ಮೊಬಿಲಿಯೊ ಸಾಲಿಗೆ ಇನ್ನೆರಡು ವೆರಿಯಂಟ್‌ಗಳ ಸೇರ್ಪಡೆ

Written By:

ಇತ್ತೀಚೆಗಷ್ಟೇ ಅತ್ಯಾಕರ್ಷಕ ಬಹು ಬಳಕೆಯ ಮೊಬಿಲಿಯೊ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದೀಗ ಇದಕ್ಕೆ ಮತ್ತೆರಡು ಹೊಸ ವೆರಿಯಂಟ್‌ಗಳನ್ನು ಸೇರ್ಪಡೆಗೊಳಿಸಲು ಜಪಾನ್ ಮೂಲದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ನಿರ್ಧರಿಸಿದೆ.

ಹೋಂಡಾ ಮೊಬಿಲಿಯೊದ ಹೊಸ ವೆರಿಯಂಟ್‌ಗಳು ವಿ (ಆಪ್ಷನಲ್) ಮತ್ತು ಆರ್‌ಎಸ್ (ಆಪ್ಷನಲ್) ಎಂದರಿಯಲ್ಪಡಲಿದೆ. ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಆಡಿಯೋ ವೀಡಿಯೋ ನೇವಿಗೇಷನ್ (ಎವಿಎನ್), ರಿಯರ್ ಪಾರ್ಕಿಂಗ್ ಕ್ಯಾಮೆರಾ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

Honda mobilio

ಈಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಇ, ಎಸ್ ಮತ್ತು ವಿ ಮೇಲ್ಗಡೆಯಾಗಿ ಹೊತತಾದ ಹೋಂಡಾ ವಿ (ಆಪ್ಷನಲ್) ಕಾಣಿಸಿಕೊಳ್ಳಲಿದೆ. ಈ ಎರಡು ಮಾದರಿಗಳು 2014 ಸೆಪ್ಟೆಂಬರ್ ಮಧ್ಯಂತರ ಅವಧಿಯಲ್ಲಿ ಲಭ್ಯವಾಗಲಿದೆ.

ಹೋಂಡಾ ಮೊಬಿಲಿಯೊ ಆಡಿಯೋ ವೀಡಿಯೋ ನೇವಿಗೇಷನ್ ಸಿಸ್ಟಂ ದೊಡ್ಡದಾದ 15.7 ಸೆಂಟಿಮೀಟರ್ ಟಚ್ ಸ್ಕ್ರೀನ್ ಪಡೆದುಕೊಳ್ಳಲಿದ್ದು, ಮ್ಯಾಪ್, ಸ್ಯಾಟಲೈಟ್ ತಲಹದಿಯ ವಾಯ್ಸ್ ಮಾರ್ಗದರ್ಶನ ನೇವಿಗೇಷನ್, ಸಂಪೂರ್ಣ ಮನರಂಜನೆ, ಕೆನೆಕ್ಟಿವಿಟಿ ಫೀಚರ್ಸ್ (ಡಿವಿಡಿ/ಸಿಡಿ, ಬ್ಲೂಟೂತ್, ಯುಎಸ್‌ಬಿ, ಆಕ್ಸ್, ಐ-ಪಾಡ್, ಎಂಪಿ3, ಎಫ್‌ಎಂ/ಎಎಂ) ಪ್ರಯಾಣಿಕರ ಸವಾರಿಯನ್ನು ಆನಂದವಾಗಿಸಲಿದೆ.

ನಿಮ್ಮ ಮಾಹಿತಿಗಾಗಿ, 2014 ಜುಲೈ ತಿಂಗಳಲ್ಲಿ ಲಾಂಚ್ ಆಗಿರುವ ಹೋಂಡಾ ಮೊಬಿಲಿಯೊ 1.5 ಲೀಟರ್ ಐ-ಡಿಟೆಕ್ (100 ಪಿಎಸ್, 200 ಎನ್‌ಎಂ ಟಾರ್ಕ್) ಹಾಗೂ 1.5 ಲೀಟರ್ ಐ-ವಿಟೆಕ್ (119 ಪಿಎಸ್, 145 ಎನ್‌ಎಂ ಟಾರ್ಕ್) ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಇವೆರಡು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 24.5 ಹಾಗೂ 17.3 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದರ ಮಾಹಿತಿ

1.5 ಲೀಟರ್ ವಿ(ಒ) ಎಂಟಿ (ಪೆಟ್ರೋಲ್)- 9.46 ಲಕ್ಷ ರು.

1.5 ಲೀಟರ್ ವಿ(ಒ) ಎಂಟಿ (ಡೀಸೆಲ್) - 10.45 ಲಕ್ಷ ರು.

ಮೊಬಿಲಿಯೊ ಆರ್‌ಎಸ್(ಒ) ಡೀಸೆಲ್ - 11.55 ಲಕ್ಷ ರು.

English summary
Honda Cars India Ltd. (HCIL), leading manufacturer of premium cars in India,today introduced two new grades of Honda Mobilio V(O) & RS(O)featuring first in segment Audio Video Navigation(AVN)and Rear View Parking Camera.
Story first published: Monday, August 25, 2014, 15:33 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark