ಬೆಂಗ್ಳೂರು ರಸ್ತೆಗಿಳಿಯಲಿರುವ 25 ಇಸುಝು ಎಸ್‌ಯುವಿಗಳು

Written By:

ಬಲ್ಲ ಮೂಲಗಳ ಪ್ರಕಾರ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಇಸುಝು ಸಂಸ್ಥೆಯು ಬೆಂಗಳೂರು ಮೂಲದ ಟ್ರಾವೆಲ್ ಕಂಪನಿಯಿಂದ 25 ಯುನಿಟ್ ಗಳಷ್ಟು ಕ್ರೀಡಾ ಬಳಕೆಯ ವಾಹನಗಳಿಗೆ ಆರ್ಡರ್ ಗಿಟ್ಟಿಸಿಕೊಂಡಿದೆ.

ಬೆಂಗಳೂರು ತಳಹದಿಯ ಟ್ರಾವೆಲ್ ಓಪರೇಟರ್ ರಮೇಶ್ ಟೂರ್ಸ್ ಆಂಡ್ ಟ್ರಾವೆಲ್ಸ್ 25ರಷ್ಟು ಇಸುಝು ಎಂಯು-7 ಕ್ರೀಡಾ ಬಳಕೆಯ ಕಾರುಗಳಿಗೆ ಆರ್ಡರ್ ನೀಡಿದೆ. ಪ್ರಸ್ತುತ ಕಾರುಗಳನ್ನು ಟ್ರಾವೆಲ್ ಸಂಸ್ಥೆಯು ಬೆಂಗಳೂರಿನ ಮೂಲದ ಜೆಡಬ್ಲ್ಯು ಮಾರಿಯಟ್ ಹೋಟೆಲ್ ಗೆ ವಿತರಿಸಲಿದೆ.

isuzu mu 7 suv

ಅಲ್ಲಿನ ಗ್ರಾಹಕರು ಹೆಚ್ಚಿನ ಸ್ಥಳಾವಕಾಶಯುಕ್ತ ಹಾಗೂ ಆರಾಮದಾಯಕ ಕಾರುಗಳನ್ನು ಬಯಸುತ್ತಿದ್ದಾರೆ. ಇದನ್ನೇ ಒತ್ತಿ ಹೇಳಿರುವ ಇಸುಝು ಮೋಟಾರ್ಸ್ ಇಂಡಿಯಾ ಉಪ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶಿಗೆರು ವಕಬಯಶಿ, ಗರಿಷ್ಠ ಜಾಗ ಹಾಗೂ ಆರಾಮದಾಯಕತೆಯಿಂದ ಇಸುಝು ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಭಾರತದಲ್ಲಿ ವಿತರಕ ಜಾಲವನ್ನು ವಿಸ್ತರಿಸುವ ಯೋಜನೆಯಲ್ಲಿರುವ ಇಸುಝು 2015-16ನೇ ಸಾಲಿನ ಅಂತ್ಯದ ವೇಳೆಗೆ ಮಾರಾಟ ಜಾಲವನ್ನು 60ಕ್ಕೆ ಏರಿಸುವ ಇರಾದೆ ಹೊಂದಿದೆ. ಪ್ರಸ್ತುತ ಇಸುಝು ಎಂಯು-7 ಫಿಲಿಪೈನ್ಸ್, ಚೀನಾ ಹಾಗೂ ಥಾಯ್ಲೆಂಡ್ ಗಳಂತಹ ಏಷ್ಯಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸದ್ಯದಲ್ಲೇ ಮಲೇಷ್ಯಾವನ್ನು ತಲುಪಲಿದೆ. ಇದನ್ನು ಡಿ ಮ್ಯಾಕ್ಸ್ ಪಿಕಪ್ ತಳಹದಿಯಲ್ಲಿ ನಿರ್ಮಿಸಲಾಗಿದೆ.

English summary
Isuzu has just bagged an order of 25 units of its MU-7 SUV from a Bangalore-based travel operator, Ramesh Tours & Travels.
Story first published: Tuesday, March 24, 2015, 9:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark