ಬೆಂಗ್ಳೂರಲ್ಲಿ ಈಗ ರಿಕ್ಷಾಗಿಂತಲೂ ಅಗ್ಗ ನ್ಯಾನೋ ಟ್ಯಾಕ್ಸಿ

By Nagaraja

ಹೌದು, ಇದನ್ನು ಕೇಳಿದಾಗ ನಿಮ್ಮಲ್ಲಿ ಅಚ್ಚರಿಯುಂಟಾಗಬಹುದು. ಆದರೆ ನೀವಿದನ್ನು ನಂಬಲೇಬೇಕು. ಬೆಂಗಳೂರಿನಲ್ಲಿ ಆಟೋ ರಿಕ್ಷಾಗಿಂತಲೂ ಅಗ್ಗವಾಗಿದೆ ಕಾರು ಪಯಣ.

ಖಾಸಗಿ ಟ್ಯಾಕಿ ನಿರ್ವಾಹಕ ಸಂಸ್ಥೆಯಾಗಿರುವ ಟ್ಯಾಕ್ಸಿ ಫಾರ್ ಶುವರ್ (TaxiForSure)ಈಗಾಗಲೇ ನ್ಯಾನೋ ಟ್ಯಾಕ್ಸಿ ಮಾರುಕಟ್ಟೆಗಿಳಿಸಿದ್ದು, ರಿಕ್ಷಾ ಶುಲ್ಕಗಿಂತಲೂ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಹೆಚ್ಚು ಸುರಕ್ಷಿತ ಪಯಣವನ್ನು ಖಾತ್ರಿಪಡಿಸುತ್ತಿದೆ.


ಆಟೋ ರಿಕ್ಷಾದಲ್ಲಿ ಮೊದಲ 1.9 ಕೀ.ಮೀ.ಗೆ 25 ರು. ಹಾಗೂ ಬಳಿಕದ ಪ್ರತಿ ಕೀ.ಮೀ.ಗೆ 13 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಅದೇ ಹೊತ್ತಿಗೆ ಟ್ಯಾಕ್ಸಿ ಫಾರ್ ಶುವರ್ ಲಾಂಚ್ ಮಾಡಿರುವ ನ್ಯಾನೋದಲ್ಲಿ ಮೊದಲ ಎರಡು ಕೀ.ಮೀ.ಗೆ 25 ರು. ಅಂತೆಯೇ ನಂತರದ ಪ್ರತಿ ಕೀ.ಮೀ. 10 ರು.ಗಳನ್ನಷ್ಟೇ ಶುಲ್ಕ ವಿಧಿಸಲಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ಯಾಕ್ಸಿ ಫಾರ್ ಶುವರ್ ಸಿಇಒ ಹಾಗೂ ಸಹ ಸ್ಥಾಪಕರಾಗಿರುವ ರಘುನಂದನ್, "ಟ್ಯಾಕ್ಸಿ ಉದ್ಯಮ ತ್ವರಿತ ಗತಿಯಲ್ಲಿ ವೃದ್ಧಿ ಸಾಧಿಸಿದ್ದು, ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಕಾರುಗಳನ್ನು ರಸ್ತೆಗಿಳಿಸಲು ನಾವೀನತ್ಯೆಯ ನೀತಿ ಅಗತ್ಯವಿದೆ" ಎಂದಿದ್ದಾರೆ.

nano taxi

ಈ ಸಂಬಂಧ ಮೊಬೈಲ್ ಆಪ್ ಅನ್ನು ಸಂಸ್ಥೆ ಬಿಡುಗಡೆಗೊಳಿಸಿದ್ದು, 100ರಷ್ಟು ನ್ಯಾನೋ ಟ್ಯಾಕ್ಸಿಗಳು ದಿನದ 24 ಗಂಟೆಯೂ ಗ್ರಾಹಕರ ಸೇವೆಯಲ್ಲಿ ನಿರತವಾಗಿರಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಅತಿ ಅಗ್ಗದ ಕಾರಾಗಿರುವ ನ್ಯಾನೋ ಮಾದರಿಯು ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ ಸಂಸ್ಥೆಯ ಕನಸಿನ ಕೂಸಾಗಿದೆ.

Most Read Articles

Kannada
English summary
TaxiForSure Launches ‘Nano Taxi Service’ in Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X