ಕೊಯಂಬತ್ತೂರು Rally ಗೆದ್ದು ಬೀಗಿದ ಮಹೀಂದ್ರ ಅಡ್ವೆಂಚರ್

Written By:

ಇದರಲ್ಲಿ ಯಾವುದೇ ಅಚ್ಚರಿಯಿಲ್ಲ ಬಿಡಿ. ಮೊದಲೇ ಆಫ್ ರೋಡ್ ವಾಹನಗಳಲ್ಲಿ ಖ್ಯಾತಿ ಗಿಟ್ಟಿಸಿಕೊಂಡಿರುವ ಮಹೀಂದ್ರ ಸಂಸ್ಥೆಗೆ ಮಗದೊಂದು ಕಿರೀಟ ಮುಡಿಗೇರಿಸಿಕೊಂಡಿದೆ. ಹೌದು, ಆಫ್ ರೋಡ್ ದೈತ್ಯ ಮಹೀಂದ್ರ ಅಡ್ವೆಂಚರ್ ತಂಡವು 'Rally ಆಫ್ ಕೊಯಂಬತ್ತೂರು' ಗೆದ್ದುಕೊಂಡಿದೆ.

'2014 ಇಂಡಿಯನ್ rally ಚಾಂಪಿಯನ್‌ಶಿಪ್' (ಐಆರ್‌ಸಿ) ಭಾಗವಾಗಿರುವ 'Rally ಆಫ್ ಕೊಯಂಬತ್ತೂರು' ಸ್ಪರ್ಧೆಯಲ್ಲಿ ಎಕ್ಸ್‌ಯುವಿ500 ಕಾರನ್ನು ಬಳಸಿಕೊಂಡಿರುವ ಮಹೀಂದ್ರ ಅಡ್ವೆಂಚರ್ ತಂಡವು ಪ್ರಥಮ ಹಾಗೂ ತೃತೀಯ ಪ್ರಶಸ್ತಿ ಬಾಚಿಕೊಂಡಿದೆ. ಇದಕ್ಕೂ ಮೊದಲು 'Rally ಆಫ್ ಮಹಾರಾಷ್ಟ್ರ'ದಲ್ಲೂ ಮಹೀಂದ್ರ ಅಡ್ವೆಂಚರ್ ಗಮನಾರ್ಹ ಸಾಧನೆ ಮಾಡಿತ್ತು.

Mahindra Adventure

ಅಂದ ಹಾಗೆ ಒಟ್ಟು ಆರು ಹಂತಗಳಾಗಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ನಾಸಿಕ್ ಹಾಗೂ ಕೊಯಂಬತ್ತೂರಿನಲ್ಲಿ ಸ್ಪರ್ಧೆ ಯಶಸ್ವಿಯಾಗಿ ನೆರವೇರಿದೆ. ಇನ್ನುಳಿದ ನಾಲ್ಕು rally ಗಳು ಚೆನ್ನೈ, ಬೆಂಗಳೂರು, ಕೋಲ್ಕತ್ತಾ ಮತ್ತು ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಆಟೋಮೋಟಿವ್ ವಿಭಾಗದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿರುವ ವಿವೇಕ್ ನಾಯರ್, ಪ್ರಸ್ತುತ rally ಮಹೀಂದ್ರ ವಾಹನಗಳಿಗೆ ನೈಜ ಪರೀಕ್ಷೆಯೊದಗಿಸಿತ್ತು ಎಂದಿದ್ದಾರೆ.

English summary
Mahindra vehicles are known for off-road nature and reliability in extreme conditions. The Indian carmaker competes in almost every rally and off-road championship in the nation. The had recently taken part in the 'Rally of Coimbatore'.
Story first published: Thursday, July 17, 2014, 11:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark