ಸಿಐಐ ಡಿಸೈನ್ ಎಕ್ಸೆಲನ್ಸ್ ಪ್ರಶಸ್ತಿ ಬಾಚಿಕೊಂಡ ಟಾಟಾ

Written By:

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಜೆಸ್ಟ್ ಪ್ರಯಾಣಿಕ ಕಾರು ಹಾಗೂ ಅಲ್ಟ್ರಾ ವಾಣಿಜ್ಯ ವಾಹನ ನೆರವಿನೊಂದಿಗೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, 2014 ಸಿಐಐ ಡಿಸೈನ್ ಎಕ್ಸೆಲನ್ಸ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

2011ನೇ ಇಸವಿಯಿಂದಲೇ ಸಿಐಐ ಪ್ರಶಸ್ತಿ ನೀಡಲಾಗುತ್ತಾ ಬರಲಾಗುತ್ತಿದ್ದು, ದೇಶದ ವಾಹನ ತಯಾರಕ ಸಂಸ್ಥೆಗಳ ನಡುವೆ ಡಿಸೈನ್ ಪೈಪೋಟಿ ಹೆಚ್ಚಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

Tata Zest

ಮೊಬಿಲಿಟಿ ವಿಭಾಗದಲ್ಲಿ 10ಕ್ಕೂ ಹೆಚ್ಚು ವಾಹನಗಳನ್ನು ಹಿಂದಿಕ್ಕಿರುವ ಟಾಟಾ ಜೆಸ್ಟ್ ಒಟ್ಟಾರೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಜೆಸ್ಟ್ ಕಾರು ಪ್ರಯಾಣಿಕ ವಿಭಾಗದಲ್ಲಿ ಅತ್ಯುತ್ತಮ ವಿನ್ಯಾಸಿತ ಕಾರು ವಿನ್ಯಾಸಕ್ಕೆ ಪಾತ್ರವಾಗಿದೆ. ಇನ್ನೊಂದೆಡೆ ಟಾಟಾ ಅಲ್ಟ್ರಾ, ನಾಲ್ಕು ಚಕ್ರಗಳ ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ವಿನ್ಯಾಸದ ಟ್ರಕ್ ಪ್ರಶಸ್ತಿಗೆ ಭಾಜನವಾಗಿದೆ.

ಈ ಸಂದರ್ಭದಲ್ಲಿ ಅತೀವ ಸಂತಸ ವ್ಯಕ್ತಪಡಿಸಿರುವ ಟಾಟಾ ಮೋಟಾರ್ಸ್ ಡಿಸೈನ್ ಮುಖ್ಯಸ್ಥ ಪ್ರತಾಪ್ ಬೋಸ್, ಇನ್ನು ಮುಂದೆಯೂ ಅತ್ಯುತ್ತಮ ಗುಣಮಟ್ಟದ ಕಾರುಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದಿದ್ದಾರೆ.

ಹೊರಿಝೊನೆಕ್ಸ್ಟ್ ಸಿದ್ಧಾಂತದ ಅಡಿಯಲ್ಲಿ ನಿರ್ಮಾಣವಾದ ಮೊದಲ ಕಾರು ಜೆಸ್ಟ್ ಆಗಿದೆ. ಇದು ಟಾಟಾದ ಹೊಸ ವಿನ್ಯಾಸ ತತ್ವಶಾಸ್ತ್ರವನ್ನು ಸಾರುತ್ತಿದೆ. ಇದು ಹ್ಯೂಮನಿಟಿ ಲೈನ್, ಡೈಮಂಡ್ ಡಿಎಲ್‌ಒ ಮತ್ತು ಸ್ಲಿಂಗ್‌ಶಾಟ್ ಲೈನ್‌ಗಳೆಂಬ ಮೂರು ವೈಶಿಷ್ಟ್ಯಗಳನ್ನು ನಿರೂಪಿಸುತ್ತಿದೆ.

ಆಟೋಮೊಬೈಲ್ ಆಕ್ಸೆಸರಿ - ಶೇ. 75ರಷ್ಟು ರಿಯಾಯಿತಿ - ಸೀಮಿತ ಆಫರ್ ತ್ವರೆ ಮಾಡಿ

English summary
Tata Motors, with the Zest from its Passenger Vehicle (PV) and the Ultra from its Commercial Vehicle (CV) stable, has won the top honors at the recently concluded 2014 CII Design Excellence Awards.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark