಗಗಳಿಗೆ ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

English summary
GopinathMunde would have survived if he was wearing a seatbelt. The accident yet another reminder for making road safety education compulsory In schools.
Story first published: Wednesday, June 4, 2014, 12:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark