ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ಗಾಡಿಗಳಿಗೆ ಬಿತ್ತು ಬ್ರೇಕ್

Written By:

ರಾಷ್ಟ್ರ ರಾಜಧಾನಿಯಂತಹ ಮಹಾನಗರಗಳಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 10 ವರ್ಷಗಿಂತಲೂ ಹಳೆಯದಾದ ಡೀಸೆಲ್ ವಾಹನಗಳ ಪರವಾನಗಿ ರದ್ದುಗೊಳಿಸಲು ನಿರ್ಧರಿಸಿದೆ.

ವಾಯು ಮಾಲಿನ್ಯ ವಿಪರೀತವಾಗಿರುವುದರಿಂದ ತೀವ್ರ ಕಳವಳ ವ್ಯಕ್ತವಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 10 ವರ್ಷಗಿಂತಲೂ ಹಳೆಯ ವಾಹನಗಳನ್ನು ಪಟ್ಟಿ ಮಾಡುವಂತೆಯೂ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ವಾಯು ಮಾಲಿನ್ಯದಲ್ಲಿ ಡೀಸೆಲ್ ವಾಹನಗಳ ಪಾತ್ರ ದೊಡ್ಡದ್ದು ಎಂಬುದು ತಿಳಿದು ಬಂದಿ. ಬ್ರೆಜಿಲ್, ಚೀನಾ, ಡೆನ್ಮಾರ್ಕ್ ಗಳಂತಹ ರಾಷ್ಟ್ರಗಳಲ್ಲಿ ಈ ಸಂಬಂಧ ಸೂಕ್ತ ಕ್ರಮಗೊಳ್ಳಲಾಗಿದ್ದು, ಡೀಸೆಲ್ ವಾಹನಗಳನ್ನು ರದ್ದುಗೊಳಿಸಲಾಗಿದೆ.

ಜಗತ್ತಿನಲ್ಲೇ ಅತ್ಯಂತ ಪರಿಸರ ಮಾಲಿನ್ಯ ನಗರಗಳಲ್ಲಿ ದೆಹಲಿ ಕೂಡಾ ಒಂದು ಎಂಬ ಅಪಖ್ಯಾತಿಗೆ ಪಾತ್ರವಾಗಿದೆ. ಹಾಗಿರುವಾಗ ಪದೇ ಪದೇ ಎಚ್ಚರಿಸಿರುವ ಹೊರತಾಗಿಯೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಖೇದ ವ್ಯಕ್ತಪಡಿಸಿದೆ.

ಇನ್ನೊಂದೆಡೆ ಡೀಸೆಲ್ ವಾಹನಗಳ ಪ್ರವೇಶ ನಿಷೇಧಗೊಳ್ಳುವುದರೊಂದಿಗೆ ವಾಹನ ತಯಾರಕ ಸಂಸ್ಥೆಗಳಿಗೆ ಭಾರಿ ಲಾಭವುಂಟಾಗಲಿದ್ದು, ಇದು ನೂತನ ವಾಹನ ಖರೀದಿಯನ್ನು ಮತ್ತಷ್ಟು ಪ್ರೋತ್ಸಾಹಿಸಲಿದೆ.

English summary
Now the Delhi Government has announced that it will not allow diesel powered vehicles older than ten years to run on their streets. The ban has been set into immediate effect on all old diesel vehicles.
Story first published: Thursday, April 9, 2015, 9:07 [IST]
Please Wait while comments are loading...

Latest Photos