40ನೇ ಕೆ-1000 ರಾಲಿ ಬಾಚಿದ ಗೌರವ್ ಗಿಲ್ - ಮೂಸಾ ಷರೀಫ್

Written By:

ಮಹೀಂದ್ರ ಅಡ್ವೆಂಚರ್ ಐಎಂಜಿ 40ನೇ ಕೆ-1000 ರಾಲಿಯಲ್ಲಿ ಗೌರವ್ ಗಿಲ್ ಮತ್ತು ಸಹ ಚಾಲಕ ಮೂಸಾ ಷರೀಫ್ ಜಯಭೇರಿ ಮೊಳಗಿಸಿದ್ದಾರೆ. ಇದು ಇವರ ಪಾಲಿಗ ನಾಲ್ಕನೇ ಕೇರಿಯರ್ ಚಾಂಪಿಯನ್‌ಶಿಪ್ ಸಾಧನೆಯಾಗಿದೆ.

ಮಹೀಂದ್ರ ಅಡ್ವೆಂಚರ್ ಪರ ಚಾಲನೆ ಮಾಡುತ್ತಿರುವ ದೆಹಲಿ ಮೂಲದ ಈ ಚಾಲಕ ತಮ್ಮ ಪ್ರತಿಸ್ಪರ್ಧಿ ಸನ್ನಿ ಸಿಂಧು ಅವರನ್ನು ಹಿಂದಿಕ್ಕಿ ಐದನೇ ರೌಂಡ್‌ನಲ್ಲಿ ವಿಜಯ ಪತಾಕೆ ಹಾರಿಸಿದರು.

ಈ ವಿಭಾಗದಲ್ಲಿ ಸನ್ನಿ ಸಿಂಧು ಮತ್ತು ಪಿವಿಎಸ್ ಮೂರ್ತಿ ದ್ವಿತೀಯ ಸ್ಥಾನಕ್ಕೆ ತೃಪ್ತರಾದರು. ಅದೇ ರೀತಿ ಅಮಿತ್ರಾಜಿತ್ ಘೋಷ್ ಮತ್ತು ಅಶ್ವಿನ್ ನಾಯ್ಕ್ ಮೂರನೇ ಸ್ಥಾನ ಗೆದ್ದುಕೊಂಡರು.

ಇದೊಂದು ಉತ್ತಮ ಸ್ಪರ್ಧೆಯಾಗಿದ್ದು, ಕೆ-1000 ರಾಲಿಯ 40ನೇ ಎಡಿಷನ್ ಗೆಲ್ಲುವಲ್ಲಿ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದು ಗಿಲ್ ತಿಳಿಸಿದ್ದಾರೆ. ಎಲ್ಲ ಮೂರು ಸ್ಥಾನಗಳನ್ನು ಮಹೀಂದ್ರ ಎಕ್ಸ್‌ಯುವಿ500 ವಶಪಡಿಸಿಕೊಂಡಿದ್ದವು.

ಅಂದ ಹಾಗೆ 2014ನೇ ಆವೃತ್ತಿಯು ಮುಂದಿನ ತಿಂಗಳು ಚಿಕ್ಕಮಗಳೂರಿನಲ್ಲಿ ಕೊನೆಗೊಳ್ಳಳಿದೆ. ನಾವೆಲ್ಲರೂ ಕೊನೆಯ ಸುತ್ತನ್ನು ಎದುರು ನೋಡುತ್ತಿದ್ದೇವೆ ಎಂದು 2013 ಏಷ್ಯಾ ಫೆಸಿಫಿಕ್ ರಾಲಿ ವಿಜೇತರೂ ಆಗಿರುವ ಗಿಲ್ ತಿಳಿಸಿದರು.

ಫಲಿತಾಂಶ ಇಂತಿದೆ:

ಕ್ಲಾಸ್ ಐಆರ್‌ಸಿ

1. ಚಾಲಕ: ಗೌರವ್ ಗಿಲ್ ಸಹ ಚಾಲಕ: ಮೂಸಾ ಷರೀಫ್ ಸಮಯ: 01:35:32.0 ವಾಹನ: ಮಹೀಂದ್ರ ಎಕ್ಸ್‌ಯುವಿ500

2. ಚಾಲಕ: ಸನ್ನಿ ಸಿಧು ಸಹ ಚಾಲಕ: ಪಿವಿ ಶ್ರೀನಿವಾಸ ಮೂರ್ತಿ ಸಮಯ: 01:36:31.6 ವಾಹನ: ಮಹೀಂದ್ರ ಎಕ್ಸ್‌ಯುವಿ500

3. ಚಾಲಕ: ಅಮಿತ್ರಾಜ್ ಘೋಷ್ ಸಹ ಚಾಲಕ: ಅಶ್ವಿನ್ ನಾಯ್ಕ್ ಸಮಯ: 01:38:17.9 ವಾಹನ: ಮಹೀಂದ್ರ ಎಕ್ಸ್‌ಯುವಿ500

K 1000 Rally

ಕ್ಲಾಸ್ ಐಆರ್‌ಸಿ 2000

1. ಚಾಲಕ: ಕರ್ಣ ಕಧುರ್ ಸಹ ಚಾಲಕ: ಸುಜುಕಿ ಕುಮಾರ್ ಬಿಎಸ್ ಸಮಯ: 01:39:47.0 ವಾಹನ: ಮಿಟ್ಸುಬಿಸಿ ಸಿಡಿಯಾ

2. ಚಾಲಕ: ರಾಹುಲ್ ಕಾಂತ್‌ರಾಜ್ ಸಹ ಚಾಲಕ: ವಿವೇಕ್ ಭಟ್ ಸಮಯ: 01:40:57.3 ವಾಹನ: ಮಿಟ್ಸುಬಿಸಿ ಸಿಡಿಯಾ

3. ಚಾಲಕ: ಬೈರಾಮ್ ಗಾದ್ರೆಜ್ ಸಹ ಚಾಲಕ: ಸೊಮಯ್ಯ ಎಜಿ ಸಮಯ: 01:41:55.4 ವಾಹನ: ಫೋಕ್ಸ್‌ವ್ಯಾಗನ್ ಪೊಲೊ

ಕ್ಲಾಸ್ ಐಆರ್‌ಸಿ 1600

1. ಚಾಲಕ: ಫಾಲ್ಗುನಾ ಯುಆರ್‌ಎಶ್ ಸಹ ಚಾಲಕ: ಅನೂಪ್ ಕುಮಾರ್ ಸಮಯ: 01:40:26.3 ವಾಹನ: ಫೋಕ್ಸ್‌ವ್ಯಾಗನ್ ಪೊಲೊ

2. ಚಾಲಕ: ಹೃಷಿಕೇಷ್ ಥಾಕೆರ್‌ಸೇ ಸಹ ಚಾಲಕ: ನಿನಾದ್ ಮಿರಾಜ್‌ಗಾವೊನ್‌ಕರ್ ಸಮಯ: 01:42:08.9 ವಾಹನ: ಫೋಕ್ಸ್‌ವ್ಯಾಗನ್ ಪೊಲೊ

3. ಚಾಲಕ: ವಿಕ್ರಂ ದೇವದಾಸನ್ ಸಹ ಚಾಲಕ: ಚಂದ್ರಮೌಳಿ ಸಮಯ: 01:43:23.1 ವಾಹನ: ಫೋಕ್ಸ್‌ವ್ಯಾಗನ್ ಪೊಲೊ

ಕ್ಲಾಸ್ ಐಆರ್‌ಸಿ ಎಫ್‌ಎಂಎಸ್‌ಸಿಐ

1. ಚಾಲಕ: ಆದಿತ್ ಕೆಸಿ ಸಹ ಚಾಲಕ: ಹರೀಶ್ ಕೆಎನ್ ಸಮಯ: 01:42:57.5 ವಾಹನ: ಹೋಂಡಾ ಸಿಟಿ ವಿಟೆಕ್

2. ಚಾಲಕ: ಬೋಪಯ್ಯ ಕೆಎಂ ಸಹ ಚಾಲಕ: ಕೊಂಗಂಡ ಕರುಂಬೈಯ ಸಮಯ: 01:48:00.5 ವಾಹನ: ಮಾರುತಿ ಎಸ್ಟೀಮ್

3. ಚಾಲಕ: ಅನಿರುದ್ಧ ರಂಗ್ನೇಕರ್ ಸಹ ಚಾಲಕ: ನಿತಿನ್ ಜಾಕಬ್ ಸಮಯ: 01:49:37.7 ವಾಹನ: ಮಾರುತಿ ಬಾಲೆನೊ

English summary
Gaurav Gill and co-driver Musa Sherif made almost a minute over Mahindra Adventure teammate and overnight leader Sunny Sidhu (co-driver PVS Murthy) to win the Overall title in the 40th edition of the Mahindra Adventure's IMG K-1000 Rally. 
Story first published: Monday, November 24, 2014, 16:42 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark