ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

Written By:

ರಾಜಸ್ತಾನದ ಮರಳುಗಾಡಿನ ಸೌಂದರ್ಯದ ನಡುವೆ ಎದ್ದು ಕಾಣಿಸುತ್ತಿರುವ ಉದೈಪುರ್ ನಗರದಲ್ಲಿ ನೂತನ ಕಾರೊಂದು ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್ ಗಾಗಿ ಸಿದ್ಧಗೊಂಡಿದೆ.

ಅಷ್ಟಕ್ಕೂ ನಮ್ಮ ತಂಡ ಹಮ್ಮಿಕೊಳ್ಳಲಿರುವ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್ ಕಾರು ಯಾವುದೇ ಗೊತ್ತೇ? ಅತಿ ಶೀಘ್ರದಲ್ಲೇ ಈ ಬಹುನಿರೀಕ್ಷಿತ ಕಾರು ಭಾರತ ಮಾರುಕಟ್ಟೆಯನ್ನು ಅಪ್ಪಳಿಸಲಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ಹೌದು, ಮಾಧ್ಯಮ ಮಿತ್ರರಿಗಾಗಿ ಏರ್ಪಡಿಸಿದ್ದ ವಿಶೇಷ ಟೆಸ್ಟ್ ಡ್ರೈವ್ ನಲ್ಲಿ ಪಾಲ್ಗೊಳ್ಳಲು ನಮ್ಮ ತಂಡ ಸಹ ರಾಜಸ್ತಾನವನ್ನು ತಲುಪಿದೆ. ಆ ಬಹು ನಿರೀಕ್ಷಿತ ಕಾರು ಬೇರೆ ಯಾವುದಲ್ಲ ಅದುವೇ ಅತಿ ನೂತನ 'ಫೋರ್ಡ್ ಆಸ್ಪೈರ್'.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ಅತಿ ನೂತನ ಫೋರ್ಡ್ ಆಸ್ಪೈರ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಈ ಸಂಬಂಧ ಮಾಧ್ಯಮ ಮಿತ್ರರಿಗಾಗಿ ಉದೈಪುರ್ ನಲ್ಲಿ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್ ಏರ್ಪಡಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ಇಲ್ಲಿ ಫೋರ್ಡ್ ಆಸ್ಪೈರ್ ಬಗ್ಗೆ ಮಾತನಾಡುವುದಾದ್ದಲ್ಲಿ, ಅಮೆರಿಕ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆ ಫೋರ್ಡ್ ನ ಬಹುನಿರೀಕ್ಷಿತ ಕಾಂಪಾಕ್ಟ್ ಸೆಡಾನ್ ಕಾರು ಇದಾಗಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ಒಮ್ಮೆ ಬಿಡುಗಡೆಯಾದ್ದಲ್ಲಿ ಫೋರ್ಡ್ ಆಸ್ಪೈರ್, ಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹ್ಯುಂಡೈ ಎಕ್ಸ್ ಸೆಂಟ್, ಹೋಂಡಾ ಅಮೇಜ್ ಮತ್ತು ಟಾಟಾ ಜೆಸ್ಟ್ ಗಳಂತಹ ಜನಪ್ರಿಯ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ವಿಶೇಷವೆಂದರೆ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಫೋರ್ಡ್ ನ ನೂತನ ಘಟಕದಿಂದ ಫೋರ್ಡ್ ಆಸ್ಪೈರ್ ನಿರ್ಮಾಣವಾಗಲಿದೆ. ಬಳಿಕ ಇಲ್ಲಿಂದಲೇ ಯುರೋಪ್, ದಕ್ಷಿಣ ಅಮೆರಿಕ ಹಾಗೂ ಲ್ಯಾಟಿನ್ ಅಮೆರಿಕ ರಾಷ್ಟ್ರಗಳಿಗೂ ಫೋರ್ಡ್ ಆಸ್ಪೈರ್ ರಫ್ತು ಮಾಡುವ ಉದ್ದೇಶವನ್ನು ಫೋರ್ಡ್ ಹೊಂದಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ಗುಜರಾತ್ ನ ಸನಂದ್ ಘಟಕದಿಂದ ಹೊರಬರಲಿರುವ ಮೊದಲ ಕಾರು ಇದಾಗಿರಲಿದೆ. ಬರೋಬ್ಬರಿ 468 ಎಕ್ರೆ ಜಾಗದಲ್ಲಿ ಫೋರ್ಡ್ ಸನಂದ್ ಘಟಕ ತಲೆಯೆತ್ತಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ನೂತನ ಫೋರ್ಡ್ ಕಾರಿನಲ್ಲಿ 1.2 ಲೀಟರ್ ಟಿಐವಿಸಿಟಿ ಪೆಟ್ರೋಲ್ 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದೆ. ಇನ್ನು ಫೈವ್ ಸ್ಪೀಡ್ ಮ್ಯಾನುವಲ್ ಜೊತೆಗೆ ಸಿಕ್ಸ್ ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಗಳು ಇದರಲ್ಲಿರಲಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ನೂತನ ಆಸ್ಪೈರ್ ಕಾರಿನಲ್ಲಿ ಫೋರ್ಡ್ ಸಿಂಕ್ (ಎಸ್ ವೈಎನ್ ಸಿ) ಜೊತೆ ಆಪ್ ಲಿಂಕ್ ತಂತ್ರಜ್ಞಾನ ಆಳವಡಿಕೆಯಾಗಲಿದೆ. ಬ್ಲೂಟೂತ್ ಆನ್ ಮಾಡಿ ಫೋನ್ ಗೆ ಸಂಪರ್ಕಿಸುವ ಮೂಲಕ ಹ್ಯಾಂಡ್ ಫ್ರೀಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ಈ ಮೊದಲು ಇಕೊಸ್ಪೋರ್ಟ್ ನಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಎರ್ಮಜನ್ಸಿ ಅಸಿಸ್ಟನ್ಸ್ ಸೇವೆಯು ಹೊಸ ಕಾಂಪಾಕ್ಟ್ ಕಾರಿನಲ್ಲೂ ಲಭ್ಯವಾಗಲಿದೆ ಎಂಬುದು ಧನಾತ್ಮಕ ಅಂಶವಾಗಿದೆ. ಇಲ್ಲಿ ಬ್ಲೂಟೂತ್ ಸಂಪರ್ಕಿತ ಫೋನ್ ಅಪಘಾತ ಸಂದರ್ಭದಲ್ಲಿ ನೆರವಾಗಿ ತುರ್ತು ಸಹಾಯ ಕೇಂದ್ರಗಳಿಗೆ ಸಂದೇಶವನ್ನು ರವಾನಿಸಲಿದ್ದು, ಅಪಘಾತ ನಡೆದ ಸ್ಥಳ ಹಾಗೂ ವಾಹನದ ಬಗೆಗಿನ ಅಗತ್ಯ ಮಾಹಿತಿಗಳನ್ನು ರವಾನಿಸಲಿದೆ.

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್; ಇದ್ಯಾವ ಹೊಸ ಕಾರು?

ಒಟ್ಟಿನಲ್ಲಿ ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್ ವಿಮರ್ಶೆಗಾಗಿ ಕಾದಿರಿ. ಭಾರತ ಮಾರುಕಟ್ಟೆಯಲ್ಲಿ ನೂತನ ಕಾರು ಯಶಸ್ವಿಯಾಗಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

English summary
Latest Driving Aspirations!

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark