ಐಕಾನಿಕ್ ಮಿನಿ 5 ಮಾದರಿಗಳಿಗಷ್ಟೇ ಸೀಮಿತ

By Nagaraja

ಇತ್ತೀಚೆಗಷ್ಟೇ ದೇಶಕ್ಕೆ ಎರಡು ಹೊಸ ಮಾದರಿಗಳನ್ನು ಪರಿಚಯಿಸಿದ್ದ ಐಕಾನಿಕ್ ಮಿನಿ ಬ್ರಾಂಡ್, ಆಧುನಿಕ ಪೀಳಿಗೆಯ ಐದು ಮಾದರಿಗಳನ್ನಷ್ಟೇ ನಿರ್ಮಿಸಲಿದೆ ಎಂದು ಸ್ಪಷ್ಟಪಡಿಸಿದೆ.

ಮ್ಯೂನಿಚ್‌ನಲ್ಲಿ ಮಿನಿ ಬ್ರಾಂಡ್ ಅಧ್ಯಕ್ಷರಾಗಿರುವ ಪೀಟರ್ ಇದನ್ನು ಖಚಿತಪಡಿಸಿದ್ದಾರೆ. ಅಂತೆಯೇ ಮುಂಬರುವ ಮೂರನೇಯ ಮಿನಿ ಕಂಟ್ರಿಮ್ಯಾನ್ ಬ್ರಾಂಡ್ 2015ರಲ್ಲಿ ಜಾಗತಿಕ ಅನಾವರಣಗೊಳ್ಳಲಿದೆ ಎಂದು ತಿಳಿಸಿದೆ.


ಮಿನಿ ಸಂಸ್ಥೆಯು ಇತ್ತೇಚೆಗಷ್ಟೇ ಮೂರು ಹಾಗೂ ಐದು ಡೋರ್‌ಗಳ ಎರಡು ಮಾದರಿಗಳನ್ನು ಬಿಡುಗಡೆಗೊಳಿಸಿತ್ತು. ಇನ್ನು ನಾಲ್ಕನೇ ಮಿನಿ ಮಾದರಿ ಕನ್ವರ್ಟಿಬಲ್ ಎನಿಸಿಕೊಳ್ಳಲಿದ್ದು, ಐದನೇ ಆವೃತ್ತಿ ಯಾವುದೆಂಬುದು ಇನ್ನು ತಿಳಿದು ಬಂದಿಲ್ಲ.

ಪ್ರತಿಷ್ಠಿತ ಮಿನಿ ಪರಂಪರೆ ಉಳಿಸಿಕೊಳ್ಳುವುದು ಅತಿ ಮುಖ್ಯವೆನಿಸಿದೆ. ಹಾಗೆಯೇ ಭವಿಷ್ಯದಲ್ಲಿ ಪ್ಲಗ್ ಇನ್ನ ಮಾದರಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ.

Mini

ನವೆಂಬರ್ 19ರಂದು ಭಾರತ ಪ್ರವೇಶ ಪಡೆದಿರುವ ಮಿನಿ ಮಾದರಿಯು 1.5 ಲೀಟರ್ 3 ಸಿಲಿಂಡರ್ ಟ್ವಿನ್ ಪರರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 114 ಅಶ್ವಶಕ್ತಿ (270 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರಲಿದೆ.
Most Read Articles

Kannada
English summary
Mini has recently revealed that their modern generation model line up will be restricted to only five models. This news came into light during a show at Munich.
Story first published: Friday, November 28, 2014, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X