ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ದೀಪಾವಳಿ ಹಬ್ಬದ ಪ್ರಯುಕ್ತ ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಇದೀಗ ದಕ್ಷಿಣ ಕೊರಿಯಾದ ಕಾರು ಉತ್ಪಾದನಾ ಕಂಪನಿಯಾದ ಕಿಯಾ ಮೋಟಾರ್ಸ್ ತನ್ನ ಕಾರ್ನಿವಲ್ ಪ್ರೀಮಿಯಂ ಎಂಪಿವಿ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಿದೆ.

ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯ ಮೇಲೆ ರೂ.2.5 ಲಕ್ಷಗಳವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ಎಕ್ಸ್‌ಚೆಂಜ್ ಬೋನಸ್ ಕಾರ್ಪೊರೇಟ್ ರಿಯಾಯಿತಿಗಳು, ಎಎಂಸಿ ಪ್ಯಾಕ್‌ಗಳು ಮತ್ತು ಅಕ್ಸೆಸರೀಸ್ ರೂಪದಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೆ ಲಭ್ಯವಿರುತ್ತದೆ. ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯನ್ನು ಈ ವರ್ಷದ ಆರಂಭದಲ್ಲಿ 2020ರ ಆಟೋ ಎಕ್ಸ್‌ಪೋದಲ್ಲಿ ಅಧಿಕೃತವಾಗಿ ದೇಶದಲ್ಲಿ ಬಿಡುಗಡೆ ಮಾಡಲಾಯಿತು. ಈ ಎಂಪಿಯ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.24.95 ಲಕ್ಷದಿಂದ ಆರಂಭವಾಗುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಈ ಜನಪ್ರಿಯ ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯಲ್ಲಿ 2.2-ಲೀಟರ್ ವಿಜಿಟಿ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 197 ಬಿಹೆಚ್‌ಪಿ ಮತ್ತು 440 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಈ ಎಂಜಿನ್ ಅನ್ನು 8-ಸ್ಪೀಡ್ ಸ್ಪೋರ್ಟ್‌ಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲಾಗಿದೆ. ಇದು ಮುಂಭಾಗದ ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಕಿಯಾ ಕಾರ್ನಿವಲ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಎಂಪಿವಿಯಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯಲ್ಲಿ ಎಲೆಕ್ಟ್ರಿಕ್ ಸ್ಲೈಡಿಂಗ್ ಹಿಂಭಾಗದ ಡೋರುಗಳು, ಪವರ್-ಫೋಲ್ಡಿಂಗ್ ಒಆರ್ವಿಎಂಗಳು, ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಪವರ್-ಚಾಲಿತ ಟೈಲ್ ಗೇಟ್ ಮತ್ತು ಇತರ ಹೆಚ್ಚಿನ ಫೀಚರ್ ಗಳನ್ನು ಹೊಂದಿದೆ. ಇನ್ನು ರೇಡಿಯೇಟರ್ ಗ್ರಿಲ್ ಮತ್ತು ಟಾಪ್-ಸ್ಪೆಕ್ ಟ್ರಿಮ್‌ಗಳಲ್ಲಿ 18 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಸಹ ಒಳಗೊಂಡಿದೆ.

ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಕ್ಯಾಬಿನ್‌ನ ಒಳಭಾಗದಲ್ಲಿ, ಐಷಾರಾಮಿ-ಎಂಪಿವಿ 10-ವೇ ಪವರ್-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಅನ್ನು ಹೊಂದಿದೆ. ಡ್ಯುಯಲ್ ಸನ್‌ರೂಫ್, ಮೂರು-ವಲಯದ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಕಿಯಾದ ಯುವಿಒ ಕನೆಕ್ಟೆಡ್-ಕಾರ್ ಟೆಕ್, ಮತ್ತು ಸ್ಮಾರ್ಟ್ ಏರ್ ಪ್ಯೂರಿಫೈಯರ್ ಅನ್ನು ಒಳಗೊಂಡಿದೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಕಿಯಾ ಕಾರ್ನಿವಾಲ್ ಎಂಪಿವಿಯು 2,200 ಕೆಜಿ ತೂಕ ಹೊಂದಿದೆ. ಈ ಕಿಯಾ ಎಂಪಿವಿಯು ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 13.9 ಕಿ.ಮೀ ಮೈಲೇಜ್ ನೀಡಲಿದೆ.

ಕಿಯಾ ಕಾರ್ನಿವಲ್ ಎಂಪಿವಿಯ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಇನ್ನು ಕಿಯಾ ಮೋಟಾರ್ಸ್ ತನ್ನ ಸೆಲ್ಟೋಸ್ ಮತು ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಯಾವುದೇ ರಿಯಾಯಿತಿಗಳನ್ನು ನೀಡಲಾಗಿಲ್ಲ. ಕಿಯಾ ಕಾರ್ನಿವಲ್ ಪ್ರೀಮಿಯಂ ಎಂಪಿವಿಯ ಮೇಲೆ ರಿಯಾಯಿತಿ ಘೋಷಿಸಿರುವುದರಿಂದ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Kia Carnival MPV Offered With Benefits Of Up To 2.5 Lakh. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X