ಸಿಂಗಾಪುರ ಏರ್‌ಲೈನ್ಸ್‌ನಿಂದ ಎಫ್1 ಟಿಕೆಟ್ ಗೆಲ್ಲುವ ಅವಕಾಶ

Written By:

ಇಂಡಿಯನ್ ಫಾರ್ಮುಲಾ ಒನ್ ಗ್ರ್ಯಾನ್ ಪ್ರಿ ನಿಲುಗಡೆಗೊಂಡಿದ್ದು, ಸದ್ಯಕ್ಕಂತೂ ದೇಶಕ್ಕೆ ವಾಪಾಸಾಗುವ ಸಾಧ್ಯತೆಗಳಿಲ್ಲ. ಹಾಗಿದ್ದರೂ ನೀವು ಎಫ್1 ಅಭಿಮಾನಿಯಾಗಿದ್ದಲ್ಲಿ ಫಾರ್ಮುಲಾ ಒನ್ ರೇಸ್ ನೋಡುವ ನಿಮ್ಮ ಕನಸನ್ನು ಸಿಂಗಾಪುರ ಏರ್‌ಲೈನ್ಸ್ ನನಸಾಗಿಸಲಿದೆ.

ಭಾರತಕ್ಕೆ ಹತ್ತಿರವಾಗಿರುವ ಸಿಂಗಾಪುರದಲ್ಲಿ ನಡೆಯಲಿರುವ ಎಫ್1 ರೇಸ್‌ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಹೊಂದಿರುವ ಸಿಂಗಾಪುರ ಏರ್‌ಲೈನ್ಸ್, ಎಫ್1 ಪ್ರೇಮಿಗಳಿಗಾಗಿ ಇಂತಹದೊಂದು ಪ್ಯಾಕೇಜ್ ಮುಂದಿರಿಸಿದೆ.

To Follow DriveSpark On Facebook, Click The Like Button

ಈ ಸಂದರ್ಭದಲ್ಲಿ ಸಿಂಗಾಪುರ ಪಯಣ ಬೆಳೆಸಲಿರುವ ಭಾರತೀಯ ಪ್ರಯಾಣಿಕರು ಶೇಕಡಾ 11ರಷ್ಟು ವೆಚ್ಚ ಉಳಿತಾಯ ಮಾಡಬಹುದಾಗಿದೆ. ಈ ಫಾರ್ಮುಲಾ ಒನ್ ಪ್ಯಾಕೇಜ್‌ನ ನಾಲ್ಕು ದಿನಗಳ ಪಯಣದಲ್ಲಿ ಮೂರು ರಾತ್ರಿಗಳ ತಂಗುವ ಸೌಲಭ್ಯ ಮತ್ತು 2014 ಫಾರ್ಮುಲಾ ಒನ್ ಸಿಂಗಾಪುರ ಏರ್‌ಲೈನ್ಸ್ ಸಿಂಗಾಪುರ ಗ್ರ್ಯಾನ್ ಪ್ರಿಕ್ಸ್ ಟಿಕೆಟುಗಳು ಒಳಗೊಂಡಿರಲಿದೆ.

ಸಿಂಗಾಪುರ ಎಫ್1 ರೇಸ್ ರಾತ್ರಿ ವೇಳೆಯಲ್ಲಿ ಆಯೋಜನೆಯಾಗುತ್ತಿರುವುದು ಇನ್ನಷ್ಟು ರೋಚಕತೆಯನ್ನುಂಟು ಮಾಡಿದೆ. ಭಾರತೀಯರಿಗೆ ಗ್ರೀನ್ ರೂಂ ಟಿಕೆಟ್‌ಗೆ ಅಪ್‌ಗ್ರೇಡ್ ಮಾಡುವ ಅವಕಾಶವೂ ಇದೆ. ಇದು ನಾಲ್ಕು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದಕ್ಕಾಗಿ ನೀವು ಆಗಸ್ಟ್ 15ಗಿಂತಲೂ ಮುಂಚಿತವಾಗಿ ಬುಕ್ಕಿಂಗ್ ಮಾಡಿರಬೇಕು. ಸಿಂಗಾಪುರ ಗ್ರ್ಯಾನ್ ಪ್ರಿಕ್ಸ್ 2014 ಸೆಪ್ಟೆಂಬರ್ 19ರಿಂದ 21ರ ವರೆಗೆ ನಡೆಯಲಿದೆ. ನೀವು ಅದೃಷ್ಟಶಾಲಿಗಳಾಗಿದ್ದಲ್ಲಿ ಗ್ರೀನ್ ರೂಂ ಟಿಕೆಟ್ ಗೆಲ್ಲಬಹುದಾಗಿದೆ.

Singapore Airlines
English summary
The Indian Formula One GP has been cancelled and will not return soon. However, if you are a Formula One fan and have not witnessed the race in India, the closest race is at Singapore. The Singapore GP is a night race, which make it special from other races.
Story first published: Saturday, June 28, 2014, 13:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark