ಸಬ್ಸಿಡಿ ಪ್ರಾಬ್ಲಂ; ಭಾರತಕ್ಕಿಲ್ಲ ವೆರಿಟೊ ಎಲೆಕ್ಟ್ರಿಕ್ ಕಾರು ?

Written By:

2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಸೆಡಾನ್ ಕಾರು ಭಾರತ ಪ್ರವೇಶ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ ಸಂಸ್ಥೆಯು ಸರಕಾರದ ಸಬ್ಸಿಡಿ ಸವಲತ್ತಿನ ಹೊರತಾಗಿ ಮಾರಾಟ ಮಾಡುವುದು ತುಂಬಾನೇ ದುಬಾರಿಯಾಗಿರಲಿದೆ ಎಂದಿದೆ.

ಅಂದ ಹಾಗೆ ಮುಂದಿನ ಆರು ತಿಂಗಳಲ್ಲಿ ನಿರ್ಮಾಣ ಹಂತ ತಲುಪಲಿರುವ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಮುಂದಿನ ವರ್ಷದಲ್ಲಿ ಭೂತಾನ್ ರಸ್ತೆಯನ್ನು ಪ್ರವೇಶಿಸಲಿದೆ ಎಂಬುದನ್ನು ತಿಳಿಸಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೀಂದ್ರ ರೇವಾ ಇ2ಒ ಎಲೆಕ್ಟ್ರಿಕ್ ಕಾರಿಗೆ ವಿಶಿಷ್ಟ ಎನರ್ಜಿ ಫಿ ಯೋಜನೆ ಜಾರಿ ಮಾಡುತ್ತಾ ಮಹೀಂದ್ರ ರೇವಾ ಸಿಇಒ ಚೇತನ್ ಮೈನಿ ಈ ವಿವರವನ್ನು ನೀಡಿದ್ದಾರೆ.

ವಿದೇಶದಲ್ಲಿ ಮಹೀಂದ್ರ ವಿದ್ಯುತ್ ಚಾಲಿತ ವಾಹನಗಳು ಉತ್ತಮ ಬೇಡಿಕೆ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ ಭೂತಾನ್ ಸರಕಾರವು ಟ್ಯಾಕ್ಸಿ ವಿಭಾಗವನ್ನು ಸಂಪೂರ್ಣ ವಿದ್ಯುನ್ಮಾನಗೊಳಿಸುವ ಪ್ರಯತ್ನದಲ್ಲಿದೆ. ಚೇತನ್ ಪ್ರಕಾರ ಭೂತಾನ್‌ನಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಸೆಡಾನ್ ಕಾರು, ಟ್ಯಾಕ್ಸಿಯ ಪಾತ್ರ ವಹಿಸಲಿದೆ.

 Verito Electric

ಈ ನಡುವೆ ಈಗಾಗಲೇ ಅಭಿವೃದ್ಧಿ ಹಂತದಲ್ಲಿರುವ ಯುರೋಪಿಯನ್ ವರ್ಷನ್ ರೇವಾ ಇ2ಒ, ರಫ್ತು ಪ್ರಕ್ರಿಯೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಆರಂಭವಾಗಲಿದೆ. ಇಲ್ಲಿ ಮೊದಲಿಗೆ ಬ್ರಿಟನ್ ಪ್ರವೇಶಿಸಲಿರುವ ರೇವಾ ಬಳಿಕ ಇನ್ನಿತರ ಯುರೋಪ್ ರಾಷ್ಟ್ರಗಳನ್ನು ಆವರಿಸಲಿದೆ.

ಈಗಾಗಲೇ ನೇಪಾಳ ರಾಷ್ಟ್ರದಲ್ಲಿ ಇ2ಒ ಮಾರಾಟ ಆರಂಭಿಸಿರುವ ಮಹೀಂದ್ರ, ನಿಕಟ ಭವಿಷ್ಯದಲ್ಲೇ ಶ್ರೀಲಂಕಾ ಸೇರಿದಂತೆ ಇತರ ನೆರೆಯ ರಾಷ್ಟ್ರಗಳಲ್ಲೂ ತನ್ನ ವ್ಯಾಪಾರ ಕುದುರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

English summary
Mahindra Verito electric sedan, showcased at the Auto Expo 2014, is near production ready and a company executive recently stated that if required it could be made production ready in six months. However, the company will not launch the electric sedan in India without government subsidies as it would be too expensive to sell.
Story first published: Thursday, February 20, 2014, 9:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark