ದೀಪಾವಳಿ ಆಫರ್; ಯಾವ ಯಾವ ಕಾರುಗಳಿಗೆ ಎಷ್ಟೆಷ್ಟು ಡಿಸ್ಕೌಂಟ್?

Written By:

ಬೆಳಕಿನ ಹಬ್ಬ ಸಂಭ್ರಮದ ದೀಪಾವಳಿ ಹಬ್ಬ ಆಗಮನವಾಗಿರುವಂತೆಯೇ ದೇಶದ ಮುಂಚೂಣಿಯ ವಾಹನ ಸಂಸ್ಥೆಗಳು ತಮ್ಮ ಜನಪ್ರಿಯ ಮಾದರಿಗಳಿಗೆ ಭಾರಿ ಆಫರ್ ಗಳನ್ನು ಮುಂದಿಟ್ಟಿದೆ. ಈ ಸಂದರ್ಭದಲ್ಲಿ ಕಾರು ಖರೀದಿಸಲು ಬಯಸುವ ಗ್ರಾಹಕರಿಗೆ ಲೇಖನ ಉಪಯುಕ್ತವಾಗಲಿದೆಯೆಂಬ ಭರವಸೆ ನಮ್ಮದ್ದು.

Also Read: ಮಹೀಂದ್ರಗೆ ಮರು ಜೀವ ತುಂಬಿದ ಮೊಜೊ

ಹಾಗಿದ್ದರೆ ಇನ್ಯಾಕೆ ತಡ 2015 ನವೆಂಬರ್ ತಿಂಗಳಲ್ಲಿ ಕಾರುಗಳಿಗೆ ಲಭ್ಯವಿರುವ ಗರಿಷ್ಠ ಆಫರ್ ಗಳನ್ನು ತಿಳಿದುಕೊಳ್ಳೋಣ ಬನ್ನಿ. ಇದಕ್ಕಾಗಿ ಕೆಳಗೆ ಕೊಟ್ಟಿರುವ ಚಿತ್ರಪುಟದತ್ತ ಮುಂದುವರಿಯಿರಿ.

ಫಿಯೆಟ್ ಪುಂಟೊ

ಫಿಯೆಟ್ ಪುಂಟೊ

ಇಟಲಿಯ ಐಕಾನಿಕ್ ಕಾರು ಸಂಸ್ಥೆಯಾಗಿರುವ ಫಿಯೆಟ್ ತನ್ನ ಜನಪ್ರಿಯ ಪುಂಟೊ ಮಾದರಿಗೆ ಗರಿಷ್ಠ 70,000 ರು. ಗಳ ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಇಲ್ಲಿ ಗ್ರಾಹಕರು 30,000 ರು.ಗಳಷ್ಟು ಕ್ಯಾಶ್ ಸೇವಿಂಗ್ಸ್, 25,000 ರು.ಗಳ ಎಕ್ಸ್ ಚೇಂಜ್ ಬೋನಸ್, 5,000 ರು.ಗಳ ಕಾರ್ಪೋರೇಟ್ ಡಿಸ್ಕೌಂಟ್ ಹಾಗೂ ಫಿಯೆಟ್ ಮಾಲಿಕರು 10,000 ರು.ಗಳ ಲಾಯಲ್ಟಿ ಪ್ರಯೋಜನವನ್ನು ಪಡೆಯಬಹುದಾಗಿದೆ.

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ತನ್ನ ಜನಪ್ರಿಯ ಗ್ರಾಂಡ್ ಐ10 ಮಾದರಿಗೆ ಗರಿಷ್ಠ 70,000 ರು.ಗಳ ಪ್ರಯೋಜನ ನೀಡುತ್ತಿದೆ. ಇದರಲ್ಲಿ 40,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್, 22,000 ರು.ಗಳ ಉಚಿತ ವಿಮೆ, 8,000 ರು.ಗಳ ನಗದು ರಿಯಾಯಿತಿ ಸೇರಿವೆ.

ಷೆವರ್ಲೆ ಬೀಟ್

ಷೆವರ್ಲೆ ಬೀಟ್

ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಂಸ್ಥೆಯ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಬೀಟ್ ಖರೀದಿ ವೇಳೆಯಲ್ಲಿ ಗರಿಷ್ಠ 60,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಿಗೂ ಅನ್ವಯವಾಗುತ್ತದೆ. ಇದರಲ್ಲಿ 40,000 ರು.ಗಳ ನಗದು ರಿಯಾಯಿತಿ, 20,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸೇರಿವೆ.

ಟಾಟಾ ನ್ಯಾನೋ

ಟಾಟಾ ನ್ಯಾನೋ

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ನ್ಯಾನೋ ಕಾರಿಗೆ 2,000 ರು.ಗಳ ಕಾರ್ಪೋರೇಟ್ ಬನೋಸ್, 15,000 ರು.ಗಳ ನಗದು ಪ್ರಯೋಜನ, ಹಾಗೂ 20,000 ರು.ಗಳ ಎಕ್ಸ್ ಚೇಂಜ್ ಬೋನಸ್ ನೀಡುತ್ತಿದೆ. ಈ ಮೂಲಕ ಒಟ್ಟು 37,000 ರು.ಗಳನ್ನು ಉಳಿತಾಯ ಮಾಡಬಹುದಾಗಿದೆ. ಆದರೆ ಈ ಆಫರ್ ಹೊಸತಾಗಿ ಆಗಮನವಾಗಿರುವ ಜೆನ್ ಎಕ್ಸ್ ಎಎಂಟಿ ಮಾದರಿಗೆ ಅನ್ವಯವಾಗುವುದಿಲ್ಲ.

ರೆನೊ ಡಸ್ಟರ್

ರೆನೊ ಡಸ್ಟರ್

ರೆನೊದ ಜನಪ್ರಿಯ ಕ್ರೀಡಾ ಬಳಕೆಯ ವಾಹನ ಡಸ್ಟರ್ ಖರೀದಿ ವೇಳೆಯಲ್ಲಿ ಗರಿಷ್ಠ 1.2 ಲಕ್ಷ ರು.ಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಇಲ್ಲಿ ಆಫರ್ ನೀವು ಖರೀದಿಸುವ ಡಸ್ಟರ್ ಮಾಡೆಲ್ ಮೇಲೆ ಅವಲಂಬಿಸಿರುತ್ತದೆ.

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸಫಾರಿ ಸ್ಟ್ರೋಮ್ ಖರೀದಿ ವೇಳೆಯಲ್ಲಿ 37,000 ರು.ಗಳ ಪ್ರಯೋಜನ ಪಡೆಯಬಹುದಾಗಿದೆ. ಇದರಲ್ಲಿ ಎಕ್ಸ್ ಚೇಂಜ್ ಬೋನಸ್ ಹಾಗೂ ಕಾರ್ಪೇರೇಟ್ ಡಿಸ್ಕೌಂಟ್ ಗಳು ಸೇರಿವೆ.

ಫಿಯೆಟ್ ಅವೆಂಚ್ಯುರಾ

ಫಿಯೆಟ್ ಅವೆಂಚ್ಯುರಾ

ಫಿಯೆಟ್ ಸಂಸ್ಥೆಯು ತನ್ನ ಮಗದೊಂದು ಮಾದರಿಗೆ ಕೊಡುಗೆಯನ್ನು ನೀಡುತ್ತದೆ. ಇಲ್ಲಿ ಫಿಯೆಟ್ ಅವೆಂಚ್ಯುರಾ ಖರೀದಿ ವೇಳೆಯಲ್ಲಿ ಗರಿಷ್ಠ 80,000 ರು.ಗಳ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಪುಂಟೊ ಇವೊ ತರಹನೇ ಇದು ಕೂಡಾ ಕಾರ್ಪೋರೇಂಟ್, ಎಕ್ಸ್ ಚೇಂಜ್ ಬೋನಸ್, ನಗದು ರಿಯಾಯಿತಿ ಮತ್ತು ಲಾಯಲ್ಟಿ ಬೋನಸ್ ಒಳಗೊಂಡಿರುತ್ತದೆ.

ಮಾರುತಿ ಸುಜುಕಿ ಎಸ್ ಕ್ರಾಸ್

ಮಾರುತಿ ಸುಜುಕಿ ಎಸ್ ಕ್ರಾಸ್

ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಸುಜುಕಿ ಎಸ್ ಕ್ರಾಸ್ ಕೇವಲ ಸಂಸ್ಥೆಯ ಪ್ರೀಮಿಯಂ ಶೋ ರೂಂಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಚಾರ. ಈಗ ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಎಸ್ ಕ್ರಾಸ್ ಮಾದರಿಗೆ ಗರಿಷ್ಠ 90,000 ರು.ಗಳ ವರೆಗೆ ರಿಯಾಯಿತಿ ನೀಡಲಾಗುತ್ತದೆ. ಇದರಲ್ಲಿ 40,000 ರು.ಗ ಎಕ್ಸ್ ಚೇಂಜ್ ಬೋನಸ್ ಹಾಗೂ 50,000 ರು.ಗಳ ನಗದು ರಿಯಾಯಿತಿ ಒಳಗೊಂಡಿರುತ್ತದೆ.

ಟಾಟಾ ಜೆಸ್ಟ್

ಟಾಟಾ ಜೆಸ್ಟ್

ಟಾಟಾ ಜೆಸ್ಟ್ ಖರೀದಿ ವೇಳೆಯಲ್ಲಿ ಗರಿಷ್ಠ 47,000 ರು.ಗಳ ಡಿಸ್ಕೌಂಟ್ ನೀಡಲಾಗುತ್ತದೆ. ಇದರಲ್ಲಿ ಎಕ್ಸ್ ಚೇಂಜ್ ಬೋನಸ್ ಜೊತೆಗೆ ಆಯ್ದ ಸಂಸ್ಥೆಗಳ ನೌಕಕರಿಗೆ 2,000 ರು.ಗಳ ನಗದುರ ರಿಯಾಯಿತಿ ದೊರಕಲಿದೆ.

ಫಿಯೆಟ್ ಲಿನಿಯಾ

ಫಿಯೆಟ್ ಲಿನಿಯಾ

ಫಿಯೆಟ್ ಲಿನಿಯಾ ಖರೀದಿ ವೇಳೆಯಲ್ಲಿ 60,000 ರು.ಗಳ ನಗದು ರಿಯಾಯಿತಿ. 15,000 ರು.ಗಳ ಲಾಯಲ್ಟಿ ಬೋನಸ್, 30,000 ರು.ಗಳ ಎಕ್ಸ್ ಚೇಂಜ್ ಬೋನಸ್ ಹಾಗೂ 5,000 ರು.ಗಳ ಕಾರ್ಪೋರೇಟ್ ಬೋನಸ್ ಲಭ್ಯವಾಗಲಿದೆ. ಹಾಗಿದ್ದರೂ ಫಿಯೆಟ್ ಲಿನಿಯಾ ಕ್ಲಾಸಿಕ್ ಮಾದರಿಗೆ ಈ ಆಫರ್ ಅನ್ವಯವಾಗುವುದಿಲ್ಲ.

ಹ್ಯುಂಡೈ ವೆರ್ನಾ

ಹ್ಯುಂಡೈ ವೆರ್ನಾ

ಒಂದು ಸಮಯದಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಧ್ಯಮ ಗಾತ್ರದ ಸೆಡಾನ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಹಾಗೂ ಮಾರುತಿ ಸಿಯಾಝ್ ಗಳಂತಹ ಪ್ರತಿಸ್ಪರ್ಧಿಗಳ ಆಗಮನದೊಂದಿಗೆ ಹಿನ್ನೆಡೆಯನ್ನು ಅನುಭವಿಸಿತ್ತು. ಈಗ ಪರಿಸ್ಥಿತಿಯನ್ನು ನಿಭಾಯಿಸಲು ಹೊರಟಿರುವ ಹ್ಯುಂಡೈ ಸಂಸ್ಥೆಯು ಗರಿಷ್ಠ ಆಫರ್ ಗಳನ್ನು ಮುಂದಿಡುವ ಮೂಲಕ ಮಾರಾಟಕ್ಕೆ ಉತ್ತೇಜನ ನೀಡುವ ಪ್ರಯತ್ನದಲ್ಲಿದೆ. ಇದರಲ್ಲಿ 50,000 ರು.ಗಳ ಎಕ್ಸ್ ಚೇಂಜ್ ಬೋನಸ್, 20,000 ರು.ಗಳ ನಗದು ರಿಯಾಯಿತಿ ಸೇರಿದಂತೆ ಒಟ್ಟು 70,000 ರು.ಗಳ ರಿಯಾಯಿತಿ ನೀಡುತ್ತಿದೆ.

ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಖರೀದಿ ವೇಳೆಯಲ್ಲಿ ಅತಿ ಹೆಚ್ಚು ಅಂದರೆ ಆರು ಲಕ್ಷ ರು.ಗಳ ವರೆಗೂ ನಗದು ರಿಯಾಯಿತಿ ದೊರಕಲಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್

ಅದೇ ರೀತಿ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಖರೀದಿ ವೇಳೆಯಲ್ಲಿ ಗರಿಷ್ಠ ಎರಡು ಲಕ್ಷ ರು.ಗಳ ವರೆಗೆ ರಿಯಾಯಿತಿ ನೀಡಲಾಗುತ್ತದೆ.

ಬಿಎಂಡಬ್ಲ್ಯು 3 ಸಿರೀಸ್

ಬಿಎಂಡಬ್ಲ್ಯು 3 ಸಿರೀಸ್

ಅತ್ತ ಬಿಎಂಡಬ್ಲ್ಯು 3 ಸಿರೀಸ್ ಕಾರು ಖರೀದಿ ವೇಳೆಯಲ್ಲೂ ಗರಿಷ್ಠ ಎಂಟು ಲಕ್ಷ ರು.ಗಳ ವರೆಗೆ ನಗದು ರಿಯಾಯಿತಿ ಗಿಟ್ಟಿಸಿಕೊಳ್ಳಬಹುದಾಗಿದೆ.

ಬಿಎಂಡಬ್ಲ್ಯು 5 ಸಿರೀಸ್

ಬಿಎಂಡಬ್ಲ್ಯು 5 ಸಿರೀಸ್

ಅಂತೆಯೇ ಬಿಎಂಡಬ್ಲ್ಯು 5 ಸಿರೀಸ್ ಖರೀದಿ ವೇಳೆಯಲ್ಲೂ ಐದು ಲಕ್ಷ ರು.ಗಳ ವರೆಗೆ ಆಫರ್ ನೀಡಲಾಗುತ್ತಿದೆ. ಇದು ಬಿಎಂಡಬ್ಲ್ಯುನ ಎಲ್ಲ 5 ಸಿರೀಸ್ ಮಾದರಿಗಳಿಗೆ ಅನ್ವಯವಾಗುತ್ತದೆ.

ಆಡಿ ಎ4

ಆಡಿ ಎ4

ಇಲ್ಲಿ ಆಡಿ ಎ4 ಐಷಾರಾಮಿ ಕಾರು ಖರೀದಿ ವೇಳೆಯಲ್ಲಿ ಗರಿಷ್ಠ ಏಳು ಲಕ್ಷ ರು.ಗಳ ವರೆಗೆ ಪ್ರಯೋಜನ ನೀಡಲಾಗುತ್ತದೆ.

English summary
Best Car Discounts This Diwali (Exchange Bonus, Cash Discount & More)
Story first published: Friday, November 6, 2015, 10:42 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark