ನೂತನ ಮೈಲುಗಲ್ಲು; ಚಾಲಕನಿಲ್ಲದೆ 14 ಕೀ.ಮೀ. ಸಂಚರಿಸಿದ ಟ್ರಕ್!

Written By:

ವಾಹನ ಜಗತ್ತಿನ ಕ್ರಾಂತಿಕಾರಿ ಬದಲಾವಣೆಗೆ ಮಗದೊಂದು ದೃಷ್ಟಾಂತವೆಂಬಂತೆ ಚಾಲಕನಿಲ್ಲದೆ ಸರಿ ಸುಮಾರು 14 ಕೀ.ಮೀ. ದೂರ ಸಂಚರಿಸಿರುವ ಡೈಮ್ಲರ್ ಟ್ರಕ್ ನೂತನ ಮೈಲುಗಲ್ಲು ಸಾಧಿಸಿದೆ. ಚಾಲಕ ರಹಿತ ಸ್ವಯಂಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಸದಾ ತಲ್ಲೀನವಾಗಿರುವ ಜರ್ಮನಿ ಮೂಲದ ಡೈಮ್ಲರ್ ಸಂಸ್ಥೆಯು ನಿರಂತರ ಅಧ್ಯಯನದ ಬಳಿಕ ಇಂತಹದೊಂದು ಮಹತ್ತರ ಸಾಧನೆ ಮಾಡಿದೆ.

Also Read : ಮಿತ್ರರ ಜೊತೆಗೂಡಿ ಕಾರು ಪ್ರವಾಸ - ಎಚ್ಚರವಹಿಸಬೇಕಾದ ಅಂಶಗಳು

ನೈಜ ರಸ್ತೆ ಪರಿಸ್ಥಿತಿಯಲ್ಲಿ ಡೈಮ್ಲರ್ ಸೆಲ್ಪ್ ಡ್ರೈವಿಂಗ್ ಟ್ರಕ್ ಪರೀಕ್ಷೆ ನಡೆದಿರುವುದು ವಾಹನೋದ್ಯಮದ ಪಾಲಿಗೆ ಅತಿ ವಿಶೇಷವೆನಿಸಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಕ ಚಾಲಕರು ಜೊತೆಗಿದ್ದರು.

To Follow DriveSpark On Facebook, Click The Like Button
ಹೇಗೆ ಸಾಧ್ಯವಾಯಿತು?

ಹೇಗೆ ಸಾಧ್ಯವಾಯಿತು?

ಡೈಮ್ಲರ್ ಸ್ವಯಂಚಾಲಿತ ಟ್ರಕ್ ಗಳಲ್ಲಿ ಸೆಲ್ಪ್ ರಾಡಾರ್ ಸಿಸ್ಟಂ ಜೊತೆಗೆ ಕ್ಯಾಮೆರಾ, ಆಕ್ಟಿವ್ ಸ್ಪೀಡ್ ರೆಗ್ಯೂಲೇಟರ್ ಮುಂತಾದ ತಂತ್ರಜ್ಞಾನಗಳನ್ನು ಜೋಡಣೆ ಮಾಡಲಾಗಿದೆ.

ಚಾಲಕನಿಲ್ಲದೆ 14 ಕೀ.ಮೀ. ಸಂಚರಿಸಿದ ಡೈಮ್ಲರ್ ಟ್ರಕ್!

ಜರ್ಮನಿಯ ವಿಶ್ವ ಪ್ರಾಖ್ಯಾತ ಆಟೋಬಾನ್ ಹೈವೇಯಲ್ಲಿ (ಎ8) ಪ್ರಾಯೋಗಿಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಯಿತು [ಆಟೋಬಾನ್ ಹೆದ್ದಾರಿಯ ವಿಶೇಷತೆ ಏನು?]. ಅಲ್ಲದೆ ಸಂಸ್ಥೆಯ ಹೈವೇ ಪೈಲಟ್ ವ್ಯವಸ್ಥೆಯನ್ನು ಜೋಡಣೆ ಮಾಡಲಾಗಿತ್ತು.

ಚಾಲಕನಿಲ್ಲದೆ 14 ಕೀ.ಮೀ. ಸಂಚರಿಸಿದ ಡೈಮ್ಲರ್ ಟ್ರಕ್!

ಒಂದೆಡೆ ಚಾಲಕ ರಹಿತ ಸ್ವಯಂಚಾಲಿತ ಕಾರುಗಳನ್ನು ಸರ್ಚ್ ಎಂಜಿನ್ ದೈತ್ಯ ಗೂಗಲ್ ಅಭಿವೃದ್ಧಿಪಡಿಸುತ್ತಿರಬಹುದು [ಇನ್ನೈದು ವರ್ಷದೊಳಗೆ ಗೂಗಲ್ ಕಾರು ನನಸು]. ಆದರೆ ಸ್ಟುಟ್‌ಗಾರ್ಟ್‌ನಿಂದ ಡೆಂಕನ್‌ಡಾರ್ಫ್ ವರೆಗೆ ಡೈಮ್ಲರ್ ಹಮ್ಮಿಕೊಂಡಿರುವ ಪ್ರಾಯೋಗಿಕ ಪರೀಕ್ಷೆಯು ಆಟೋ ವಿಶ್ಲೇಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಚಾಲಕನಿಲ್ಲದೆ 14 ಕೀ.ಮೀ. ಸಂಚರಿಸಿದ ಡೈಮ್ಲರ್ ಟ್ರಕ್!

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಲಭವಾಗಿಸುವುದು ಡೈಮ್ಲರ್ ಇರಾದೆಯಾಗಿದೆ. ಸಹಜವಾಗಿಯೇ ಟ್ರಕ್ ಚಾಲಕರು ದಿನ-ರಾತ್ರಿ ಬಹಳ ದೂರದ ವರೆಗೆ ಚಾಲನೆ ಮಾಡಬೇಕಾಗಿರುವುದರಿಂದ ಸಾಕಷ್ಟು ದಣಿವು ಕಾಡುತ್ತದೆ.

ಚಾಲಕನಿಲ್ಲದೆ 14 ಕೀ.ಮೀ. ಸಂಚರಿಸಿದ ಡೈಮ್ಲರ್ ಟ್ರಕ್!

ಡೈಮ್ಲರ್ ಪ್ರಕಾರ, ಸ್ವಯಂಚಾಲಿತ ಟ್ರಕ್ ಆಗಮನದೊಂದಿಗೆ ಚಾಲಕರ ದಣಿವು ಶೇಕಡಾ 25ರಷ್ಟು ಕಡಿಮೆಯಾಗಲಿದೆ. ಅಲ್ಲದೆ ಹೆಚ್ಚಿನ ಭದ್ರತೆಯನ್ನು ಖಾತ್ರಿಪಡಿಸಲಿದೆ.

ಚಾಲಕನಿಲ್ಲದೆ 14 ಕೀ.ಮೀ. ಸಂಚರಿಸಿದ ಡೈಮ್ಲರ್ ಟ್ರಕ್!

ಗೇರ್ ಬದಲಾವಣೆ, ವೇಗವರ್ಧನೆ ಹಾಗೂ ಬ್ರೇಕಿಂಗ್ ಪ್ರಕ್ರಿಯೆ ಸಹ ಸ್ವಯಂಚಾಲಿತವಾಗಿ ನಡೆಯುವುದರಿಂದ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲು ನೆರವಾಗಲಿದೆ.

ಚಾಲಕನಿಲ್ಲದೆ 14 ಕೀ.ಮೀ. ಸಂಚರಿಸಿದ ಡೈಮ್ಲರ್ ಟ್ರಕ್!

ಒಟ್ಟಿನಲ್ಲಿ ಯುರೋಪ್ ಹಾಗೂ ಅಮೆರಿಕಗಳಲ್ಲಾಗಿ ಈಗಾಗಲೇ 20,000 ಕೀ.ಮೀ. ದೂರ ಕ್ರಮಿಸಿರುವ ಡೈಮ್ಲರ್ ಸ್ವಯಂಚಾಲಿತ ಟ್ರಕ್ ಗಳು ಭಾರತವನ್ನು ಪ್ರವೇಶಿಸಿದ್ದಲ್ಲಿ ಹೇಗಿರಬಹುದು? ಇದಕ್ಕೆಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

ಇವನ್ನೂ ಓದಿ

ಇದು ಲ್ಯಾಪ್ ಟಾಪ್ ಅಲ್ಲ ಹಾಗಂದ್ರೆ ಮತ್ತೇನಿದು ? ಮುಂದಕ್ಕೆ ಓದಲು ಇಲ್ಲಿ ಕ್ಲಿಕ್ಕಿಸಿರಿ

English summary
Daimler has tested a self driving truck in Germany under real world traffic conditions. The truck travelled for 14 kilometers, with a driver behind the wheel, but his hands off it.
Story first published: Tuesday, October 6, 2015, 11:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark