ಮುಂಬೈ ಹಾರ್ನ್ ಮುಕ್ತ ನಗರವಾಗಲಿದೆ!

Written By:

ಮುಂಬೈ ಮಹಾನಗರದಲ್ಲಿ ಅತಿ ಹೆಚ್ಚು ಶಬ್ದ ಮಾಲಿನ್ಯವನ್ನು ಕಾಣಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ತನ್ನ ವರದಿಯಲ್ಲಿ ಇದನ್ನು ಉಲ್ಲೇಖಿಸಿರುವುದನ್ನು ನೀವೂ ಗಮನಿಸಿರಬಹುದು.

ದೈನಂದಿನಗಳಲ್ಲಿ ಬಹುತೇಕ ಎಲ್ಲ ಚಾಲಕರಿಗೂ ಹಾರ್ನ್ ಹೊಡೆಯುವುದು ಸಾಮಾನ್ಯ ಪ್ರವೃತ್ತಿಯಾಗಿ ಬಿಟ್ಟಿದೆ. ಚಾಲಕರು ಸುಮ್ ಸುಮ್ನೆ ಹಾರ್ನ್ ಹೊಡೆಯುತ್ತಾರೆ ಎಂದು ಜನರು ಆಪಾದಿಸುತ್ತಾರೆ. ಆಸ್ಪತ್ರೆ ಹಾಗೂ ಶಾಲೆ ಪರಿಸರದಲ್ಲೂ ಇದನ್ನು ಬಳಕೆ ಮಾಡುತ್ತಿರುವುದು ತೀರಾ ಶೋಚನೀಯವಾಗಿದೆ.

Mumbai City To Be Horn Free

ಇತರ ಗಾಡಿ ಅಥವಾ ಜನರನ್ನು ಎಚ್ಚರಿಸುವುದು ಹಾರ್ನ್ ಬಳಕೆಯ ಮುಖ್ಯ ಉದ್ದೇಶವಾಗಿದೆ. ಆದರೆ ಸಾಧ್ಯವಾದಷ್ಟು ಮಿತವಾದ ಬಳಕೆ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲಿದೆ. ಟ್ರಾಫಿಕ್ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಹಾರ್ನ್ ಹೊಡೆಯುವುದರಿಂದ ಕಿರಿಕಿರಿ ತಪ್ಪಿದ್ದಲ್ಲ.

ಇದರಂತೆ ಮುಂಬೈನಲ್ಲೂ ಹಾರ್ನ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಮ್ಮಿಕೊಳ್ಳಲಾಗಿದ್ದು, ನೂತನ 'ಪ್ರೊಜೆಕ್ಟ್ ಬ್ಲೀಪ್' ಉಪಕರಣ ಲಗತ್ತಿಸಲಾಗುತ್ತಿದ್ದು, ಇದು ವಿಪರೀತ ಹಾರ್ನ್ ಬಳಕೆಯನ್ನು ತಡೆಗಟ್ಟಲಿದೆ. ಇದನ್ನು ನಿರ್ಮಿಸಿರುವ ಮಯೂರ್ ಟೆಕ್‌ಚಾಂದನಿ ಪ್ರಕಾರ ನೂತನ ಉಪಕರಣ ಹಾರ್ನ್ ಬಳಕೆಯನ್ನು ಶೇಕಡಾ 60ರಷ್ಟು ಕಡಿತಗೊಳಿಸಲಿದೆ. ಅಲ್ಲದೆ ಅತಿ ಹೆಚ್ಚು ಹಾರ್ನ್ ಬಳಕೆ ಮಾಡಿದ್ದಲ್ಲಿ ಇದು ಚಾಲಕರನ್ನು ಎಚ್ಚರಿಸಲಿದೆ ಎಂದಿದ್ದಾರೆ.

ಮಗದೊಂದು ಓರೆನ್ ಹಾರ್ನ್ ಯುಸೇಜ್ ಮೀಟರ್ ಎಂಬ ಉಪಕರಣ ಬಳಕೆದಾರರಿಗೆ ನಿರ್ದಿಷ್ಟ ಪ್ರಯಾಣದಲ್ಲಿ ಮಾತ್ರ ಹಾರ್ನ್ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈ ಎಲ್ಲ ಬೆಳವಣಿಗೆಗಳು ಮುಂಬೈನಲ್ಲಿ ಶಬ್ದ ಮಾಲಿನ್ಯ ಕಡಿಮೆ ಮಾಡಲು ನೆರವಾಗಲಿದೆ.

ಇಂದಿನ ಫೇಸ್‌ಬಕ್ ವೀಡಿಯೋ ನೋಡಲು ಮರೆಯದಿರಿ

Post by DriveSpark.

English summary
Mumbai has decided to lower the noise created by excessive honking by introducing and creating awareness of certain products. A gadget called 'Project Bleep' warns the occupants of the car, if the driver honks too much.
Story first published: Saturday, April 5, 2014, 11:14 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more