ಸ್ಕೋಡಾ ಡಬಲ್ ಧಮಾಕಾ; ರಾಪಿಡ್ ವಿಶೇಷ ಆವೃತ್ತಿಗಳು ಲಾಂಚ್

Written By:

ವಿಶ್ವದ ಪ್ರತಿಷ್ಠಿತ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಕೋಡಾ, ತನ್ನ ಜನಪ್ರಿಯ ರಾಪಿಡ್ ಹ್ಯಾಚ್‌ಬ್ಯಾಕ್ ಕಾರಿನ ಎರಡು ವಿಶೇಷ ಸೀಮಿತ ಆವೃತ್ತಿಗಳನ್ನು ಅನಾವರಣಗೊಳಿಸಿದೆ.

ಇದರಲ್ಲಿ ಮೊದಲನೆಯದ್ದು ರಾಪಿಡ್ ಎಸ್‌ಇ ಕನೆಕ್ಟ್. ಇದು ರಾಪಿಡ್ 1.2 ಲೀಟರ್ ಟಿಎಸ್‌ಐ 86ಪಿಎಸ್ ಎಸ್‌ಇ ತಲಹದಿಯಲ್ಲಿ ನಿರ್ಮಿಸಲಾಗಿದೆ. ಎರಡು ವಿಧದ ಮೆಟ್ಯಾಲಿಕ್ ಪೈಂಟ್ ಆಯ್ಕೆ, 16 ಇಂಚು ಆಂಟಿಯಾ ಅಲಾಯ್ ವೀಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಅಮ್ಯೂನ್ಡ್‌ಸೆನ್ ಸ್ಯಾಟಲೈಟ್ ನೇವಿಗೇಷನ್ ಜತೆ ಡಿಎಬಿ ಡಿಜಿಟಲ್ ರೆಡಿಯೋ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಸ್ಕೋಡಾದಿಂದ ಆಗಮನವಾಗಿರುವ ಎರಡನೇ ಸೀಮಿತ ಆವೃತ್ತಿ ರಾಪಿಡ್ ಸ್ಪೋರ್ಟ್. ಇದು 1.2 ಲೀಟರ್ ಟಿಎಸ್‌ಐ 105ಪಿಎಸ್ ಎಸ್‌ಇ ಮಾದರಿ ತಲಹದಿಯಲ್ಲಿ ರೂಪಿಸಲಾಗಿದೆ. 17 ಇಂಚು ಅಲಾಯ್ ವೀಲ್, ಸನ್ ಸೆಟ್ ಗ್ಲಾಸ್, ಫ್ರಂಟ್ ಫಾಗ್ ಲೈಟ್, ಸ್ಪೋರ್ಟ್ಸ್ ಸೀಟ್, ಸ್ಟೀಲ್ ಪೆಡ್ಯಾಲ್, ಬ್ಲ್ಯಾಕ್ ಡೋರ್ ಮಿರರ್ ಮತ್ತು ರಿಯರ್ ಸ್ಪಾಯ್ಲರ್ ಪ್ರಮುಖ ವಿಶೇಷತೆಯಾಗಿರಲಿದೆ.

Skoda Rapid Special Edition
English summary
Skoda has unveiled two limited edition of the Rapid hatchback. Each car will feature unique and extra equipment worth thousands of pounds.
Story first published: Saturday, January 18, 2014, 14:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark