ಡಿಸ್ಕವರ್ ಸ್ಪೋರ್ಟ್: ಬಿಡುಗಡೆಗೂ ಮೊದಲೇ 200 ಬುಕ್ಕಿಂಗ್

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ಮೂಲದ ಐಕಾನಿಕ್ ಕಂಪನಿ ಲ್ಯಾಂಡ್ ರೋವರ್ ನಿಕಟ ಭವಿಷ್ಯದಲ್ಲೇ ಭಾರತದಲ್ಲಿ ಡಿಸ್ಕವರ್ ಸ್ಪೋರ್ಟ್ ಐಷಾರಾಮಿ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆ ಮಾಡಲಿದೆ.

ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಬ್ರಿಟನ್ ನ ಈ ಐಕಾನಿಕ್ ಮಾದರಿಯು ಬಿಡುಗಡೆಗೂ ಮುಂಚಿತವಾಗಿ 200ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿದೆ.

ಡಿಸ್ಕವರಿ ಸ್ಪೋರ್ಟ್

ನಿಮ್ಮ ಮಾಹಿತಿಗಾಗಿ, ಲ್ಯಾಂಡ್ ರೋವರ್ ಡಿಸ್ಕವರ್ ಸ್ಪೋರ್ಟ್ ಐಷಾರಾಮಿ ಎಸ್‌ಯುವಿ ಮುಂಬರುವ 2015 ಸೆಪ್ಟೆಂಬರ್ 02ರಂದು ಭಾರತದಲ್ಲಿ ಭರ್ಜರಿ ಬಿಡುಗಡೆ ಭಾಗ್ಯ ಕಾಣಲಿದೆ.

ಸದ್ಯ ಲ್ಯಾಂಡ್ ರೋವರ್ ದೇಶದ್ಯಂತ 22ರಷ್ಟು ಅಧಿಕೃತ ವಿತರಕ ಜಾಲವನ್ನು ಹೊಂದಿದೆ. ಅಂತೆಯೇ ಬೆಲೆ ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಡಿಸ್ಕವರಿ ಸ್ಪೋರ್ಟ್

ಅಂತರಾಷ್ಟ್ರೀಯ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಮಾರಾಟದಲ್ಲಿರುವ ಲ್ಯಾಂಡ್ ರೋವರ್ ಟು ವೀಲ್ ಹಾಗೂ ಫೋರ್ ವೀಲ್ ಚಾಲನಾ ಆಯ್ಕೆಯಲ್ಲಿ ಲಭ್ಯವಾಗಲಿದೆ. ಅಲ್ಲದೆ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದೆ.

English summary
Discovery Sport Has Already 200 Bookings At Land Rover India
Story first published: Tuesday, August 18, 2015, 7:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark