ಬೆಂಗಳೂರು ಸಿಬಿಟ್ ಐಟಿ ಹಬ್ಬದಲ್ಲಿ ಬೆಂಝ್ ಕಾರಿನ ಜಲಕ್

Written By:

ವಿಶ್ವದ ಅತ್ಯಂತ ದೊಡ್ಡ ಬ್ಯುಸಿನೆಸ್ ಐಟಿ ಮತ್ತು ಐಸಿಟಿ ಪ್ರದರ್ಶನ ಮೇಳ ಭಾರತದಲ್ಲೇ ಅತ್ಯಂತ ವೇಗದಲ್ಲಿ ಬೆಳೆದು ಬರುತ್ತಿರುವ ಐಟಿ ನಗರ ಬೆಂಗಳೂರು ನಗರದಲ್ಲಿ ನವೆಂಬರ್ 12ರಿಂದ 16ರ ವರೆಗೆ ಆಯೋಜನೆಯಾಗುತ್ತಿದ್ದು, ಇದರಂತೆ ಈ ಕಂಪ್ಯೂಟರ್ ಎಕ್ಸ್‌ಪೋದಲ್ಲಿ ಜರ್ಮನಿಯ ಮರ್ಸಿಡಿಸ್ ಬೆಂಝ್ ಕಾರಿನ ಅದ್ಧೂರಿ ಪ್ರದರ್ಶನ ನಡೆದಿದೆ.

ಈ ಬಾರಿಯ ಸಿಬಿಟ್ ಕಂಪ್ಯೂಟರ್ ಎಕ್ಸ್‌ಪೋಗಾಗಿ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ವಿಶೇಷ ಸಿದ್ಧತೆಯನ್ನು ನಡೆಸಿತ್ತು. ಅಲ್ಲದೆ ಇದೇ ಸಂದರ್ಭದಲ್ಲಿ ಭಾರತದಲ್ಲಿ ಇದುವರೆಗೆ ಲಭ್ಯವಿರದ ಅನೇಕ ಹೊಸ ತಂತ್ರಗಾರಿಕೆಗಳನ್ನು ಹೊರತಂದಿದೆ.

Mercedes Benz

ಸಿಬಿಟ್ 2014 ಕಂಪ್ಯೂಟರ್ ಎಕ್ಸ್‌ಪೋದಲ್ಲಿ ಬೆಂಝ್ ಸಂಸ್ಥೆಯು ತನ್ನ ಸುಧಾರಿತ ಸಿ ಕ್ಲಾಸ್ ಸೆಡಾನ್ ಕಾರನ್ನು ಪ್ರದರ್ಶಿಸಿತ್ತು. ಸಂಸ್ಥೆಯ ಪ್ರಕಾರ ಮಾಹಿತಿ ತಂತ್ರಜ್ಞಾನವು ಆಟೋಮೊಬೈಲ್ ಎಂಜಿನಿಯರಿಂಗ್‌ನ ಬೆನ್ನಲುಬು ಆಗಿದ್ದು, ಭವಿಷ್ಯದಲ್ಲಿ ಪ್ರಯಾಣಿಕರ ಸುರಕ್ಷಿತ ಚಾಲನೆಗಾಗಿ ಇನ್ನಷ್ಟೇ ತಂತ್ರಗಾರಿಕೆಗಳನ್ನು ಆಳವಡಿಕೆ ಮಾಡಲಾಗುವುದು ಎಂದಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಸಿಇಒ ಎಬೆರ್‌ಹಾರ್ಡ್ ಕೆರ್ನ್, "ಆಕರ್ಷಕ ವಿನ್ಯಾಸ ಮಾತ್ರವಲ್ಲದೆ ಅತ್ಯುತ್ತಮ ಗುಣಮಟ್ಟತೆ ಹಾಗೂ ಗರಿಷ್ಠ ನಿರ್ವಹಣೆಯನ್ನು ನಮ್ಮ ಗ್ರಾಹಕರು ನಿರೀಕ್ಷಿಸುತ್ತಾರೆ. ಅಲ್ಲದೆ ತಮ್ಮ ವಾಹನಗಳನ್ನು ಬಳಕೆ ಮಾಡುವಾಗ ಸಂಪರ್ಕ, ಮನರಂಜನೆ ಹಾಗೂ ಮಾಹಿತಿ ಗಿಟ್ಟಿಸಿಕೊಳ್ಳಲು ಬಯಸುತ್ತಾರೆ" ಎಂದಿದ್ದಾರೆ.

ಹಾಗಿದ್ದರೂ ಬೆಲೆಯ ಬಗ್ಗೆ ಬೆಂಝ್ ಸಂಸ್ಥೆಯು ಯಾವುದೇ ಮಾಹಿತಿಯನ್ನು ಹೊರಗೆಡವಿಲ್ಲ. ಇದನ್ನು 2014 ನವೆಂಬರ್ 25ರಂದು ಬಿಡುಗಡೆಯ ವೇಳೆಯಷ್ಟೇ ಬಹಿರಂಗಪಡಿಸಲಿದೆ. ಅಲ್ಲದೆ ಹೊಸ ಸಿ ಕ್ಲಾಸ್ ಮಾದರಿಯು ಹಿಂದಿನಗಿಂತಲೂ ಹೆಚ್ಚು ತಂತ್ರಗಾರಿಕೆಗಳನ್ನು ಪಡೆಯಲಿದೆ.

English summary
German luxury car manufacturer Mercedes-Benz has laid out an aggressive plan for India in 2014. CeBIT is the world's largest business IT and ICT exhibition and conference which will launch its India Edition in Bangalore in November 2014!
Story first published: Thursday, November 13, 2014, 7:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark