2015 ವರ್ಷಾರಂಭದಲ್ಲಿ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್ ಬಿಡುಗಡೆ

Written By:

ದೇಶದ ನಂ.1 ರಫ್ತುದಾರ ಹಾಗೂ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಇಂಡಿಯಾ ಸಂಸ್ಥೆಯು ಮಗದೊಂದು ಆಕರ್ಷಕ ಮಾದರಿಯನ್ನು ಪರಿಚಯಿಸಲಿದೆ.

ವರದಿಗಳ ಪ್ರಕಾರ ಹ್ಯುಂಡೈ ಎಲಾಂಟ್ರಾ 2015 ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲವಾದರೂ ಡೀಲರುಗಳನ್ನು ಸಂಪರ್ಕಿಸಿದಾಗ ಇಂತಹದೊಂದು ಮಾಹಿತಿ ಲಭಿಸಿದೆ.

ದಕ್ಷಿಣ ಕೊರಿಯಾ ಮಾರುಕಟ್ಟೆಯನ್ನು ಪ್ರಸಕ್ತಾ ಸಾಲಿನ ವರ್ಷಾರಂಭದಲ್ಲೇ ತಲುಪಿರುವ ಹ್ಯುಂಡೈ ಎಲಂಟ್ರ ಪ್ರೀಮಿಯಂ ಕಾರು ಭಾರತ ಮಾರುಕಟ್ಟೆಗೆ ಸ್ವಲ್ಪ ನಿಧಾನವಾಗಿ ಪ್ರವೇಶ ಪಡೆಯುತ್ತಿದೆ. ಇದು ಹೊಸತಾದ ಫ್ರಂಟ್ ಗ್ರಿಲ್, ಹೆಚ್ಚು ಆಯಾಮ, ಡೇ ಟೈಮ್ ರನ್ನಿಂಗ್ ಲೈಟ್ಸ್ ಇನ್ನಿತರ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆಯಲಿದೆ.

hyundai elantra

ಹಿಂದಿನ ಎಲಾಂಟ್ರಾಗೆ ಹೋಲಿಸಿದರೆ ತಾಜಾ ವಿನ್ಯಾಸವು ಪ್ರಮುಖ ಆಕರ್ಷಣೆಯಾಗಿರಲಿದೆ. ಇದರ ಮುಂಭಾಗ ಹಾಗೂ ಹಿಂಭಾಗದ ಬಂಪರ್ ಸ್ವಲ್ಪ ದೊಡ್ಡದಾಗಿರಲಿದ್ದು, ಒಟ್ಟಾರೆ 4,550 ಉದ್ದವನ್ನು ಪಡೆಯಲಿದೆ. ಜೊತೆಗೆ 17 ಇಂಚಿನ ಅಲಾಯ್ ವೀಲ್ ಸಹ ಇರಲಿದೆ.

ಇನ್ನು 3.5 ಡಿಸ್‌ಪ್ಲೇ ಪರದೆ, ಸ್ಮಾರ್ಟ್ ಪಾರ್ಕಿಂಗ್ ಅಸಿಸ್ಟ್, ಸೆಂಟ್ರಾಲ್ ಕನ್ಸಾಲ್, ರಿಯರ್ ಎಸಿ ವೆಂಟ್, ವೆಂಟಿಲೇಟಡ್ ಸೀಟು ಮುಂತಾದ ಸೌಲಭ್ಯಗಳು ಇದರಲ್ಲಿರಲಿದೆ.

ದಕ್ಷಿಣ ಕೊರಿಯಾ ಮೂಲದ ಎಲಾಂಟ್ರಾದಲ್ಲಿ 1.6 ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದೆ. ಇದು 126 ಬಿಎಚ್‌ಪಿ ಉತ್ಪಾದಿಸುತ್ತಿದ್ದು, ಈಗಿರುವ ಭಾರತ ಮಾರುಕಟ್ಟೆಯಲ್ಲಿರುವ ಎಲಾಂಟ್ರಾ ಮಾದರಿಗೆ ಸಮಾನವಾಗಿದೆ. ಹಾಗಾಗಿ ಎಂಜಿನ್ ಮಾನದಂಡಗಳಲ್ಲಿ ವ್ಯತ್ಯಾಸ ತರಲಾಗವುದೇ ಎಂಬುದು ಸಹ ಕುತೂಹಲವೆನಿಸಿದೆ.

ಕೆಲವು ಸಮಯಗಳ ಹಿಂದೆಯಷ್ಟೇ ಥಾಯ್ಲೆಂಡ್ ಮಾರುಕಟ್ಟೆಯನ್ನು ಪ್ರವೇಶ ಪಡೆದಿರುವ ಎಲಾಂಟ್ರಾ ಫೇಸ್‌ಲಿಫ್ಟ್ ಭಾರತದಲ್ಲಿ 15 ಲಕ್ಷ ರು.ಗಳ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ ಹೊಂದಿರುವ ಸಾಧ್ಯತೆಯಿದೆ.

ವೆರ್ನಾ ಆಗಮನ...

ಈ ನಡುವೆ ಮುಂದಿನ ವರ್ಷಾರಂಭದಲ್ಲೆ ಕಳೆಗುಂದಿರುವ ವೆರ್ನಾ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇವೆಲ್ಲದಕ್ಕೂ ಸಂಬಂಧಿಸಿದಂತೆ ನಾವು ಕೂಡಾ ಸಂಸ್ಥೆಯ ಅಧಿಕೃತ ಪ್ರಕಟಣೆಯ ನಿರೀಕ್ಷೆಯಲ್ಲಿದ್ದೇವೆ.

English summary
According to the sources, South-Korean car maker Hyundai motors is planning to launch Elantra facelift in Indian market soon. 
Story first published: Thursday, December 18, 2014, 10:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark