ದೀಪಾವಳಿ ಕೊಡುಗೆ; ಹೊಸ ಸ್ಕಾರ್ಪಿಯೊ ಬರಮಾಡಿಕೊಳ್ಳಲು ಸಜ್ಜಾಗಿರಿ

Written By:

ಇತ್ತೀಚೆಗಿನ ಸಮಯದಲ್ಲಿ ಅನೇಕ ಬಾರಿ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿರುವ ಬಹುನಿರೀಕ್ಷಿತ ಮಹೀಂದ್ರ ಸ್ಕಾರ್ಪಿಯೊ ಎಸ್‌ಯುವಿ, ಮುಂಬರುವ ಹಬ್ಬದ ಆವೃತ್ತಿಗೂ ಮುಂಚಿತವಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಹೊಸ ಸ್ಕಾರ್ಪಿಯೊಗಾಗಿ ಕಾಯುತ್ತಿರುವ ವಾಹನ ಪ್ರೇಮಿಗಳಿಗೆ, ದೀಪಾವಳಿ ಕೊಡುಗೆ ರೂಪದಲ್ಲಿ ಪರಿಷ್ಕೃತ ಎಸ್‌ಯುವಿ ಆಗಮನವಾಗಲಿದೆ.

ಬಲ್ಲ ಮೂಲಗಳ ಪ್ರಕಾರ, ಮಹೀಂದ್ರ ಸ್ಕಾರ್ಪಿಯೊ ಪರಿಷ್ಕೃತ ಆವೃತ್ತಿಯು 2014 ಸೆಪ್ಟೆಂಬರ್ 23ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಡಬ್ಲ್ಯು105 ಕೋಡ್ ಪಡೆದುಕೊಂಡಿರುವ ಹೊಸ ಸ್ಕಾರ್ಪಿಯೊ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 2.2 ಲೀಟರ್ ಫೋರ್ ಸಿಲಿಂಡರ್ ಟರ್ಬೊ ಚಾರ್ಜ್ಡ್ ಎಂಹಾಕ್ (mHawk) ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 120 ಅಶ್ವಶಕ್ತಿ (290 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, 5 ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.

Mahindra Scorpio

ಇನ್ನು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಏರ್ ಬ್ಯಾಗ್, ಎಬಿಎಸ್, ಇಬಿಡಿ, ಇಎಸ್‌ಸಿ, ಸೆಂಟ್ರಾಲ್ ಕನ್ಸಾಲ್, ಹೊಸ ವಿನ್ಯಾಸದ ಸ್ಟೀರಿಂಗ್ ಮೌಂಟೆಡ್ ಆಡಿಯೋ, ಕ್ರೂಸ್ ಕಂಟ್ರೋಲ್, ಹೊರಗಡೆ ಎಲ್‌ಇಡಿ ಲೈಟಿಂಗ್, ಪರಿಷ್ಕೃತ ಬಂಪರ್, ತಾಜಾ ಗ್ರಿಲ್, ಫಾಗ್ ಲ್ಯಾಂಪ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳಂತಹ ವಿಶಿಷ್ಟತೆಗಳನ್ನು ನೋಡಬಹುದಾಗಿದೆ.

ಗ್ರಾಹಕರ ಬೇಡಿಕೆಯನ್ನು ಮುಂಗಡವಾಗಿ ಅಂದಾಜು ಮಾಡಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಬಹುನಿರೀಕ್ಷಿತ ಸ್ಕಾರ್ಪಿಯೊ ನಿರ್ಮಾಣ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿರುತ್ತದೆ. ಇದು ಪ್ರಮುಖವಾಗಿಯೂ ಟಾಟಾ ಸಫಾರಿ ಸ್ಟ್ರೋಮ್, ರೆನೊ ಡಸ್ಟರ್ ಮತ್ತು ನಿಸ್ಸಾನ್ ಟೆರನೊ ಮಾದರಿಗಳಿಗೆ ಪ್ರತಿಸ್ಪರ್ಧೆಯಾಗಿರಲಿದೆ. ಆದರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಇದು 8ರಿಂದ 12 ಲಕ್ಷ ರು. (ಎಕ್ಸ್ ಶೋ ರೂಂ) ಬೆಲೆಗಳಲ್ಲಿ ಆಘಮನವಾಗುವ ಸಾಧ್ಯತೆಯಿದೆ.

English summary
According to reports, The new Mahindra Scorpio facelift is set to make its entry into the domestic market on 25th September.
Story first published: Saturday, September 13, 2014, 13:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark