ಪ್ಯಾರಿಸ್‌ನಲ್ಲಿ ಲೆಕ್ಸಸ್ ಕಾರುಗಳ ಕಲರವ

By Nagaraja

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 2014 ಪ್ಯಾರಿಸ್ ಮೋಟಾರು ಶೋದಲ್ಲಿ ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳು ಹೊಸ ಹಾಗೂ ಪರಿಷ್ಕೃತ ಮಾದರಿಗಳೊಂದಿಗೆ ಮುಂದೆ ಬಂದಿದೆ.

ಇದರಂತೆಯೇ ವಾಹನೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲೆಕ್ಸಸ್ ಸಹ ಹೊಸತಾದ ನಾಲ್ಕು ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದಿದೆ.


ಲೆಕ್ಸಸ್ ಮಾದರಿಗಳನ್ನು ಯುರೋಪ್‌ನಲ್ಲಿ ಇನ್ನಷ್ಟೇ ಬಿಡುಗಡೆ ಹೊಂದಲಿರುವ ಎನ್‌ಎಕ್ಸ್ ಕಾಂಪಾಕ್ಟ್ ಕ್ರಾಸೋವರ್ ಮಾದರಿಯು ಮುನ್ನಡೆಸಿತ್ತು.

ಇದನ್ನು ಸಂಪೂರ್ಣ ಹೈಬ್ರಿಡ್ ಮಾದರಿಯಾಗಿರುವ ಎನ್‌ಎಕ್ಸ್ 300ಎಚ್ ಹಿಂಬಾಲಿಸಿತ್ತು. ಹಾಗೆಯೇ ಎಲ್ಲ ಹೊಸತನದಿಂದ ಕೂಡಿದ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿರುವ ಎನ್‌ಎಕ್ಸ್ 200ಟಿ ಮಾದರಿಯು ಸಹ ಗಮನ ಸೆಳೆದಿತ್ತು. ಇದು ಮುಂದಿನ ವರ್ಷ ಬಿಡುಗಡೆಯಾಗಲಿದೆ.


ಈ ಪೈಕಿ ಆರ್‌ಸಿ ಎಫ್ ಗರಿಷ್ಠ ನಿರ್ವಹಣೆಯ ಕೂಪೆ ಕಾರು ಪ್ರಮುಖ ಆಕರ್ಷಣೆಯಾಗಿತ್ತು. ಇದು ಆರ್‌ಸಿ 300ಎಚ್ ಹೈಬ್ರಿಡ್ ಕೂಪೆ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ವರದಿಗಳ ಪ್ರಕಾರ ಆರ್‌ಸಿ ಎಫ್ ವರ್ಷಾಂತ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.
Lexus

ಈಗಿರುವ ಸಿಟಿ 200ಎಚ್ ಮತ್ತು ಐಎಸ್ 3000ಎಚ್ ಮಾದರಿಗಳ ಎಫ್ ಸ್ಪೋರ್ಟ್ಸ್ ವರ್ಷನ್‌ಗಳು ಈ ವೇಳೆ ಪ್ರದರ್ಶನಗೊಂಡಿದ್ದವು. ಹಾಗೆಯೇ ಆರ್‌ಎಕ್ಸ್ 450 ಎಚ್ ವಿಶೇಷ ಆವೃತ್ತಿಯು ಇನ್ನಷ್ಟು ಆಸಕ್ತಿ ಕೆರಳಿಸಿತ್ತು.
Most Read Articles

Kannada
English summary
Lexus is presenting four significant new models at the Paris motor show, led by the European launch of the new NX compact crossover. The full hybrid NX 300h is on display immediately ahead of its market launch, alongside the NX 200t, powered by Lexus’s all-new turbo petrol engine, which will be introduced next year.
Story first published: Tuesday, October 7, 2014, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X