ಹ್ಯುಂಡೈ ಕ್ರೆಟಾ ಮಿನಿ ಎಸ್‌ಯುವಿ ವಿಶಿಷ್ಟತೆಗಳೇನು?

By Nagaraja

ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಗೆ ಹೊಸ ಹೊಸ ಮಾದರಿಗಳು ಪರಿಚಯವಾಗುತ್ತಲೇ ಇವೆ. ಪ್ರಸ್ತುತ ಕ್ರೀಡಾ ಬಳಕೆಯ ವಾಹನಗಳಿಗೆ ಅತಿ ಹೆಚ್ಚು ಬೇಡಿಕೆ ಕಂಡುಬರುತ್ತಿದೆ.

ಇದನ್ನೇ ಮನಗಂಡಿರುವ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಸಂಸ್ಥೆಯು, ಅತಿ ಶೀಘ್ರದಲ್ಲೇ (2015 ಜುಲೈ 21) ಹೊಚ್ಚ ಹೊಸ ಕ್ರೆಟಾ ಕಾಂಪಾಕ್ಟ್ ಎಸ್‌ಯುವಿ (ಸಣ್ಣ ಎಸ್‌ಯುವಿ) ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದರಂತೆ ವಾಹನ ಉತ್ಸಾಹಿಗಳೇನು ನಿರೀಕ್ಷೆ ಮಾಡಬುಹುದು ಎಂಬುದನ್ನು ನಾವಿಲ್ಲಿ ಹೇಳಿಕೊಡಲಿದ್ದೇವೆ.

ವಿನ್ಯಾಸ ಸ್ಪೂರ್ತಿ

ವಿನ್ಯಾಸ ಸ್ಪೂರ್ತಿ

ಹ್ಯುಂಡೈ ಕ್ರೆಟಾ ಒಂದು ಜಾಗತಿಕ ಎಸ್ ಯುವಿ ಆಗಿದ್ದು, ಕೇವಲ ಭಾರತೀಯ ಮಾರುಕಟ್ಟೆಯನ್ನಷ್ಟೇ ಗುರಿ ಮಾಡಲಾಗುವುದಿಲ್ಲ. ಪ್ರಸ್ತುತ ಕಾರಿನಲ್ಲಿ ಫ್ಲೂಯಿಡಿಕ್ ವಿನ್ಯಾಸ ತತ್ವಶಾಸ್ತ್ರವನ್ನು (Fluidic Sculpture 2.0) ಅನುಸರಿಸಲಾಗಿದೆ. ಇದರಂತೆ ಮುಂದುವರಿದ ಎಂಜಿನಿಯರಿಂಗ್ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ. ಅಂತೆಯೇ ಗರಿಷ್ಠ ಗುಣಮಟ್ಟದ ದೇಹದ ಬಿಗಿತ, ರಚನಾತ್ಮಕತೆ ಕಾಪಾಡಲು ಅಲ್ಟ್ರಾ-ಹೈ ಟೆನ್ಸಿಲ್ ಸ್ಟೀಲ್ ಉಪಕರಣಗಳನ್ನು ಬಳಕೆ ಮಾಡಲಾಗಿದೆ.

ಹೈವ್ ರಚನೆ

ಹೈವ್ ರಚನೆ

ನೂತನ ಹ್ಯುಂಡೈ ಕ್ರೆಟಾ 'ಹೈವ್ ರಚನೆ'ಯು (Hive Structure) ಹಗುರ ಭಾರದ ದೇಹ ವಿನ್ಯಾಸವನ್ನು ಪಡೆದುಕೊಂಡಿದೆ. ಇನ್ನು ಪ್ರಬಲ ದೇಹ ವಿನ್ಯಾಸವು ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ. ಒಟ್ಟಾರೆಯಾಗಿ ಶಕ್ತಿ ಹಾಗೂ ದೃಢತೆಯಲ್ಲಿ ಹ್ಯುಂಡೈ ಕ್ರೆಟಾ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಲಿದೆ.

ರಿಂಗ್ ಆಕಾರದ ಚೌಕಟ್ಟು

ರಿಂಗ್ ಆಕಾರದ ಚೌಕಟ್ಟು

ಸಂಸ್ಥೆ ಹೇಳುವ ಪ್ರಕಾರ ರಿಂಗ್ ಆಕಾರದ ಫ್ರೇಮ್ ಅಥವಾ ಚೌಕಟ್ಟು ಕ್ರೆಟಾ ಕ್ರೀಡಾ ಬಳಕೆಯ ವಾಹನಕ್ಕೆ ಎಲ್ಲ ಬದಿಗಳಿಂತಲೂ ಸಂಪೂರ್ಣ ಭದ್ರತೆಯನ್ನು ಒದಗಿಸಲಿದೆ. ಕೇಂದ್ರ ಪಿಲ್ಲರ್, ಬಾಡಿ ಸೈಡ್ ಫ್ರೇಮ್ ಸಹಿತ ಪ್ರತಿಯೊಂದು ಪಿಲ್ಲರ್ ರಿಂಗ್ ಆಕಾರದ ರಚನೆಯನ್ನು ಪಡೆದುಕೊಂಡಿದೆ. ಈ ರೀತಿಯಲ್ಲಿ ಸುರಕ್ಷಿತ ಕವಚದಂತೆ ವಿನ್ಯಾಸ ಮಾಡಲಾಗಿದೆ. ಇವೆಲ್ಲವೂ ಅತ್ಯುತ್ತಮ ಹ್ಯಾಂಡ್ಲಿಂಗ್ ಹಾಗೂ ಗರಿಷ್ಠ ಚಾಲನಾ ಗುಣಮಟ್ಟತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ಎಂಜಿನ್, ಗೇರ್ ಬಾಕ್ಸ್

ಎಂಜಿನ್, ಗೇರ್ ಬಾಕ್ಸ್

ನೂತನ ಕ್ರೆಟಾ ಅತ್ಯಂತ ಶಕ್ತಿಶಾಲಿ ಪೆಟ್ರೋಲ್ 1.6 ಡ್ಯುಯಲ್ ವಿಟಿವಿಟಿ (VTVT) ಮತ್ತು ಯು2 1.4 ಸಿಆರ್‌ಡಿಐ ಮತ್ತು ಯು2 1.6 ಸಿಆರ್‌ಡಿಐ ವಿಜಿಟಿ (CRDi VGT) ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಎಂಜಿನ್ ಗಳನ್ನು ಗರಿಷ್ಠ ಇಂಧನ ಕ್ಷಮತೆಗಾಗಿ ವಿಶೇಷವಾಗಿ ಟ್ಯೂನ್ ಮಾಡಲಾಗುವುದು. ಅಂತೆಯೇ 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ (1.6 ಸಿಆರ್‌ಡಿಐ ವಿಜಿಟಿ) ಆಯ್ಕೆಯಲ್ಲೂ ಲಭ್ಯವಿರಲಿದೆ. ಈ ಪೈಕಿ 1.6 ಸಿಆರ್ ಡಿಐ ವಿಜಿಟಿ ಡೀಸೆಲ್ ಈ ವಿಭಾಗದಲ್ಲಿ ಭಾರತೀಯರಿಗೆ ಹೊಸ ಅನುಭವವಾಗಲಿದೆ.

1.6 ಗಮ್ಮಾ (Gamma) ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ - 123 ಅಶ್ವಶಕ್ತಿ

1.6 ಸಿಆರ್‌ಡಿಐ ವಿಜಿಟಿ (ಮ್ಯಾನುವಲ್/ಆಟೋಮ್ಯಾಟಿಕ್) - 128 ಅಶ್ವಶಕ್ತಿ

ಸ್ಟೈಲಿಂಗ್

ಸ್ಟೈಲಿಂಗ್

  • 17 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್,
  • ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
  • ಎಲ್‌ಇಡಿ ಸ್ಥಾನಿಕ ಲ್ಯಾಂಪ್,
  • ಸ್ಥಿರ ಬಾಗುವಿಕೆ,
  • ಲೆಥರ್ ಸೀಟು,
  • ಶಾರ್ಕ್ ಫಿನ್ ಆಂಟಿನಾ
  • ಹೈ-ಟೆಕ್ ವೈಶಿಷ್ಟ್ಯ

    ಹೈ-ಟೆಕ್ ವೈಶಿಷ್ಟ್ಯ

    • ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್),
    • 5 ಇಂಚಿನ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ,
    • ಸೂಪರ್ ವಿಷನ್ ಕ್ಲಸ್ಟರ್,
    • ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್,
    • ಅನುಕೂಲತೆ

      ಅನುಕೂಲತೆ

      • ಎಫ್‌ಎಟಿಸಿ (FATC) ಜೊತೆ ಕ್ಲಸ್ಟರ್ ಐಯನೈಜರ್ (Cluster ionizer),
      • ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,
      • ಹಿಂದುಗಡೆಯೂ ಎಸಿ ವೆಂಟ್ಸ್,
      • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
      • 1 ಜಿಬಿ ಆಂತರಿಕ ಮೆಮರಿ
      • ಸುರಕ್ಷತೆ

        ಸುರಕ್ಷತೆ

        • ಡ್ಯುಯಲ್ ಏರ್ ಬ್ಯಾಗ್,
        • ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್,
        • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
        • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
        • ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ಇಎಸ್‌ಸಿ),
        • ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ಎಂ),
        • ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ)
        • ನಿಮ್ಮ ನಿರೀಕ್ಷೆ ಏನು?

          ನಿಮ್ಮ ನಿರೀಕ್ಷೆ ಏನು?

          ಅಂತಿಮವಾಗಿ ಎಲ್ಲ ಹೊಸತನದಿಂದ ಕೂಡಿರುವ ಹ್ಯುಂಡೈ ಕ್ರೆಟಾ, ಪ್ರಮುಖವಾಗಿಯೂ ಮಹೀಂದ್ರ ಸ್ಕಾರ್ಪಿಯೊ, ರೆನೊ ಡಸ್ಟರ್, ನಿಸ್ಸಾನ್ ಟೆರನೊ, ಫೋರ್ಡ್ ಇಕೊಸ್ಪೋರ್ಟ್ ಹಾಗೂ ಟಾಟಾ ಸಫಾರಿ ಸ್ಟ್ರೋಮ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ. ಈಗ ಹೊಸ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

Most Read Articles

Kannada
English summary
Hyundai ‘s New Global SUV “Creta” inspired by ‘Fluidic Sculpture 2.0’ design philosophy
Story first published: Saturday, June 27, 2015, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X