ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿ ಬಿಡುಗಡೆಗೆ ರೆಡಿ

Written By:

ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೋರ್ಗಿನಿ, ಸದ್ಯದಲ್ಲೇ ಜನಪ್ರಿಯ ಅವೆಂಟಡೊರ್ ಆವೃತ್ತಿಯ ಎಸ್‌ವಿ ಮಾದರಿಯನ್ನು ಪರಿಚಯಿಸಲಿದೆ. ಕಳೆದ ನಾಲ್ಕು ವರ್ಷಗಳಿಂದ ಮಾರಾಟದಲ್ಲಿರುವ ಅವೆಂಟಡೊರ್ ಮಾದರಿಯ ಪರಿಷ್ಕೃತ ಆವೃತ್ತಿ ಇದುವರೆಗೆ ಬಿಡುಗಡೆಗೊಂಡಿಲ್ಲ.

ಹಾಗಿದ್ದರೂ ಒಂದೆರಡು ಬಾರಿ ವಿಶೇಷ ಆವೃತ್ತಿಗಳನ್ನು ಮಾತ್ರ ಪರಿಚಯಿಸಿತ್ತು. ಈ ನಿಟ್ಟಿನಲ್ಲಿ ಹೊಸ ಎಸ್‌ವಿ ಮಾದರಿಯಲ್ಲಿನ ಬದಲಾವಣೆಗಳು ತೀವ್ರ ಕುತೂಹಲ ಮೂಡಿಸುವಂತಾಗಿದೆ.

Lamborghini Aventador SV

ನೈಜ ಕಾರಿಗಿಂತಲೂ ಉತ್ತಮ ನಿರ್ವಹಣೆಯನ್ನು ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿ ಮಾದರಿ ಹೊಂದಿರಲಿದೆ. ವರದಿಗಳ ಪ್ರಕಾರ ಹೊಸ ಅವೆಂಟಡೊರ್ 2015 ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯು ಈ ಹಿಂದೆ ಮರ್ಸಿಲಗೊ ಎಸ್‌ವಿ ಮಾದರಿಯನ್ನು ಪರಿಚಯಿಸಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಹೊಸ ಅವೆಂಟಡೊರ್ ಎಸ್‌ವಿ ಸಹ ಕಡಿಮೆ ಹಗುರ ಹಾಗೂ ಹೆಚ್ಚು ವೇಗವರ್ಧನೆಯನ್ನು ಹೊಂದಿರಲಿದೆ ಎಂಬುದನ್ನು ಖಚಿತಪಡಿಸಬಹುದಾಗಿದೆ.

ಹೊಸ ಸೂಪರ್ ಕಾರು ಆಕ್ರಮಣಕಾರಿ ಏರೋಡೈನಾಮಿಕ್ ಪ್ಯಾಕೇಜ್ ಸಹ ಹೊಂದಿರಲಿದೆ. ಇದು ವಿ12 6.5 ಲೀಟರ್ ಎಂಜಿನ್ ಹೊಂದಿರಲಿದ್ದು, 700 ಅಶ್ವಶಕ್ತಿ (690 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಕೇವಲ 2.9 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಗರಿಷ್ಠ ಗಂಟೆಗೆ 350 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

English summary
Italian supercar maker of Aventador will be soon launching a SV edition of the vehicle. The Aventador has been on sale for over four years and has not been updated. Lamborghini has, however, launched a couple of limited and special models of the supercar.
Story first published: Thursday, July 3, 2014, 12:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark