40ರ ಸಂಭ್ರಮದಲ್ಲಿ ಫೋಕ್ಸ್‌ವ್ಯಾಗನ್ ಗಾಲ್ಫ್

Written By:

ಸರಿ ಸುಮಾರು 40 ವರ್ಷಗಳ ಹಿಂದೆ ಅಂದರೆ 1974ನೇ ಇಸವಿಯಲ್ಲಿ ವೂಲ್ಫ್ಸ್‌ಬರ್ಗ್‌ನಲ್ಲಿ ಮೊದಲ ಫೋಕ್ಸ್‌ವ್ಯಾಗನ್ ಗಾಲ್ಫ್ ಕಾರು ನಿರ್ಮಾಣ ಹಂತ ತಲುಪಿತ್ತು. ಪ್ರಸ್ತುತ ಕಾರು ಅಮೆರಿಕ ಮಾರುಕಟ್ಟೆಗಳಲ್ಲಿ 'ರಾಬಿಟ್' ಎಂಬ ಹೆಸರಿನಿಂದಲೇ ಜನಪ್ರಿಯಗೊಂಡಿತ್ತು.

ಇದೀಗ ಫೋಕ್ಸ್‌ವ್ಯಾಗನ್, ಈ ಐಕಾನಿಕ್ ಗಾಲ್ಫ್ ಕಾರಿನ 50ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದು ಪ್ರಮುಖವಾಗಿ 'ಬೀಟ್ಲ್' ಕಾರಿನ ಉತ್ತರಾಧಿಕಾರಿ ಗುರುತಿಸಿಕೊಂಡಿತ್ತು. ಬೀಟ್ಲ್‌ನಲ್ಲಿ ರಿಯರ್ ಮೌಂಟೆಡ್ ಎಂಜಿನ್ ಇದ್ದರೆ ಫೋಕ್ಸ್‌ವ್ಯಾಗನ್ ಸಾಂಪ್ರದಾಯಕ ಫ್ರಂಟ್ ಮೌಂಟೆಡ್ ಎಂಜಿನ್ ಹಾಗೂ ಫ್ರಂಟ್ ವೀಲ್ ಡ್ರೈವ್ ಪಡೆದುಕೊಂಡಿತ್ತು.

Volkswagen Golf

ಗಾಲ್ಫ್ 40ನೇ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಫೋಕ್ಸ್‌ವ್ಯಾಗನ್ ವಿಶೇಷ ಟೆಕ್ನೊ ಕ್ಲಾಸಿಕಾ ಎಸ್ಸೆನ್ ಕಾರ್ಯಕ್ರಮ ಆಯೋಜಿಸಿದೆ. ಇಲ್ಲಿ ಹಿಂದಿನ ಕಾಲದಿಂದ ವರೆಗಿನ ಹಳೆಯ ಕಾರುಗಳ ಪ್ರದರ್ಶನ ನಡೆಯಲಿದೆ.

1974ನೇ ಇಸವಿಯಲ್ಲಿ ಆಗಮನವಾಗಿದ್ದ ಫೋಕ್ಸ್‌ವ್ಯಾಗನ್ ಗಾಲ್ಫ್, 'ಮಾರ್ಕ್ 1 ಗಾಲ್ಫ್' ಎಂಬ ಹೆಸರು ಪಡೆದುಕೊಂಡಿತ್ತು. ಆ ಬಳಿಕ ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರುಗಳ ಪೈಕಿ ಸ್ಥಾನಗಿಟ್ಟಿಸಿಕೊಂಡಿತ್ತು.

English summary
Volkswagen will be celebrating their 40th anniversary of their Golf. The first Golf went into production on 29th of March, 1974 in Wolfsburg. The car was famously known as 'rabbit' in US markets.
Story first published: Tuesday, April 1, 2014, 14:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark