ಎಲ್ಲವೂ ಹೊಸದು; ಇದುವೇ ಡಸ್ಟರ್ ಆಟೋಮ್ಯಾಟಿಕ್!

Written By:

ಜರ್ಮನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 66ನೇ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯ ಅಧೀನತೆಯಲ್ಲಿರುವ ಡೇಸಿಯಾ (Dacia) ತನ್ನ ಜನಪ್ರಿಯ ಡಸ್ಟರ್ ಕಾರಿನ ಆಟೋಮ್ಯಾಟಿಕ್ ಮಾದರಿಯನ್ನು ಪರಿಚಯಿಸಿದೆ.

ಪ್ರಸ್ತುತ ಕಾರು ಭಾರತದಲ್ಲಿ ರೆನೊ ಡಸ್ಟರ್ ಹೆಸರಲ್ಲಿ ಮಾರಾಟವಾಗುವುದರಿಂದ ಮುಂದಿನ ದಿನಗಳಲ್ಲಿ ಡಸ್ಟರ್ ಆಟೋಮ್ಯಾಟಿಕ್ ಕಾರನ್ನು ದೇಶದ ಗ್ರಾಹಕರು ನಿರೀಕ್ಷೆ ಮಾಡಬಹುದಾಗಿದೆ.

ಎಲ್ಲವೂ ಹೊಸದು; ಇದುವೇ ಡಸ್ಟರ್ ಆಟೋಮ್ಯಾಟಿಕ್!

2016 ಡೇಸಿಯಾ ಡಸ್ಟರ್ ಹೊರಮೈಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಇದು 16 ಇಂಚುಗಳ ಅಲಾಯ್ ವೀಲ್ ಪಡೆದುಕೊಂಡಿದೆ.

ಎಲ್ಲವೂ ಹೊಸದು; ಇದುವೇ ಡಸ್ಟರ್ ಆಟೋಮ್ಯಾಟಿಕ್!

ಕಾರಿನೊಳಗೆ ಪರಿಷ್ಕೃತ ಮೀಡಿಯಾ ನೇವ್ ಇವಲ್ಯೂಷನ್ ಮಲ್ಟಿಮೀಡಿಯಾ ನೇವಿಗೇಷನ್ ಸಿಸ್ಟಂ ಮತ್ತು ರಿವರ್ಸ್ ಕ್ಯಾಮೆರಾ ಅಸಿಸ್ಟ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಎಲ್ಲವೂ ಹೊಸದು; ಇದುವೇ ಡಸ್ಟರ್ ಆಟೋಮ್ಯಾಟಿಕ್!

ಇದರ 1.6 ಲೀಟರ್ ಫೋರ್ ಸಿಲಿಂಡರ್ ಎಂಜಿನ್ 156 ಎನ್‌ಎಂ ತಿರುಗುಬಲದಲ್ಲಿ 115 ಅಶ್ವಶಕ್ತಿ ಹಾಗೂ 1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್ 260 ಎನ್‌ಎಂ ತಿರುಗುಬಲದಲ್ಲಿ 109 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಎಲ್ಲವೂ ಹೊಸದು; ಇದುವೇ ಡಸ್ಟರ್ ಆಟೋಮ್ಯಾಟಿಕ್!

ಅಲ್ಲದೆ ಫೈವ್ ಹಾಗೂ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಇದೇ ಮೊದಲ ಬಾರಿಗೆ ಈಸಿ-ಆರ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತಿದೆ.

ಎಲ್ಲವೂ ಹೊಸದು; ಇದುವೇ ಡಸ್ಟರ್ ಆಟೋಮ್ಯಾಟಿಕ್!

ಇನ್ನು ಅತ್ಯುತ್ತಮ ಇಂಧನ ಕ್ಷಮತೆಗಾಗಿ ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಆಯ್ಕೆಯನ್ನು ಕೊಡಲಾಗುತ್ತಿದೆ.

Read more on ಡಸ್ಟರ್ duster
English summary
IAA2015: Smoother and smoother with Dacia Duster
Story first published: Wednesday, September 16, 2015, 17:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark