ಭಾರತಕ್ಕೆ ಎಂಟ್ರಿ ಕೊಡುತ್ತಿರುವ ಫೈವ್ ಡೋರ್, ತ್ರಿ ಡೋರ್ ಮಿನಿ

Written By:

ಜಗತ್ತಿನ ಅತ್ಯಂತ ಆಕರ್ಷಕ ಕಾರುಗಳ ಪಟ್ಟಿಯಲ್ಲಿ ಮಿನಿ ಸಹ ಒಂದಾಗಿದೆ. ಇದರ ವಿನ್ಯಾಸವೇ ವಾಹನ ಪ್ರೇಮಿಗಳಲ್ಲಿ ಬಹಳ ಕುತೂಹಲ ಮೂಡಿಸುತ್ತದೆ. ಇದು ಒಂದು ರೀತಿಯಲ್ಲಿ ಇದು ಬಿಎಂಡಬ್ಲ್ಯು ಸಂಸ್ಥೆಯ ಪ್ರತಿಷ್ಠೆಯ ಸಂಕೇತವಾಗಿದೆ.

ಇದೀಗ ಮಿನಿ ಕಾರುಗಳು ಮತ್ತೆ ಸುದ್ದಿಯಲ್ಲಿದೆ. ಏಕೆಂದರೆ ಭಾರತದಲ್ಲಿ ಎರಡು ಹೊಸತಾದ ಮಿನಿ ಮಾದರಿಗಳನ್ನು ಪರಿಚಯಿಸಲು ಜರ್ಮನಿ ಮೂಲದ ಬಿಎಂಡಬ್ಲ್ಯು ಸಂಸ್ಥೆ ನಿರ್ಧರಿಸಿದೆ. ನಿಮ್ಮ ಮಾಹಿತಿಗಾಗಿ ಬ್ರಿಟನ್ ಮೂಲದ ಮಿನಿ ಅಧೀನತೆಯನ್ನು ಬಿಎಂಡಬ್ಲ್ಯು ಹೊಂದಿದೆ.

To Follow DriveSpark On Facebook, Click The Like Button

ಯಾವಾಗ ಬಿಡುಗಡೆ?

2014 ನವೆಂಬರ್ 19ರಂದು ಹೊಸ ಮಾದರಿಗಳು ಎಂಟ್ರಿ ಕೊಡಲಿದ್ದು, ಮೂರು ಹಾಗೂ ಐದು ಬಾಗಿಲುಗಳ ವಿನ್ಯಾಸವನ್ನು ಹೊಂದಿರಲಿದೆ.

ವಿಶಿಷ್ಟತೆ ಏನು?

ಇದೇ ಮೊದಲ ಬಾರಿಗೆ ಕಳೆದ 55 ವರ್ಷಗಳಲ್ಲಿ ಬ್ರಿಟನ್‌ನ ಈ ಮಿನಿ ಬ್ರಾಂಡ್ ಐದು ಬಾಗಿಲುಗಳ ಮಾದರಿಯನ್ನು ಪರಿಚಯಿಸುತ್ತಿದೆ. ಇದು ಒಳಗಡೆ ಹೆಚ್ಚು ಸ್ಥಳಾವಕಾಶ ಮತ್ತು ಸುಧಾರಿತ ಬೂಟ್ ಸ್ಪೇಸ್ ಪಡೆದುಕೊಳ್ಳಲಿದೆ.

ಪ್ಯಾರಿಸ್‌ನಲ್ಲೂ ಕಸರತ್ತು...

ಇದಕ್ಕೂ ಮೊದಲು 2014 ಅಕ್ಟೋಬರ್ 4ರಂದು ನಡೆಯ ಪ್ಯಾರಿಸ್ ಮೋಟಾರು ಶೋದಲ್ಲಿ ಫೈವ್ ಡೋರ್ ಮಿನಿ ಕಾರು ಪ್ರದರ್ಶನಗೊಂಡಿತ್ತು. ಐದು ಬಾಗಿಲುಗಳನ್ನು ಆಳವಡಿಸುವ ಮೂಲಕ ಹಿಂದುಗಡೆ ಪ್ರಯಾಣಿಕರಿಗೂ ಸುಲಭವಾಗಿ ಒಳ ಪ್ರವೇಶಿಸಬಹುದಾಗಿದೆ. ಅದೇ ರೀತಿ ಲಗ್ಗೇಜ್ ಜಾಗ ಹೆಚ್ಚು ಮಾಡುವ ನಿಟ್ಟಿನಲ್ಲಿ ಹಿಂದುಗಡೆ ಸೀಟುಗಳನ್ನು 60:40 ನಿಷ್ಪತ್ತಿಯಲ್ಲಿ ರಚಿಸಲಾಗಿದೆ.

mini

ಎಂಜಿನ್..

ಅಂದ ಹಾಗೆ ಆರು ಎಂಜಿನ್ ಆಯ್ಕೆಗಳಲ್ಲಿ ಮಿನಿ ಫೈವ್ ಡೋರ್ ಕಾರು ಲಭ್ಯವಿರಲಿದೆ. ಕಾರಿನಡಿಯಲ್ಲಿ ತ್ರಿ ಅಥವಾ ಫೋರ್ ಸಿಲಿಂಡರ್ ಎಂಜಿನ್ ಇರಲಿದ್ದು, 95ರಿಂದ 192 ವರೆಗೆ ಅಶ್ವಶಕ್ತಿ ಉತ್ಪಾದಿಸಲಿದೆ.

ಹೊಸತೇನು?

ಬ್ರಿಟನ್‌ನ ಈ ವಾಹನ ತಯಾರಿಕ ಸಂಸ್ಥೆಯು ಹೊಸತಾದ ಸಸ್ಪೆಷನ್ ತಂತ್ರಜ್ಞಾನ ಆಳವಡಿಸಿದ್ದು, ಇದು ಚಾಲನೆಯನ್ನು ಇನ್ನಷ್ಟು ಮೋಜು ಹಾಗೂ ಸಂತೋಷದಾಯಕವಾಗಿಸಲಿದೆ. ಅದೇ ರೀತಿ ನಾವೀನ್ಯತೆಯ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂ ಕೂಡಾ ಇರಲಿದೆ.

3 ಡೋರ್ ವರ್ಷನ್...

ಇದೇ ವೇಳೆಯಲ್ಲಿ ಮೂರು ಬಾಗಿಲುಗಳ ಮಿನಿ ಸಹ ಎಂಟ್ರಿ ಕೊಡಲಿದೆ. ಇದು ಕೂಡಾ ಹೊಸ ವಿನ್ಯಾಸದೊಂದಿಗೆ ಸಮಾನ ಎಂಜಿನ್ ಪಡೆಯಲಿದೆ. ಈ ಮೂಲಕ ಗ್ರಾಹಕರಿಗೆ ಐದು ಅಥವಾ ಮೂರು ಬಾಗಿಲುಗಳ ಮಿನಿ ಕಾರನ್ನು ಆಯ್ಕೆ ಮಾಡುವ ಅವಕಾಶವಿರಲಿದೆ. 

English summary
BMW India today has confirmed to us that they will be launching two new MINI products in India. They will be introducing Indians to the new 3-door and 5-door MINI on the 19th of November, 2014.
Story first published: Friday, October 24, 2014, 10:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark