ಫೋಕ್ಸ್‌ವ್ಯಾಗನ್‌ ಸಂಸ್ಥೆಯಿಂದ 2.40 ಮಿಲಿಯನ್ ವಾಹನಗಳ ಮಾರಾಟ

By Nagaraja

ವಿಶ್ವದ ಮುಂಚೂಣಿಯ ವಾಹನ ತಯಾರಕ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು, ಜಾಗತಿಕವಾಗಿ ಮೊದಲ ತ್ರೈಮಾಸಿಕ ಅವಧಿಯಲ್ಲಿ 2.40 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿವೆ. 2014 ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಒಟ್ಟು 2.40 ದಶಲಕ್ಷ ವಾಹನ ಮಾರಾಟ ಮಾಡಿರುವ ಫೋಕ್ಸ್‌ವ್ಯಾಗನ್ ಶೇಕಡಾ 5.8 ರಷ್ಟು ವೃದ್ಧಿ ಸಾಧಿಸಿದೆ. ಕಳೆದ ವರ್ಷ 2.37 ಮಿಲಿಯನ್ ವಾಹನಗಳನ್ನಷ್ಟೇ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು.

ಈ ಪೈಕಿ 2014 ಮಾರ್ಚ್ ತಿಂಗಳಲ್ಲಿ ಮಾತ್ರವಾಗಿ ಫೋಕ್ಸ್‌ವ್ಯಾಗನ್ 9,29,500 ಕಾರುಗಳ್ನು ಮಾರಾಟ ಮಾಡಿವೆ. ನಿರೀಕ್ಷೆಯಂತೆಯೇ ಚೀನಾ ಫೋಕ್ಸ್‌ವ್ಯಾಗನ್ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿದ್ದು, ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಮಾರಾಟವಾದ ಒಟ್ಟು 9,78,700 ಯುನಿಟ್‌ಗಳ ಪೈಕಿ ಚೀನಾದಲ್ಲಿ ಮಾತ್ರವಾಗಿ 8,80,700 ಯುನಿಟ್ ಮಾರಾಟವಾಗಿದೆ. ಉಳಿದಂತೆ ಯುರೋಪ್‌ನಲ್ಲಿ 9,58,600, ಉತ್ತರ ಅಮೆರಿಕದಲ್ಲಿ 1,97,300 ಹಾಗೂ ದಕ್ಷಿಣ ಅಮೆರಿಕದಲ್ಲಿ 1,68,600 ಯುನಿಟ್ ಮಾರಾಟ ಸಾಧಿಸಿವೆ.

Volkswagen Group

ಇನ್ನೊಂದೆಡೆ ಆಡಿ, ಸ್ಕೋಡಾ ಹಾಗೂ ಸಿಯೆಟ್ ಮಾರಾಟದಲ್ಲಿ ಏರಿಕೆ ಕಂಡಿದೆ. ಇದನ್ನು ಬ್ರಾಂಡ್‌ಗಳಾಗಿ ವಿಭಜಿಸಿದಾಗ ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರುಗಳು ಮುಂಚೂಣಿಯಲ್ಲಿದ್ದು, ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಒಟ್ಟು 1.48 ಮಿಲಿಯನ್ ಮಾರಾಟ ಸಾಧಿಸಿವೆ.

ಇನ್ನುಳಿದಂತೆ ಆಡಿ 4,128,00 ಹಾಗೂ ಪೋರ್ಷೆ 38,700 ಯುನಿಟ್ ಮಾರಾಟ ಸಾಧಿಸಿವೆ. ಮೊದಲ ಮೂರು ತಿಂಗಳಲ್ಲಿ ಶೇಕಡಾ 12.1ರಷ್ಟು ಮಾರಾಟ ವೃದ್ಧಿ ಸಾಧಿಸಿರುವ ಸ್ಕೋಡಾ 2,47,300 ಯುನಿಟ್ ಮಾರಾಟ ಕಂಡುಕೊಂಡಿದೆ. ಹಾಗೆಯೇ ಸಿಯೆಟ್ 93,400 ಯುನಿಟ್ ಮಾರಾಟವಾಗಿದೆ. ಅಂತಿಮವಾಗಿ ಫೋಕ್ಸ್‌ವ್ಯಾಗನ್ ವಾಣಿಜ್ಯ ವಾಹನವು ಮೊದಲ ತ್ರೈಮಾಸಿಕ ಅವಧಿಯಲ್ಲಿ 1,20,900 ಯುನಿಟ್ ಮಾರಾಟ ದಾಖಲಿಸಿದೆ.

Most Read Articles

Kannada
English summary
Volkswagen Group delivered 2.40 million vehicles globally during January-March 2014, which is an improvement of 5.8 percent over the 2.27 million units sold during the corresponding period last year.
Story first published: Tuesday, April 15, 2014, 12:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X