2015 ಹ್ಯುಂಡೈ ಸೊನಾಟಾ; ಮನಸೊರೆಗೊಳ್ಳುವ ಡಿಸೈನ್

Written By:

ಕೆಲವು ದಿನಗಳ ಹಿಂದೆಯಷ್ಟೇ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಲಾಂಚ್ ಮಾಡಿತ್ತು. ಈ ನಡುವೆ ತವರೂರಾದ ದಕ್ಷಿಣ ಕೊರಿಯಾದಲ್ಲಿ ನೂತನ 2015 ಹ್ಯುಂಡೈ ಸೊನಾಟಾ ಅನಾವರಣಗೊಳಿಸಲಾಗಿದೆ.

ನೀವು ಏಕೆ ಎಕ್ಸ್‌ಸೆಂಟ್ ಖರೀದಿಸಬೇಕು?

ಅಂದ ಹಾಗೆ ಮುಂದಿನ ತಿಂಗಳಲ್ಲಿ ಯುರೋಪ್‌ನಲ್ಲಿ ಸಾಗಲಿರುವ 2014 ನ್ಯೂಯಾರ್ಕ್ ಆಟೋ ಶೋದಲ್ಲಿ ಈ ಪ್ರೀಮಿಯಂ ಸೆಡಾನ್ ಕಾರು ಜಾಗತಿಕ ಪಾದಾರ್ಪಣೆ ಮಾಡಲಿದೆ. ಇನ್ನು ಭಾರತೀಯ ಆವೃತ್ತಿ ಬಗ್ಗೆ ಮಾತನಾಡುವುದಾದ್ದಲ್ಲಿ ಪ್ರಸಕ್ತ ಸಾಲಿನ ಅಂತ್ಯದಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

2015 ಹ್ಯುಂಡೈ ಸೊನಾಟಾ ತನ್ನ ನಿಕಟ ಸ್ಪರ್ಧಿಗಳನ್ನು ಹೇಗೆ ಹಿಮ್ಮೆಟ್ಟಿಸಲಿದೆ ಎಂಬುದಕ್ಕೆ ನಿಕಟ ಭವಿಷ್ಯದಲ್ಲೇ ಉತ್ತರ ದೊರಕಲಿದೆ.

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

ನಿಮ್ಮ ಮಾಹಿತಿಗಾಗಿ, ಹಳೆಯ ಸೊನಾಟಾ ಮಾದರಿಯನ್ನು ನೂತನ 2015 ಹ್ಯುಂಡೈ ಸೊನಾಟಾ ಆಕ್ರಮಿಸಿಕೊಳ್ಳಲಿದೆ.

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

ಇದು ಹ್ಯುಂಡೈನ ಫ್ಯೂಯಿಡಿಕ್ 2.0 ವಿನ್ಯಾಸಭಾಷೆಯಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ. ಇದು ಮೊದಲ ಬಾರಿಗೆ 2015 ಜೆನಿಸಿಸ್‌ನಲ್ಲಿ ಕಾಣಸಿಕ್ಕಿದೆ. ಇದರ ಹೆಕ್ಸಜನಲ್ ಫ್ರಂಟ್ ಗ್ರಿಲ್‌ನಿಂದಾಗಿ ಸುಲಭವಾಗಿ ಗುರುತಿಸಿಕೊಳ್ಳಬಹುದಾಗಿದೆ.

ಆಯಾಮ

ಆಯಾಮ

ನೂತನ 2015 ಹ್ಯುಂಡೈ ಸೊನಾಟ 4855 ಎಂಎಂ ಉದ್ದ, 1865 ಎಂಎಂ ಅಗಲ, 1475 ಎಂಎಂ ಎತ್ತರ ಜತೆಗೆ 2805 ಎಂಎಂ ವೀಲ್ ಬೇಸ್ ಪಡೆದುಕೊಂಡಿದೆ.

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

ಇದು ಹಳೆಯ ಮಾದರಿಗಿಂತಲೂ 35 ಎಂಎಂ ಉದ್ದ ಹಾಗೂ 30 ಎಂಎಂ ಅಗಲವಾಗಿರಲಿದೆ. ಅಂದರೆ ಕಾರಿನೊಳಗಡೆ ಹೆಚ್ಚು ಸ್ಥಳಾವಕಾಶವನ್ನು ಪಡೆಯಲಿದೆ.

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

ಹ್ಯುಂಡೈ ಪ್ರಕಾರ, 2015 ಸೊನಾಟಾದಲ್ಲಿ ಚಾಲನಾ ಅನುಭವ ವರ್ಧಿಸಿದ್ದು, ಹೆಚ್ಚು ಕ್ರೀಡಾತ್ಮಕ ಚಾಲನೆ ಪ್ರದಾನ ಮಾಡಲಿದೆ. ಈ ಸಂಬಂಧ ಈಗಾಗಲೇ ಯಶಸ್ವಿ ಪರೀಕ್ಷಾರ್ಥ ಚಾಲನೆ ಕೂಡಾ ಹಮ್ಮಿಕೊಳ್ಳಲಾಗಿದೆ.

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

ಇದರಲ್ಲಿ ಎಬಿಎಸ್, ಇಬಿಡಿ, ಟಿಸಿಎಸ್, ಇಎಸ್‌ಪಿ, 6 ಏರ್ ಬ್ಯಾಗ್, ಬೈ-ಕ್ಸೆನಾನ್ ಹೆಡ್‌ಲೈಟ್ ಹಾಗೂ ಎಲ್‌ಇಡಿ ಟೈಲ್‌ಲೈಟ್ ಸ್ಟಾಂಡರ್ಡ್ ಫೀಚರ್ ಹೊರತಾಗಿ, ಹೊಸ ಜೆನಿಸಿಸ್‌ ಆವೃತ್ತಿಯಲ್ಲಿರುವ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್ ಸಿಸ್ಟಂ, ಮುಂದುವರಿದ ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಮತ್ತು ನೆಕ್ಸ್ಟ್ ಜನರೇಷನ್ ಬ್ಲ್ಯೂ ಲಿಂಕ್ ಮಾಹಿತಿ ಮನರಂಜನಾ ಸಿಸ್ಟಂಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

ಹಾಗಿದ್ದರೂ ಇದುವರೆಗೆ ಎಂಜಿನ್ ಮಾನದಂಡಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಆದರೆ ನಿರ್ದಿಷ್ಟ ಮಾರುಕಟ್ಟೆಗೆ ಅನುಸಾರವಾಗಿ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ. ಇನ್ನು 2.0 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಮಾತ್ರ ಎಲ್ಲ ಕಡೆಯೂ ಸ್ಟಾಂಡರ್ಡ್ ಆಗಿ ದೊರಕುವ ನಿರೀಕ್ಷೆಯಿದೆ. ಇದು 6 ಸ್ಪೀಡ್ ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

ಹೊಸ ಹ್ಯುಂಡೈ ಸೊನಾಟಾದಲ್ಲಿರುವ ಆಕರ್ಷಕ ಎಲ್‌ಇಡಿ ಟೈಲ್ ಲ್ಯಾಂಪ್

ಹೇಗಿದೆ ನೋಡಿ 2015 ಹ್ಯುಂಡೈ ಸೊನಾಟಾ

ಅಷ್ಟಕ್ಕೂ ನೈಜ ಫ್ಯೂಯಿಡಿಕ್ ವಿನ್ಯಾಸಿತ ಸೊನಾಟಗಿಂತಲೂ ನೂತನ ಫ್ಯೂಯಿಡಿಕ್ 2.0 ಸೊನಾಟಾ ಹೆಚ್ಚು ಆಕರ್ಷಣೀಯವಾಗಿದೆಯೇ? ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

English summary
The official reveal of the 2015 Hyundai Sonata has taken place in its home market South Korea. Hyundai's premium sedan will receive its global debut at the 2014 New York Auto Show next month, where it will be speced a little differently.
Story first published: Tuesday, March 25, 2014, 7:04 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more