ಮತ್ತೆ ಅಗ್ಗವಾಯ್ತು ಪೆಟ್ರೋಲ್, ಡೀಸೆಲ್
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಕಳೆದ ಆಗಸ್ಟ್ ತಿಂಗಳ ಬಳಿಕ ಏಳನೇ ಬಾರಿಗೆ ಇಂಧನ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆಯಲ್ಲಿ 91 ಪೈಸೆ ಅಂತೆಯೇ ಡೀಸೆಲ್ ದರ 84 ಪೈಸೆ ಇಳಿಕೆ ಕಂಡುಬಂದಿದೆ. ಹೊಸ ದರವು ಭಾನುವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಹಿನ್ನೆಲೆಯಲ್ಲಿ ನಗರವಾರು ಇಂಧನ ಬೆಲೆಗಳಲ್ಲಿ ವ್ಯತ್ಯಾಸ ಕಂಡುಬರಲಿದೆ.
ಇದಕ್ಕೂ ಮೊದಲು ನವೆಂಬರ್ 1ರಂದು ಪೆಟ್ರೋಲ್‌ಗೆ 2.41 ರು. ಅಂತೆಯೇ ಡೀಸೆಲ್ ಬೆಲೆ 2.25 ರು.ಗಳಷ್ಟು ಇಳಿಕೆ ಕಂಡುಬಂದಿತ್ತು.
- ಜೂನ್ ತಿಂಗಳ ಬಳಿಕ ಪೆಟ್ರೋಲ್ ಬೆಲೆ ಇಳಿಕೆ - 10.27 ರು.
- ಅಕ್ಟೋಬರ್ 18ರ ಬಳಿಕೆ ಡೀಸೆಲ್ ಬೆಲೆಯಲ್ಲಿ ಇಳಿಕೆ - 6.46 ರು.

ಬೆಂಗಳೂರು ಪರಿಷ್ಕೃತ ದರ
- ಪೆಟ್ರೋಲ್ - 69.54 ರು.
- ಡೀಸೆಲ್ - 57.10 ರು.
ನವದೆಹಲಿ ಪರಿಷ್ಕೃತ ದರ
- ಪೆಟ್ರೋಲ್ - 63.33 ರು.
- ಡೀಸೆಲ್ - 52.51 ರು.
ಮುಂಬೈ ಪರಿಷ್ಕೃತ ದರ
- ಪೆಟ್ರೋಲ್ - 70.95 ರು.
- ಡೀಸೆಲ್ - 60.11 ರು.
ಕಳೆದ ಜೂನ್ ತಿಂಗಳ ಬಳಿಕ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡುಬಂದಿದ್ದು ಪ್ರತಿ ಬ್ಯಾರೆಲ್‌ಗೆ 70 ಅಮೆರಿಕನ್ ಡಾಲರ್‌ಗೆ ಬಂದು ತಲುಪಿದೆ. ಇದರಂತೆ ಜೂನ್ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಅನುಕ್ರಮವಾಗಿ ಶೇಕಡಾ 11 ಹಾಗೂ 8ರಷ್ಟು ಇಳಿಕೆಯಾಗಿದೆ.


Click it and Unblock the Notifications








