ಕ್ರಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ಐಎಕ್ಸ್‌25ಗೆ ಪಂಚತಾರಾ ಗೌರವ

By Nagaraja

ಆಧುನಿಕ ಜಗತ್ತಿನಲ್ಲಿ ಕ್ರಾಶ್ ಟೆಸ್ಟ್ ಅತಿ ಹೆಚ್ಚು ಮಹತ್ವವನ್ನು ಗಿಟ್ಟಿಸಿಕೊಂಡಿದೆ. ವಿದೇಶದಲ್ಲಂತೂ ನಿರ್ದಿಷ್ಠ ಮಾದರಿಯ ಬಿಡುಗಡೆಗೂ ಮುನ್ನ ಅಪಘಾತ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತದೆ.

ಈಗ ಹ್ಯುಂಡೈ ಬಹುನಿರೀಕ್ಷಿತ ಮಾದರಿಯಾಗಿರುವ ಐಎಕ್ಸ್25 ಕ್ರಾಶ್ ಟೆಸ್ಟ್ ಪರೀಕ್ಷೆಯಲ್ಲಿ ಪಂಚತಾರೆ ಗಿಟ್ಟಿಸಿಕೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

hyundai ix25

ಹಲವಾರು ಕಾರಣಗಳಿಂದಾಗಿ ಈ ಕಾಂಪಾಕ್ಟ್ ಎಸ್‌ಯುವಿ ಅಪಘಾತ ಪರೀಕ್ಷೆ ಭಾರತೀಯರ ಪಾಲಿಗೂ ಮಹತ್ವದೆನಿಸಿದೆ. ಯಾಕೆಂದರೆ ಪ್ರಸಕ್ತ ಸಾಲಿನಲ್ಲೇ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯಾಗಿರುವ ಹ್ಯುಂಡೈ ಐಎಕ್ಸ್25 ಮಾದರಿಯನ್ನು ದೇಶದ ಮಾರುಕಟ್ಟೆಗೂ ಬಿಡುಗಡೆಗೊಳಿಸಲಿದೆ.

ನಿಮ್ಮ ಮಾಹಿತಿಗಾಗಿ ಇತ್ತೀಚೆಗಷ್ಟೇ ಹ್ಯುಂಡೈ ಐಎಕ್ಸ್25 ಚೀನಾ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಇದರಂತೆ ನಡೆಸಲಾದ ಚೀನಾ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಸಿ-ಎನ್‌ಸಿಎಪಿ) ಕ್ರಾಶ್ ಟೆಸ್ಟ್‌ನಲ್ಲಿ ಐಎಕ್ಸ್25 ಫೈವ್ ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅಪಘಾತ ಪರೀಕ್ಷೆ ಮುಖ್ಯಾಂಶಗಳು
ಒಂದರ ಮೇಲೊಂದು ಢಿಕ್ಕಿಯಲ್ಲಿ ಶೇ.100ರಷ್ಟು ಪರಿಪೂರ್ಣತೆ,
ಬದಿಯಲ್ಲಿ ಢಿಕ್ಕಿ,
ಮುಂಭಾಗದ ಢಿಕ್ಕಿಯಲ್ಲೂ ಪ್ರಭಾವಿ

ಗಂಟೆಗೆ 50 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪ್ರಸ್ತುತ ಐಎಕ್ಸ್25 ಕಾರು, ಮುಂಭಾಗದ ಢಿಕ್ಕಿ ಪರೀಕ್ಷೆಯಲ್ಲಿ ಒಟ್ಟು 18ರಲ್ಲಿ 15.89 ಅಂಕ ಹಾಗೂ ಬದಿಯ ಇಂಪಾಕ್ಟ್ ಪರೀಕ್ಷೆಯಲ್ಲಿ 18ರಲ್ಲಿ 18 ಅಂಕ ಗಿಟ್ಟಿಸಿಕೊಂಡಿತ್ತು.

Most Read Articles

Kannada
English summary
China New Car Assessment Program (C-NCAP) has awarded the Hyundai ix25 five stars in terms of safety. The ix25 was recently launched in China.
Story first published: Tuesday, January 6, 2015, 15:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X