ಎಪ್ರಿಲ್ ತಿಂಗಳಿಂದ ದುಬಾರಿಯಾಗಲಿದೆ ಹೋಂಡಾ ಕಾರು

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಶಿಪ್ರ ಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ಹೋಂಡಾ ಕಾರುಗಳು ಸದ್ಯದಲ್ಲೇ ದುಬಾರಿಯಾಗಲಿದೆ. ಹೌದು, ಮುಂಬರುವ ಎಪ್ರಿಲ್ ತಿಂಗಳಿಂದ ತನ್ನೆಲ್ಲ ಶ್ರೇಣಿಯ ಮಾದರಿಗಳಿಗೆ ಬೆಲೆ ಏರಿಕೆಗೊಳಿಸಲು ಹೋಂಡಾ ಸಂಸ್ಥೆ ನಿರ್ಧರಿಸಿದೆ.

ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಎರಡನೇ ಬಾರಿಗೆ ಹೋಂಡಾ ಬೆಲೆ ಏರಿಕೆ ನೀತಿ ಅನುಸರಿಸುತ್ತಿದೆ. ಇದಕ್ಕೂ ಮೊದಲು ವರ್ಷಾರಂಭದಲ್ಲಷ್ಟೇ ಬೆಲೆ ಏರಿಕೆಗೊಳಿಸಲಾಗಿತ್ತು. ಮೂಲ ಉತ್ಪನ್ನಗಳ ವೆಚ್ಚ ಹೆಚ್ಚಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೋಂಡಾ ಸಂಸ್ಥೆಯು ತನ್ನ ನೀತಿಯನ್ನು ಸಮರ್ಥಿಸಿಕೊಂಡಿದೆ.

honda mobilio

ಹಾಗಿದ್ದರೂ ಯಾವೆಲ್ಲ ಮಾದರಿಗಳಿಗೆ ಎಷ್ಟೆಷ್ಟು ಬೆಲೆ ಏರಿಕೆ ಅನ್ವಯವಾಗಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಹೋಂಡಾದ ಜನಪ್ರಿಯ ಮಾದರಿಗಳಾದ ಅಮೇಜ್, ಸಿಟಿ, ಮೊಬಿಲಿಯೊ, ಬ್ರಿಯೊಗಳಂತಹ ಮಾದರಿಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಇದಲ್ಲದೆ ಸಿಆರ್-ವಿ ಕ್ರೀಡಾ ಬಳಕೆಯ ವಾಹನವನ್ನು ಹೋಂಡಾ ಸಂಸ್ಥೆಯು ದೇಶದಲ್ಲಿ ಮಾರಾಟ ಮಾಡುತ್ತಿದೆ. ಅಷ್ಟಕ್ಕೂ ಹೋಂಡಾ ಬೆಲೆ ಏರಿಕೆ ನೀತಿ ನ್ಯಾಯವೇ? ಬಜೆಟ್ ನಲ್ಲಿ ಘೋಷಿಸಲಾದ ಅಬಕಾರಿ ಸುಂಕ ನೀತಿ ಹೋಂಡಾ ಕಾರುಗಳ ಬೆಲೆ ಮಾರಾಕ ಪರಿಣಾಮ ಬೀರಿತೇ? ಬೆಲೆ ಏರಿಕೆಯ ನಡುವೆಯು ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಹೋಂಡಾ ಸಂಸ್ಥೆಗೆ ಸಾಧ್ಯವೇ? ಈ ಎಲ್ಲದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮುಖಾಂತರ ಚರ್ಚಿಸಿರಿ.

Most Read Articles

Kannada
English summary
Honda India has an array of product on offer in India, they had recently hiked prices of their vehicles in January, 2015. Now they are mulling a second price hike, which will go in effect by April, 2015
Story first published: Tuesday, March 24, 2015, 12:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X