100ರ ಸಂಭ್ರಮ; ಜಿನೆವಾದಲ್ಲಿ ಮಸೆರಟಿ ಕೊಡುಗೆ

Written By:

ಪ್ರತಿಷ್ಠಿತ ಜಿನೆವಾ ಮೋಟಾರು ಶೋ ಆರಂಭಕ್ಕೆ ಇನ್ನೇನು ಕೆಲವು ದಿನಗಳ ಮಾತ್ರ ಉಳಿದಿರುವಂತೆಯೇ ಮಸೆರಟಿ ಸಂಸ್ಥೆಯು ತನ್ನ ನೂತನ ಆವೃತ್ತಿಗಳನ್ನು ಪರಿಚಯಿಸಲು ಸನ್ನದ್ಧವಾಗುತ್ತಿದೆ.

ವರದಿಗಳ ಪ್ರಕಾರ ಮಸೆರಟಿ ಸೀಮಿತ ಆವೃತ್ತಿ ಹಾಗೂ ನೂತನ ಕಾನ್ಸೆಪ್ಟ್ ಕಾರು ಜಿನೆವಾದಲ್ಲಿ ಪ್ರದರ್ಶನಗೊಳ್ಳಲಿದೆ. ನಿಮ್ಮ ಮಾಹಿತಿಗಾಗಿ ಮಸೆರಟಿ ಫಿಯೆಟ್ ಕ್ಲೈಸ್ಲರ್ ಆಟೋಮೊಬೈಲ್ಸ್ ಭಾಗವಾಗಿದೆ.

Maserati Special Edition

ಕ್ವಾರ್ಟೊಪೊರ್ಟೆ ಎರ್ಮೆನ್‌ಗಿಲ್ಡ್ ಜೆಗ್ನಾ ಸೀಮಿತ ಆವೃತ್ತಿಯನ್ನು ಮಸೆರಟಿ ಪ್ರದರ್ಶಿಸಲಿದೆ. ಹಾಗಿದ್ದರೂ ಕಾನ್ಸೆಪ್ಟ್ ಕಾರಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವರದಿಗಳ ಪ್ರಕಾರ 100ನೇ ವರ್ಷಾಚರಣೆಯ ಭಾಗವಾಗಿ ಕೇವಲ 100 ಯುನಿಟ್‌ಗಳಷ್ಟೇ ನಿರ್ಮಾಣವಾಗಲಿದೆ.

ಪ್ರಸ್ತುತ ಕಾನ್ಸೆಪ್ಟ್ ಕಾರು ಭವಿಷ್ಯದ ಮಸೆರಟಿ ಕಾರು ಶೈಲಿಯನ್ನು ವರ್ಣಿಸಲಿದೆ. ಇದು ಗ್ರ್ಯಾನ್ ಟರಿಸ್ಮೊ ಆಗಿರುವ ಸಾಧ್ಯತೆ ಇದ್ದರೂ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಅಂದ ಹಾಗೆ 1914ನೇ ಇಸವಿಯಲ್ಲಿ ವಾಹನೋದ್ಯಮ ಪ್ರವೇಶಿಸಿದ್ದ ಮಸೆರಟಿ 1993ರ ಬಳಿಕ ಫಿಯೆಟ್ ಅಧೀನತೆಯಲ್ಲಿದೆ.

English summary
The Geneva Motor Show is a few days away and Maserati will be displaying their Special Edition as well as a Concept Car. Maserati is part of the new Fiat-Chrysler Automobiles(FCA).
Story first published: Saturday, March 1, 2014, 12:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark