ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಟಾಟಾ ಜೆಸ್ಟ್ ಮೆರಗು

By Nagaraja

ಇಡೀ ಭಾರತ ದೇಶ 68ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ಅತ್ತ ವಾಹನೋದ್ಯಮ ಸಹ ಇದರಿಂದ ಹೊರತಾಗಿಲ್ಲ. ಈಗಾಗಲೇ ಹ್ಯುಂಡೈ ಎಲೈಟ್ ಐ20 ಬಿಡುಗಡೆಗೆ ವೇದಿಕೆ ಸಿದ್ಧಗೊಂಡಿದೆ (ಇಲ್ಲಿದೆ ಓದಿ).

ಈ ನಡುವೆ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಜನತೆಗೆ ಹೊಸ ಕೊಡುಗೆಯನ್ನು ನೀಡಲು ಮುಂದಾಗಿದೆ.


ಹೌದು, ಎಲ್ಲ ಹೊಸತನಗಳಿಂದ ಕೂಡಿರುವ ನೂತನ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಆಗಸ್ಟ್ 12ರಂದು (ನಾಳೆ) ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು 2014 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಟಾಟಾ ಜೆಸ್ಟ್ ಭರ್ಜರಿ ಪ್ರದರ್ಶನ ಕಂಡಿತ್ತು. ಕೇವಲ ಜೆಸ್ಟ್ ಮಾತ್ರವಲ್ಲ ಇದೇ ಆಟೋ ಶೋದಲ್ಲಿ ಮಗದೊಂದು ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಸಹ ಅನಾವರಣಗೊಳಿಸಲಾಗಿತ್ತು.

ದೇಶದ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ, ಜೆಸ್ಟ್ ಮಾದರಿಯನ್ನು ಬಹುಬೇಗನೇ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್ ಮತ್ತು ಹ್ಯುಂಡೈ ಎಕ್ಸ್‌‍ಸೆಂಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ವಿಶೇಷವೆಂದರೆ ಈ ಎರಡು ಮಾದರಿಗಳಿಗೆ ಟಾಟಾ ಮೋಟಾರ್ಸ್ ಹೊಸ ವಿನ್ಯಾಸ ತತ್ವಶಾಸ್ತ್ರವನ್ನು ಅನುಸರಿಸಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ. ಇದು ಟಾಟಾದ ಮೇಲಿರುವ ಟ್ಯಾಕ್ಸಿ ಕಾರೆಂಬ ಅಪವಾದವನ್ನು ತೊಳಗಿಸಲಿದೆ ಎಂಬುದು ಬಹುತೇಕರ ನಿರೀಕ್ಷೆಯಾಗಿದೆ.

tata zest

ಎಂಜಿನ್
ನಿಮ್ಮ ಮಾಹಿತಿಗಾಗಿ, ಹೊಸ ಟಾಟಾ ಜೆಸ್ಟ್ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ಕ್ರಾಂತಿಕಾರಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆ ಮಾಡಲಾಗಿದೆ. ಇದು 88.7 ಅಶ್ವಶಕ್ತಿ (140 ಎನ್‍ಎಂ ಟಾರ್ಕ್) ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಅದೇ ರೀತಿ 1.3 ಲೀಟರ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ ಸಹ ಒದಗಿಸಲಾಗುತ್ತಿದೆ. ಅಂದರೆ 88.7 ಅಶ್ವಶಕ್ತಿ (200 ಎನ್‍‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಐಚ್ಛಿಕ ಎಫ್-ಟ್ರಾನಿಕ್ ಆಟೋಮ್ಯಾಟಿಕ್ ಅಥವಾ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಟಾಟಾ ಜೆಸ್ಟ್‌ನಲ್ಲಿ 390 ಲೀಟರ್ ಬೂಟ್ ಸ್ಪೇಸ್ ಇರಲಿದೆ. ಅಲ್ಲದೆ ಮುಂದುವರಿದ ಎಬಿಎಸ್, ಇಬಿಡಿ ಜೊತೆಗೆ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಯಿರಲಿದೆ. ಇದಲ್ಲದೆ ಡ್ಯುಯಲ್ ಎಸ್‍ಆರ್‌ಎಸ್ ಏರ್ ಬ್ಯಾಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಅಲ್ಟ್ರಾಸೋನಿಕ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಪ್ರೊಜೆಕ್ಟರ್ ಹೆಡ್‌ಲೈಟ್, ಎಲ್‌ಇಡಿ ಪಾರ್ಕಿಂಗ್ ಲೈಟ್ಸ್ ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಸೌಲಭ್ಯವಿರಲಿದೆ.

ಬುಕ್ಕಿಂಗ್ ಪ್ರಕ್ರಿಯೆ ಹೇಗೆ?
ಹಾಗೊಂದು ವೇಳೆ ಎಲ್ಲ ಹೊಸತನದಿಂದ ಕೂಡಿರುವ ಟಾಟಾ ಜೆಸ್ಟ್ ಕಾರನ್ನು ತಮ್ಮದಾಗಿಸಿಕೊಳ್ಳಲು ಬಯಸುವುದಾದ್ದಲ್ಲಿ ಇಲ್ಲಿ ಕೊಟ್ಟಿರುವ ಟಾಟಾ ಜೆಸ್ಟ್ ಒನ್‌ಲೈನ್ ಬುಕ್ಕಿಂಗ್ ಲಿಂಕ್‌ಗೆ (TATAZESTONLINEBOOKING) ಭೇಟಿ ಕೊಡಬಹುದಾಗಿದೆ. ಕೇವಲ 21,000 ರು.ಗಳಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಇನ್ನಷ್ಟು ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಇದರ ಬೇಸ್ ವೆರಿಯಂಟ್ ದರ 4.5 ಲಕ್ಷ ರು.ಗಳಾಗಿರಲಿದೆ.

Most Read Articles

Kannada
English summary
Tata Motors India had revealed its two new products, earlier this year at the 2014 Auto Expo, which was held at Delhi. They Indian manufacturer has decided to launch its compact sedan christened as the ‘Zest', on the 12th of August, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X