ಷೆವರ್ಲೆ ಹಬ್ಬದ ಆಫರ್ ಮಿಸ್ ಮಾಡದಿರಿ

Written By:

ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿ ಆಗಮನವಾಗಿರುವಂತೆಯೇ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಇಂಡಿಯಾ, ದೇಶದ ಗ್ರಾಹಕರಿಗಾಗಿ ಆಕರ್ಷಕ ಆಫರುಗಳನ್ನು ಮುಂದಿಟ್ಟಿದೆ.

ಪ್ರಸ್ತುತ ಆಫರ್ ಷೆವರ್ಲೆ ಬೀಟ್, ಸೈಲ್, ಎಂಜಾಯ್ ಹಾಗೂ ಕ್ರೂಜ್ ಮಾದರಿಗಳಿಗೆ ಅನ್ವಯವಾಗಲಿದ್ದು, 2015 ಅಕ್ಟೋಬರ್ 31ರ ವರೆಗೂ ಆಫರ್ ಲಭ್ಯವಾಗಲಿದೆ. ಈ ಮೂಲಕ ಸಂಸ್ಥೆಯು ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

To Follow DriveSpark On Facebook, Click The Like Button
ಷೆವರ್ಲೆ ಬೀಟ್

ಷೆವರ್ಲೆ ಬೀಟ್

ಷೆವರ್ಲೆ ಬೀಟ್ ಹ್ಯಾಚ್ ಬ್ಯಾಕ್ ಕಾರಿಗೆ 3+2 ವರ್ಷಗಳ ವಾರಂಟಿ ನೀಡಲಾಗುತ್ತಿದೆ. ಇದರ ಜೊತೆಗೆ ಒಂದು ವರ್ಷದ ಉಚಿತ ವಿಮೆ ಹಾಗೂ ಮೂರು ವರ್ಷಗಳ ನಿರ್ವಹಣಾ ಪ್ಯಾಕೇಜ್ ಒಳಗೊಂಡಿರುತ್ತದೆ.

ಷೆವರ್ಲೆ ಸೈಲ್

ಷೆವರ್ಲೆ ಸೈಲ್

ಷೆವರ್ಲೆ ಸೈಲ್ ಸೆಡಾನ್ ಕಾರಿಗೂ ಮೂರು ವರ್ಷಗಳ ನಿರ್ವಹಣಾ ಪ್ಯಾಕೇಜ್ ಸೌಲಭ್ಯ ನೀಡಲಾಗುತ್ತಿದೆ. ಅಂತೆಯೇ ಗ್ರಾಹಕರು ಈ ಹಬ್ಬದ ಆವೃತ್ತಿಯಲ್ಲಿ 3+2 ವಾರಂಟಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಹಾಗಿದ್ದರೂ ಷೆವರ್ಲೆ ಎಂಜಾಯ್ ಗೆ 3+2 ವಾರಂಟಿ ಸೌಲಭ್ಯ ಮಾತ್ರ ಅನ್ವಯವಾಗಲಿದೆ.

ಷೆವರ್ಲೆ ಕ್ರೂಜ್

ಷೆವರ್ಲೆ ಕ್ರೂಜ್

ಇನ್ನುಳಿದಂತೆ ಷೆವರ್ಲೆ ಕ್ರೂಜ್ ಮಾದರಿಗೂ ಒಂದು ವರ್ಷಗಳ ವಿಮೆ, ಮೂರು ವರ್ಷಗಳ ನಿರ್ವಹಣಾ ಪ್ಯಾಕೇಜ್ ಮತ್ತು 3+2 ವರ್ಷಗಳ ವಾರಂಟಿ ಸೌಲಭ್ಯವನ್ನು ನೀಡಲಾಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಷೆವರ್ಲೆ ಸ್ಪಾರ್ಕ್, ಬೀಟ್, ಸೈಲ್ ಹ್ಯಾಚ್ ಬ್ಯಾಕ್, ಸೈಲ್, ಎಂಜಾಯ್, ಕ್ರೂಜ್, ಕಾಪ್ಟಿವಾ ಮತ್ತು ತವೆರಾ ಮಾದರಿಗಳು ಮಾರಾಟದಲ್ಲಿದ್ದರೂ ಮೇಲೆ ತಿಳಿಸಿದ ನಾಲ್ಕು ಮಾದರಿಗಳಿಗೆ ಮಾತ್ರ ಆಫರ್ ಅನ್ವಯವಾಗಲಿದೆ. ಸಂಸ್ಥೆಯು ನಿಕಟ ಭವಿಷ್ಯದ್ಲಲೇ ಟ್ರೈಲ್ ಬ್ಲೇಜರ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ.

English summary
Chevrolet India Deals & Offers For 2015 Festive Season
Story first published: Wednesday, October 14, 2015, 12:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X