325 ಕೆ.ಜಿ ತೂಕ ಇಳಿಸಿದ ಆಡಿ ಕ್ಯೂ7 ಎಸ್‌ಯುವಿ

By Nagaraja

ದಪ್ಪನೆಯ ದೇಹದವರು ಬೊಜ್ಜು ಕರಗಿಸಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಹಾಗಿರುವ ಜನಪ್ರಿಯ ಕಾರೊಂದು 325 ಕೆ.ಜಿಗಳಷ್ಟು ತೂಕ ಇಳಿಕೆ ಮಾಡಿರುವ ವರದಿ ನಿಮ್ಮಲ್ಲಿ ಅಚ್ಚರಿಯನ್ನುಂಟು ಮಾಡಬಹುದು.

ಹೌದು, 2015 ಉತ್ತರ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಆಡಿ ಕ್ಯೂ7 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಸಂಪೂರ್ಣ ಹೊಸ ರೂಪದಲ್ಲಿ ಆಗಮನವಾಗಿದೆ. ಇದರಲ್ಲಿ ತೂಕ ಇಳಿಕೆ ಪ್ರಮುಖವಾಗಿದೆ.

audi q7

ಹಗುರ ಭಾರ, ಎಂಜಿನ್ ಕ್ಷಮತೆ ಹಾಗೂ ಗರಿಷ್ಠ ನಿರ್ವಹಣೆ ಆಡಿ ಹೊಸ ಎಸ್‌ಯುವಿಯ ವೈಶಿಷ್ಟ್ಯವಾಗಿದೆ. ಹಾಗೆಯೇ ಹಿಂದಿನ ಮಾದರಿಗಿಂತಲೂ ಶೇ.26 ಕಡಿಮೆ ಕಡಿಮೆ ಭಾರ ಪಡೆದುಕೊಂಡಿದೆ.

2015ನೇ ವರ್ಷಾಂತ್ಯದಲ್ಲಿ ಬಿಡುಗಡೆ ನಿರೀಕ್ಷೆ ಹೊಂದಿರುವ ಆಡಿ ಕ್ಯೂ7 ಎಸ್‌ಯುವಿ ಬ್ರಿಟನ್ ಮಾದರಿಯು 3.0 ವಿ6 ಟಿಡಿಐ ಎಂಜಿನ್ ಪಡೆದುಕೊಳ್ಳಲಿದ್ದು, 218 ಅಶ್ವಶಕ್ತಿ ಉತ್ಪಾದಿಸಲಿದೆ.

ಮುಂದಿನ ದಿನಗಳಲ್ಲಿ ಕ್ಯೂ7 ಮಾದರಿ ಭಾರತಕ್ಕೂ ಎಂಟ್ರಿ ಕೊಡಲಿದೆ. ಹಾಗೆಯೇ ಇದು ಪ್ಲನ್ ಇನ್ ಹೈಬ್ರಿಡ್ ಸಹ ಪಡೆದುಕೊಳ್ಳಲಿದೆ. ಇನ್ನು ಎಲ್ಇಡಿ ಹೆಡ್‌ಲೈಟ್‌ಗಳು ಹೆಚ್ಚು ಆಕರ್ಷಣೆಗೆ ಪಾತ್ರವಾಗಿದೆ.

Most Read Articles

Kannada
English summary
Audi, the German automaker has revealed its new Q7 SUV during the Detroit Auto Show on Monday. The full size Sports Utility Vehicle has shed a lot of weight, owing to lightweight components used to build the SUV.
Story first published: Tuesday, January 13, 2015, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X