ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಫೋರ್ಡ್ ಇಂಡಿಯಾ ಕಂಪನಿಯು ಈ ವರ್ಷ ತನ್ನ ಗ್ರಾಹಕರಿಗಾಗಿ ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಮಿಡ್‌ನೈಟ್ ಸರ್ಪ್ರೈಸ್ ಕ್ಯಾಂಪೇನ್ ಭಾಗವಾಗಿ ಇಂದಿನಿಂದ ಭಾನುವಾರದವರೆಗೆ ಮೂರು ದಿನಗಳ ಕಾಲ ಎಲ್ಲಾ ಫೋರ್ಡ್ ಶೋ ರೂಂಗಳು ಬೆಳಿಗ್ಗೆ 09:00 ರಿಂದ ಮಧ್ಯರಾತ್ರಿಯವರೆಗೆ ತೆರೆದಿರುತ್ತಾರೆ.

ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಫೋರ್ಡ್ ಕಾರುಗಳನ್ನು ಖರೀದಿಸಲು ಗ್ರಾಹಕರು ಯಾವುದೇ ಸಮಯದಲ್ಲಿ ಶೋ ರೂಂಗೆ ಭೇಟಿ ನೀಡಬಹುದು, ಇದರಿಂದಾಗಿ ಫೋರ್ಡ್ ಗ್ರಾಹಕರು ಕಛೇರಿಯ ಅವಧಿಯ ಬಳಿಕ ಅಥವಾ ತಮ್ಮ ಬಿಡುವಿನ ವೇಳೆಯಲ್ಲಿ ಫೋರ್ಡ್ ಶೋ ರೂಂಗಳಿಗೆ ಭೇಟಿ ನೀಡಬಹುದಾಗಿದೆ. ಅಲ್ಲದೇ ಪರ್ಯಾಯವಾಗಿ ಅವರು ಡಯಲ್-ಎ-ಫೋರ್ಡ್ ಸೇವೆ ಅಥವಾ ಬ್ರ್ಯಾಂಡ್‌ನ ವೆಬ್‌ಸೈಟ್ ಮೂಲಕ ಯಾವುದೇ ವಾಹನವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಕಂಪನಿಯು ತನ್ನ ಖರೀದಿದಾರರಿಗೆ ಉಪಯೋಗವಾಗುವಂತಹ ಹಲವಾರು ಕೊಡುಗೆಗಳನ್ನು ನೀಡುತ್ತಿದೆ. ಈ ಅವಧಿಯಲ್ಲಿ ತಮ್ಮ ಕಾರುಗಳನ್ನು ಖರೀದಿಸುವವರು ಡಿಜಿಟಲ್ ಸ್ಕ್ರ್ಯಾಚ್ ಕಾರ್ಡ್ ಪಡೆಯಬಹುದು. ಈ ಸ್ಕ್ರ್ಯಾಚ್ ಕಾರ್ಡ್ ನಲ್ಲಿ ರೂ.25 ಸಾವಿರಗಳವರೆಗಿನ ಗೃಹೋಪಯೋಗಿ ವಸ್ತುಗಳು, ಎಲ್‌ಇಡಿ ಟಿವಿಗಳು, ಏರ್ ಪ್ಯೂರಿಫೈಯರ್, ಸ್ಮಾರ್ಟ್‌ಫೋನ್‌ಗಳು, ಚಿನ್ನದ ನಾಣ್ಯಗಳು ಮತ್ತು ಇತರೆ ಉಡುಗೊರೆಗಳನ್ನು ಕೂಡ ಗೆಲ್ಲುವ ಅವಕಾಶವಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಸ್ಕ್ರ್ಯಾಚ್ ಕಾರ್ಡ್ ಜೊತೆಗೆ, ಡಿಸೆಂಬರ್ ತಿಂಗಳಲ್ಲಿ ವಿತರಣೆಯನ್ನು ತೆಗೆದುಕೊಳ್ಳುವ ಗ್ರಾಹಕರು ರೂ.5 ಲಕ್ಷ ಮೌಲ್ಯದ ಲಕ್ಕಿ ಡ್ರಾ ಬಹುಮಾನ ಗೆಲ್ಲುವ ಅವಕಾಶವಿದೆ. ವರ್ಷಾಂತ್ಯದ ಮಾರಾಟಕ್ಕಾಗಿ ಹೆಚ್ಚಿನ ಖರೀದಿದಾರರನ್ನು ಬ್ರ್ಯಾಂಡ್‌ಗೆ ಆಕರ್ಷಿಸುವ ಗುರಿ ಹೊಂದಿದೆ.

ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಫೋರ್ಡ್ ಇಂಡಿಯಾ ಮುಕ್ತ ಮಾಲೀಕತ್ವದ ಅನುಭವವನ್ನು ನೀಡಲು ಕಂಪನಿಯು ಯೋಜಿಸಿದೆ. ಬ್ರ್ಯಾಂಡ್ ಇತ್ತೀಚೆಗೆ ಮಾರಾಟದ ನಂತರದ ಹೊಸ ‘ಸರ್ವಿಸ್ ಪ್ರೈಸ್ ಕ್ಯಾಲ್ಕುಲೇಟರ್' ಎಂಬ ಸೇವೆಯನ್ನು ಪರಿಚಯಿಸಿದೆ, ಇದರ ಪ್ರಯೋಜನವೆಂದರೆ ಫೋರ್ಡ್ ಕಾರು ಮಾಲೀಕರು ಡೀಲರುಗಳನ್ನು ಭೇಟಿ ಮಾಡದೆ ತಮ್ಮ ವಾಹನಗಳ ಸರ್ವಿಸ್ ಮತ್ತು ಪಾರ್ಟ್ಸ್ ವೆಚ್ಚವನ್ನು ಕ್ಯಾಲ್ಕುಲೇಟರ್ ಮಾಡಲು ಅನುವು ಮಾಡಿಕೊಡುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಮಾರ್ಕೆಟಿಂಗ್, ಸೇಲ್ಸ್ & ಸರ್ವಿಸ್ - ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ ಅವರು ಮಾತನಾಡಿ, ಮಿಡ್‌ನೈಟ್ ಸರ್ಪ್ರೈಸ್ ಕ್ಯಾಂಪೇನ್ ಮೂಲಕ ಗ್ರಾಹಕರು ಅವರು ಖರೀದಿಸುವ ಪ್ರತಿ ಗ್ರಾಹಕರು ಭರ್ಜರಿ ಆಫರ್ ಅನ್ನು ಪಡೆಯಬಹುದಾಗಿದೆ.

ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಅಲ್ಲದೇ ಇಂತಹ ಸಂಕಷ್ಟದ ಸಮಯದಲ್ಲಿ ಪೋರ್ಡ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ನಾವು ಆದ್ಯತೆ ನೀಡಿದ್ದೇವೆ. ಇದರಿಂದ ಗ್ರಾಹಕರು ಆನ್‌ಲೈನ್ ಬುಕ್ಕಿಂಗ್ ಪೋರ್ಟಲ್ ಅನ್ನು ಬಳಿಸಿ ಅಥವಾ ಟೋಲ್-ಫ್ರೀ 1800-419-3000 ಸಂಖ್ಯೆಗೆ ಕರೆ ಮಾಡಿ ತಮ್ಮ ನೆಚ್ಚಿನ ಪೋರ್ಡ್ ಕಾರನ್ನು ಸ್ವಂತವಾಗಿಸಬಹುದು ಎಂದು ಹೇಳಿದರು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಫೋರ್ಡ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಫೀಗೋ, ಫ್ರೀಸ್ಟೈಲ್, ಆಸ್ಪೈರ್, ಇಕೋಸ್ಪೋರ್ಟ್, ಎಂಡೀವರ್ ಮತ್ತು ಮಸ್ಟಾಂಗ್ ಪರ್ಫಾರ್ಮೆನ್ಸ್ ಸ್ಪೋರ್ಟ್ಸ್ ಅನ್ನು ಮಾರಾಟ ಮಾಡುತ್ತಿದ್ದಾರೆ. ಮಿಡ್‌ನೈಟ್ ಸರ್ಪ್ರೈಸ್ ಕ್ಯಾಂಪೇನ್ ಆಫರ್ ಗಳು ಫೋರ್ಡ್ ಕಂಪನಿಯ ಎಲ್ಲಾ ವಾಹನಗಳಿಗೆ ಲಭ್ಯವಿದೆ.

ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನ- ಫೋರ್ಡ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಲು ಫೋರ್ಡ್ ಹೊಸ ಕೊಡುಗೆ ಯೋಜನೆಯನ್ನು ಪರಿಚಯಿಸಿದೆ. ಮಿಡ್‌ನೈಟ್ ಸರ್ಪ್ರೈಸ್ ಅಭಿಯಾನದ ಮೂಲಕ ನಿಮ್ಮ ಬಿಡುವಿನ ಯಾವುದೇ ಸಮಯದಲ್ಲಿಯು ಪೋರ್ಡ್ ಕಾರನ್ನು ಖರೀದಿಸಲು ಡೀಲರ್ ಬಳಿ ತೆರಳಬಹುದು ಅಥವಾ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
Ford Cars Midnight Surprise Campaign Introduced In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X