ಲ್ಯಾಂಡ್ ರೋವರ್ ಫ್ರಿಲ್ಯಾಂಡರ್ 2 ಸ್ಟ್ರೆರ್ಲಿಂಗ್ ಎಡಿಷನ್ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್‌ನ ಐಕಾನಿಕ್ ಎಸ್‌ಯುವಿ ಬ್ರಾಂಡ್ ಲ್ಯಾಂಡ್ ರೋವರ್ ದೇಶಕ್ಕೆ ಮಗದೊಂದು ಅತ್ಯಾಕರ್ಷಕ ಮಾದರಿಯನ್ನು ಪರಿಚಯಿಸಿದೆ. ಹೌದು, ಲ್ಯಾಂಡ್ ರೋವರ್ ಫ್ರಿಲ್ಯಾಂಡರ್ 2 'ಸ್ಟ್ರೆರ್ಲಿಂಗ್' ಭಾರತ ಮಾರುಕಟ್ಟೆಗೆ ಪ್ರವೇಶಿಸಿದೆ. ಇದು ಸೀಮಿತ ಆವೃತ್ತಿಗಳಲ್ಲಿ ಮಾತ್ರ ಲಭ್ಯವಾಗಲಿದೆ.

ಹೊಸತಾದ ಲ್ಯಾಂಡ್ ರೋವರ್ ಫ್ರಿಲ್ಯಾಂಡರ್ 2 ಸ್ಟ್ರೆರ್ಲಿಂಗ್ ಎಡಿಷನ್ ಮುಂಬೈ ಎಕ್ಸ್ ಶೋ ರೂಂ ಬೆಲೆ 44.41 ಲಕ್ಷ ರು.ಗಳಾಗಿರಲಿದೆ. ಇದು ಸ್ಪೋರ್ಟಿ ಎಕ್ಸ್‌ಟೀರಿಯರ್ ಜೊತೆಗೆ ಅತ್ಯಾಕರ್ಷಕ ಸೌಲಭ್ಯಗಳನ್ನು ಪಡೆಯಲಿದೆ.

Land Rover Freelander 2 Sterling Edition

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಉಪಾಧ್ಯಕ್ಷರಾಗಿರುವ ರೋಹಿತ್ ಸುರಿ, "ಫ್ರಿಲ್ಯಾಂಡರ್ 2 ಸ್ಟ್ರೆರ್ಲಿಂಗ್ ಎಡಿಷನ್ ಕ್ರೀಡಾತ್ಮಕ ಕಾರು ಬಯಸುವ ದೇಶದ ಯುವ ಗ್ರಾಹಕರಿಗೆ ಐಷಾರಾಮಿ ಅನುಭವ ನೀಡಲಿದೆ" ಎಂದಿದ್ದಾರೆ.

ಲ್ಯಾಂಡ್ ರೋವರ್ ಭಾರತಕ್ಕೆ ಪ್ರವೇಶಿಸಿದ ಐದು ವರ್ಷಗಳ ಸಂಭ್ರಮದ ಸಲುವಾಗಿ ಸ್ಟ್ರೆರ್ಲಿಂಗ್ ಎಡಿಷನ್ ಪರಿಚಯಿಸಲಾಗಿದೆ. ಇದು 2.2 ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಾಗಲಿದ್ದು, 150 ಅಶ್ವಶಕ್ತಿ ಉತ್ಪಾದಿಸಲಿದೆ.

ಈ ಐಷಾರಾಮಿ ಕಾರಿನ ಹೊರಮೈ ಗಮನಿಸುವುದಾದರೆ 17 ಇಂಚಿನ ಐದು ವಿಭಜಿತ ಆಲಾಯ್ ವೀಲ್, ಕಪ್ಪು ಅಟ್ಲಾಸ್ ಗ್ರಿಲ್, ಫೆಂಡರ್ ಮತ್ತು ಸೈಡ್ ವೆಂಟ್ಸ್ ಇರಲಿದೆ. ಅಂತೆಯೇ ಟೈಲ್‌ಗೇಟ್, ಸ್ಪಾಯ್ಲರ್, ಫ್ರಂಟ್ ಮತ್ತು ರಿಯರ್ ಅಪ್ರಾನ್, ಲೋವರ್ ಡೋರ್ ಕ್ಲಾಡಿಂಗ್ ಮತ್ತು ಸಿಂಗಲ್ ಟೈಲ್ ಪೈಪ್ ಲಗತ್ತಿಸಲಾಗಿದೆ.

ಪ್ರಸ್ತುತ ಫ್ರಿಲ್ಯಾಂಡರ್ 2ನಲ್ಲಿ ಎರಡು ವೆರಿಯಂಟ್‌ಗಳನ್ನು ಲ್ಯಾಂಡ್ ರೋವರ್ ಆಫರ್ ಮಾಡುತ್ತಿದೆ. ಮೊದಲ ಎಸ್‌ಇ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ 43.25 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಅದೇ ಹೊತ್ತಿದೆ ಎಚ್‌ಎಸ್‌ಇ 48.50 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಇದೀಗ ಬಿಡುಗಡೆಯಾಗಿರುವ ಸ್ಟ್ರೆರ್ಲಿಂಗ್ ವೆರಿಯಂಟ್ ಇವೆರಡರ ನಡುವೆ ಗುರುತಿಸಿಕೊಳ್ಳಲಿದೆ.

Most Read Articles

Kannada
English summary
British manufacturer of luxury SUVs Land Rover is currently owned by Indian automobile giant Tata Motors. They have today launched their latest variant of the Freelander 2 christened as ‘Sterling'. It is a limited edition model and will be available in limited numbers.
Story first published: Thursday, September 4, 2014, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X