ಮುಂಬರುವ ಹಬ್ಬದ ಆವೃತ್ತಿಯಲ್ಲಿ ಮಾರುತಿ ಸಿಯಾಝ್ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಹುನಿರೀಕ್ಷಿತ ಸಿಯಾಝ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ಮಾರುತಿ ಕಾರುಗಳ ಸಾಲಿಗೆ ಮಗದೊಂದು ಆಕರ್ಷಕ ಮಾದರಿಯು ಸೇರ್ಪಡೆಯಾಗಲಿದೆ.

ಇದರೊಂದಿಗೆ ಎಂಟ್ರಿ ಲೆವೆಲ್ ಕಾರುಗಳಲ್ಲಿ ಮಾತ್ರ ಹೆಚ್ಚು ಜನಪ್ರಿಯವಾಗಿದ್ದ ಮಾರುತಿ, ನಿಧಾನವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ. ಈ ವರೆಗೆ ಮಾರುತಿ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಇದೀಗ ಸೆಡಾನ್ ಪಟ್ಟಿಯಲ್ಲೂ ಸಿಯಾಝ್ ಹೊಸ ಭರವಸೆ ಮೂಡಿಸಿದೆ.

Maruti Suzuki Ciaz

ಈಗಾಗಲೇ ಸೆಲೆರಿಯೊ ಎಂಟ್ರಿ ಬಳಿಕ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಮಾರುತಿ ಸಿಯಾಝ್ ಆವೃತ್ತಿಯನ್ನು ಮುಂಬರುವ ಹಬ್ಬದ ಆವೃತ್ತಿಯಲ್ಲಿ ಪರಿಚಯಿಸುವ ಇರಾದೆ ಹೊಂದಿದೆ.

ಸಿಯಾಝ್ ಬೆನ್ನಲ್ಲೇ ಎಸ್ ಕ್ರಾಸ್ ಬಿಡುಗಡೆ ಸಹ ಮಾರುತಿ ಯೋಜನೆಯಲ್ಲಿದೆ. ಇದರೊಂದಿಗೆ ಎಂಟ್ರಿ ಲೆವೆಲ್ ಕಾರುಗಳಿಂದ ಹೆಚ್ಚು ಆಡಂಬರದ ಕಾರುಗಳನ್ನು ಬಯಸುವವರಿಗೆ ಹೆಚ್ಚಿನ ಆಯ್ಕೆ ಮುಂದಿಡಲಿದೆ.

ನಿಮ್ಮ ಮಾಹಿತಿ ಸಿಯಾಝ್ ಆವೃತ್ತಿಯು ಎಸ್‌ಎಕ್ಸ್4 ಮಾದರಿಗೆ ಬದಲಿ ಕಾರಾಗಿರಲಿದೆ. ಆದರೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಹಾಗೆಯೇ ಎರ್ಟಿಗಾಗೆ ಸಮಾನವಾಗಿರುವ 1.4 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಅಂತೆಯೇ ಮ್ಯಾನುವಲ್ ಗೇರ್ ಬಾಕ್ಸ್ ಹಾಗೂ ಪೆಟ್ರೋಲ್ ವೆರಿಯಂಟ್‌ಗಳಲ್ಲಿ ಸಿವಿಟಿ ಆಯ್ಕೆಯಿರಲಿದೆ.

ಹಳೆಯ ಎಸ್‌ಎಕ್ಸ್4 ಮಾದರಿಗೆ ಹೋಲಿಸಿದರೆ ಸಿಯಾಝ್ ಪ್ರೀಮಿಯಂ ವರ್ಷನ್ ಆಗಿರಲಿದೆ. ಇದರಲ್ಲಿ ಸುರಕ್ಷತೆಗೂ ಹೆಚ್ಚಿನ ಗಮನ ವಹಿಸಲಾಗಿದೆ. ಹಾಗಿದ್ದರೂ ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭಿಸಿಲ್ಲ.

Most Read Articles

Kannada
English summary
Maruti Suzuki India is trying to change its image by not only playing in the hatchback segment. At the recent 2014 Auto Expo that was held in New Delhi the Japanese manufacturer revealed its concept model of Ciaz sedan.
Story first published: Saturday, July 12, 2014, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X